ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕ ರಾಜ್ಯ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ

ಹನೂರು:ನೊಂದವರ ಧ್ವನಿ ಕೇಳುವುದಕ್ಕೆ ಸಹಕರಿಸುವುದು ಕರ್ನಾಟಕ ರಾಜ್ಯ ರೈತ ಸಂಘಟನೆ ಮಾತ್ರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸರ್ವೋದಯ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಪ್ರಸನ್ನ ಗೌಡ ತಿಳಿಸಿದರು.
ತಾಲೂಕಿನ ಗಡಿಯಂಚಿನ ಹೂಗ್ಯಂ ಗ್ರಾ.ಪಂ ವ್ಯಾಪ್ತಿಯ ನೆಲ್ಲೂರು ಗ್ರಾಮದಲ್ಲಿ ನೂತನವಾಗಿ ಗ್ರಾಮ ಘಟಕದ ನಾಮಫಲಕ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿ,
ಮಾತನಾಡಿದ ಅವರು ಕಷ್ಟದಲ್ಲಿ ನೊಂದವರ ಧ್ವನಿ ಕೇಳಿಸಿ ಅವರ ಕಷ್ಟವನ್ನ ತೀರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘಟನೆಯಾಗಿದೆ.ಒಗ್ಗಟ್ಟಾಗಿ ಇದ್ದರೆ ನಮ್ಮ ಸಮಸ್ಯೆಗಳನ್ನ ನಮ್ಮ ಸಂಘಟನೆಯ ಮೂಲಕ ಬಗೆಹರಿಸಿಕೊಳ್ಳಬೇಕು.ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಎರಡು ಕಣ್ಣಿದ್ದಂತೆ.
ಗ್ರಾಮ ಘಟಕದ ಚೆನ್ನಾಗಿದ್ದರೆ,ತಾಲ್ಲೂಕು,ಜಿಲ್ಲಾ, ರಾಜ್ಯ ಘಟಕಗಳು ಚೆನ್ನಾಗಿರುತ್ತದೆ.ಇದು ವ್ಯಕ್ತಿ ಆದಾರಿತ ಸಂಘಟನೆಯಲ್ಲ ಯಾವ ಸರ್ಕಾರವು ಏನು ಮಾಡಿಲ್ಲ,ಎಲ್ಲಾ ರೈತ ಸಂಘಟನೆಯಿಂದ ಮಾತ್ರ ಸಾಧ್ಯ.ರೈತ ಸಂಘ ರೈತರ ಕಷ್ಟ ಕೇಳುವುದರ ಜೊತೆಗೆ, ಭ್ರಷ್ಟಾಚಾರ,ಅರಣ್ಯ,ಅಕ್ರಮ ಚಟುವಟಿಕೆ ವಿರುದ್ಧ ರೈತ ಸಂಘಟನೆ ನಿಂತಿದೆ.ಇವೆಲ್ಲಾ ಯಾರಪ್ಪನ ಸ್ವತ್ತು ಅಲ್ಲ,ಇದೆಲ್ಲಾ ರೈತರದ್ದೇ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ರೈತ ಸಂಘಟನೆ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಸುತ್ತದೆ.ಈ ಸಂಘದಲ್ಲಿ ಅಧ್ಯಕ್ಷರ ಪಾತ್ರ ಬಹಳ ಮುಖ್ಯವಾಗಿದೆ.ನಮ್ಮ ಸಮಸ್ಯೆಯನ್ನ ನಮ್ಮ ಸಂಘಟನೆ ಮೂಲಕ ಬಗೆಹರಿಸಿ ಕೊಳ್ಳಬೇಕು.ರೈತರು ಬೆಳೆದ ಬೆಳೆಗಳನ್ನ ಕಾಡು ಪ್ರಾಣಿಗಳು ನಾಶ ಪಡಿಸಿದರೆ ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ನಮ್ಮ ರೈತ ಸಂಘಟನೆ ಮೂಲಕ ಎಂದು ಹೇಳಿದರು.
43 ವರ್ಷಗಳ ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಹುಟ್ಟಿದೆ ಯಾವುದೇ ರಾಜಕೀಯ ಸರ್ಕಾರ ಇದ್ದರು ವಿರೋಧ ಪಕ್ಷವಾಗಿ ರೈತ ಸಂಘಟನೆ ಕೆಲಸ ಮಾಡುತ್ತದೆ ಎಂದು ಗೌಡೇಗೌಡ ತಿಳಿಸಿದರು.
ನೂತನ ಪದಾಧಿಕಾರಿಗಳು:ಗೌರಾವಧ್ಯಕ್ಷ ಅಂಗು ರಾಜು,ಅಧ್ಯಕ್ಷ ಸೇಂದಿಲ್,ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ವಿಜಯ್ ಕುಮಾರ್,ಸಹ ಕಾರ್ಯದರ್ಶಿ ರವಿ,ಖಜಾಂಚಿ ಈಶ್ವರ ಮೂರ್ತಿ,ಸಂಘಟನಾ ಕಾರ್ಯದರ್ಶಿ ಶಿವಕುಮಾರ್,ಸದಸ್ಯರುಗಳಾಗಿ ವೇಲು, ಪಳನಿ ಸ್ವಾಮಿ,ವೇಲುಸ್ವಾಮಿ,ಕುಪ್ಪರಾಜು,ಗೋವಿಂದ ರಾಜು,ಕನಕರಾಜು,ಧನರಾಜು,ಹಾಗೂ 60 ಕ್ಕೂ ಹೆಚ್ಚು ಜನರು ಸದಸ್ಯರಾಗಿ ಆಯ್ಕೆಯಾಗಿ ನಂತರ ಶಾಲು ದೀಕ್ಷೆ ಪಡೆದುಕೊಂಡರು.

ನೆಲ್ಲೂರು ಗ್ರಾಮದ ಸಮಸ್ಯೆಗಳು:

  • ಈ ಗ್ರಾಮದ ಅಭಿವೃದ್ಧಿ ಕುಂಠಿತವಾಗಿದೆ.
  • ಈ ಭಾಗದಲ್ಲಿ ಹೆಚ್ಚು ಕೃಷಿ ಅವಲಂಬಿತವಾಗಿದ್ದಾರೆ.
  • ಕೃಷಿ ಇಲಾಖೆಯ ಅಧಿಕಾರಿಗಳು ನಮ್ಮ ಭಾಗಕ್ಕೆ ಯಾರು ಎಂದು ತಿಳಿದಿಲ್ಲ.
  • ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಯಿಂದ ಸರಿಯಾದ ರೀತಿಯಲ್ಲಿ ಸೌಲಭ್ಯ ಸಿಗುತ್ತಿಲ್ಲ.
  • ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಮೇಳ ನಡೆದರೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡುವುದಿಲ್ಲ.
  • ಕಾಡು ಪ್ರಾಣಿಗಳನ್ನು ತಡೆಯಲು ಅರಣ್ಯ ಇಲಾಖೆ ವಿಫಲ.
  • ಅರಣ್ಯ ಇಲಾಖೆಯವರು ರೈಲ್ವೆ ಕಂಬಿ ಅಳವಡಿಸಿಕೊಡಬೇಕು.
  • ರೈತ ಸಂಪರ್ಕ ಕೇಂದ್ರ ತೆರೆಯಬೇಕು.

ಇದೇ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ,ಉಪಾಧ್ಯಕ್ಷ ಗೌಡೇಗೌಡ,ಕೊಳ್ಳೇಗಾಲ ತಾಲೂಕಿನ ಅಧ್ಯಕ್ಷ ಶಿವಮಲ್ಲು,ಚಾಮರಾಜನಗರ ನಗರ ಜಿಲ್ಲಾ ಖಾಯಂ ಸದಸ್ಯ ರವಿನಾಯ್ಡು,ಹನೂರು ತಾಲೂಕಿನ ಗೌರವಾಧ್ಯಕ್ಷ ರಾಜಣ್ಣ,ಗುಂಡ್ಲುಪೇಟೆ ಗ್ರಾಮ ಘಟಕದ ಅಧ್ಯಕ್ಷ ಅಮ್ಜದ್ ಖಾನ್,ಕಾರ್ಯದರ್ಶಿ ಗೋಪಾಲ್,ಸಂಘಟನಾ ಕಾರ್ಯದರ್ಶಿ ಬಸವರಾಜು,ಚಾ.ನ ರೈತ ಮುಖಂಡ ಸಂತೋಷ್,ದೊಡ್ಡಿದುವಾಡಿ ವಸಂತ್,ಗುಂಡ್ಲುಪೇಟೆ ಕಾರ್ಯದರ್ಶಿ ಪಾಪಣ್ಣ,ಮಾರ್ಟಳ್ಳಿ ಘಟಕದ ಗೌರವಧ್ಯಕ್ಷ ಅರ್ಪುದರಾಜು,ಯುವ ಘಟಕದ ಅಧ್ಯಕ್ಷ ಸೂರ್ಯ,ವೆಟ್ಟುಕಾಡು ಗ್ರಾಮದ ಸೋಶಿಯಮ್ಮ, ಮಹಿಳಾ ಘಟಕದ ಪದಾಧಿಕಾರಿಗಳು ವಿವಿಧ ಗ್ರಾಮ ಘಟಕದ ಪದಾಧಿಕಾರಿಗಳು,ರೈತ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ