ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರಾಷ್ಟ್ರೀಯ ವಿಜ್ಞಾನ ಹಾಗೂ ಗಣಿತ ದಿನಾಚರಣೆ ಅಂಗವಾಗಿ “ವೈಜ್ಞಾನಿಕ ಮನೋಭಾವಕ್ಕೊಂದು ಮೆಟ್ಟಿಲು” ಕಾರ್ಯಕ್ರಮ

ಕಲಬುರಗಿ:ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಸುಮಾರು 40 ವಷ೯ಗಳಿಂದ ಹೊಸ ರೀತಿಯ ಚಟುವಟಿಕೆಗಳಿಂದ ಗುರುತಿಸಿಕೊಂಡಿದೆ.ದಿ.20-02-2024 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಕಲಬುರಗಿ ಸಹಯೋಗದಲ್ಲಿ ಅವಿಷ್ಕಾರ-2024 ವೈಜ್ಞಾನಿಕ ಮನೋಭಾವಕೊಂದು ಮೆಟ್ಟಿಲು ಎಂಬ ನಾಮದ ಅಡಿಯಲ್ಲಿ ಅಂತರ ಶಾಲಾ ಮಟ್ಟದ ಸ್ಪಧೆ೯ಗಳನ್ನು ರಾಷ್ಟ್ರೀಯ ವಿಜ್ಞಾನ ಹಾಗೂ ಗಣಿತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿತ್ತು.ಈ ಸ್ಪಧೆ೯ಗಳನ್ನು ಸರಕಾರಿ ಪದವಿ ಪೂರ್ವ ಕಾಲೇಜು ಚಿತ್ತಾಪುರ ಆವರಣದಲ್ಲಿ ಆಯೋಜಿಸಲಾಯಿತು.
ಕಾಯ೯ಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ದವೀರಯ್ಯ ರೂದ್ನೂರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪುರ,
ಅತಿಥಿಯಾಗಿ ಶ್ರೀ ಕಾಶಿರಾಯ್ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಚಿತ್ತಾಪುರ,
ಶ್ರೀ ಚಂದರ ಚವ್ಹಾಣ್ ಎಸ್.ಡಿ.ಎಮ್.ಸಿ,ಅಧ್ಯಕ್ಷರು ಸ. ಹಿ ಪ್ರೌಢ ಶಾಲೆ ಅಡತ್ ಬಜಾರ್ ಚಿತ್ತಾಪುರ,
ಸಂತೋಷ ಶಿರನಾಳ ECO ಚಿತ್ತಾಪುರ,
ಶರಣಪ್ಪ ECO ಗುಂಡಗುತಿ೯ ಉತ್ತರ ವಲಯ. ವೆಂಕಟ ರೆಡ್ಡಿ ECO ಕಾಳಗಿ ವಲಯ,ಅಬ್ದುಲ್ ಸಲೀಂ ತಾಲೂಕಾ ಶಿಕ್ಷಕರ ಸಂಘದ ಕಾರ್ಯದರ್ಶಿ,ಕಾಯ೯ಕ್ರಮದ ಅಧ್ಯಕ್ಷರಾಗಿ ಚಂದ್ರಶೇಖರಯ್ಯ ಸೋಪಿಮಠ svym ಸಂಸ್ಥೆಯ ಹಿರಿಯ ಕಾಯ೯ಕ್ರಮ ವ್ಯವಸ್ಥಾಪಕರು ಉತ್ತರ ಕನಾ೯ಟಕ,ಮುಖ್ಯ ಗಣ್ಯರು ವೇದಿಕೆಯನ್ನು ಅಲಂಕರಿಸಿದರು.ಕಾಯ೯ಕ್ರಮದ ಉದ್ಘಾಟನೆಯನ್ನು ವಿಶಿಷ್ಟ ಹಾಗೂ ವಿನೂತನ ರೀತಿಯಲ್ಲಿ ರಾಸಯನಿಕ ಬಳಸಿ ದೀಪವನ್ನು ಬೆಳಗಿಸಿದರು.

“ಕುತೂಹಲವಿದ್ದಲ್ಲಿ ಕಲಿಕೆಯ ಹಸಿವು ಹೆಚ್ಚಿಸುತ್ತದೆ ” ಆ ಕಲಿಕೆಯ ಹಸಿವನ್ನು ನೀಗಿಸುವುದರೊಂದಿಗೆ ಮಕ್ಕಳಲ್ಲಿ ಅಡಗಿದ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಾ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸುವಲ್ಲಿ ವೇದಿಕೆಯನ್ನು ಕಲ್ಪಿಸುತ್ತಿದ್ದಾರೆ ಎಂಬುದನ್ನು svym ಸಂಸ್ಥೆ ಕುರಿತು ಅಭಿಲಾಷೆಯನ್ನು ಸಿದ್ದವೀರಯ್ಯ ರೂದ್ನೂರ್ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪುರ ಮಾತನಾಡಿದರು.ಇಂದಿನ ಆವಿಷ್ಕಾರದ ಕಾರ್ಯಕ್ರಮ ಮುಖ್ಯ ಉದ್ದೇಶ ವೈಜ್ಞಾನಿಕ ತಿಳುವಳಿಕೆ ವಿಜ್ಞಾನದ ಕಡೆಗೆ ವಿದ್ಯಾರ್ಥಿಗಳಿಗೆ ಆಕಷಿ೯ಸುವುದು ಹಾಗೂ svym ಸಂಸ್ಥೆ ಕುರಿತು ಕಾಯ೯ಕ್ರಮದ ಪ್ರಾಸ್ತಾವಿಕ ನುಡಿಯನ್ನು ಕಾಯ೯ಕ್ರಮ ವ್ಯವಸ್ಥಾಪಕರು ಸಂತೋಷ M K ಇವರು ಮಾತನಾಡಿದರು.ನಮಗೆ ಪ್ರತಿಯೊಂದು ಹೆಜ್ಜೆಗೂ ಶಿಕ್ಷಣದಲ್ಲಿ ಜೊತೆಯಾಗಿ ಹಾಗೂ ಬಡ ವಿದ್ಯಾರ್ಥಿಗಳ ಬಾಳಿನ ಬೆಳಕಾಗಿದೆ.ವಿಜ್ಞಾನ ಹಾಗೂ ಗಣಿತವನ್ನು ತುಂಬಾ ಸುಲಭವಾಗಿ ತಿಳಿಯಲು svym ಸಂಸ್ಥೆ ನಮಗೆ ತುಂಬಾ ಸಹಾಯ ಮಾಡುತ್ತಿದೆ ಎಂದು ವಿದ್ಯಾರ್ಥಿನಿ ಪ್ರತಿನಿಧಿ ಸುಮಾ ಸ.ಪ್ರೌ.ಶಾಲೆ ದಿಗ್ಗಾಂವ್ ಮಾತನಾಡಿದರು.ಶಿಕ್ಷಣವೆಂದರೆ ಕೇವಲ ಓದುವುದಲ್ಲ, ಕೇವಲ ಬರೆಯುವುದರಲ್ಲ ವೈಜ್ಞಾನಿಕ ಚಿಂತನೆಯ ಮೂಲಕ ಮಾನವೀಯ ಮೌಲ್ಯಗಳನ್ನು ಜೀವಂತಗೊಳಿಸುವುದೆ ನಿಜವಾದ ಶಿಕ್ಷಣ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ಇಂದು ಮಾದರಿ ಪ್ರಯೋಗ ಹಾಗೂ ರಸಪ್ರಶ್ನೆಯ ಮೂಲಕ ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸುವ ಕೆಲಸ svym ಸಂಸ್ಥೆ ಮಾಡುತ್ತಿದೆ ಎಂದು ಅತಿಥಿ ನುಡಿಯನ್ನು ಶರಣಪ್ಪ ಗುಂಡಗುತಿ೯ ಅವರು ಮಾತನಾಡಿದರು.ಸ್ವಾಮಿ ವಿವೇಕಾನಂದರ ಚತುರತೆ ಹಾಗೂ ಅವರ ಸಾಧನೆಗಳನ್ನು ಮಕ್ಕಳಿಗೆ ಹೇಳುತ್ತಾ svym ಸಂಸ್ಥೆ ಕಾರ್ಯಗಳ ಕುರಿತು ಸವಿವರವಾಗಿ ಸ.ಪ್ರೌ.ಶಾಲಾ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಚಿತ್ತಾಪುರ ಇವರು ಮಾತನಾಡಿದರು “ವಿದ್ಯಾರ್ಥಿಗಳೇ ನೀವು ಅದೃಷ್ಟವಂತರು”ಯಾಕೆಂದರೆ svym ಸಂಸ್ಥೆಯು ನಿಮ್ಮಲ್ಲಿ ಒಬ್ಬ ವಿಜ್ಞಾನಿಯನ್ನು ಹುಟ್ಟು ಹಾಕಿದ್ದಾರೆ ಎಂದು ಹೇಳುತ್ತಾ svym ಸಂಸ್ಥೆ ಕುರಿತು ಅಬ್ದುಲ್ ಸಲೀಂ ಸರ್ ತಾಲೂಕಾ ಶಿಕ್ಷಕರ ಸಂಘದ ಕಾರ್ಯದರ್ಶಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಸುಮಾರು ಒಂದು ವರ್ಷದಿಂದ ನಮ್ಮ ಶಾಲೆಯಲ್ಲಿ ಆದ ಒಂದು ಒಳ್ಳೆಯ ಬದಲಾವಣೆ ಕುರಿತು ಶ್ರೀ ಚಂದರ ಚೌಹಾನ್ sdmc ಸದಸ್ಯರು ಚಿತ್ತಾಪುರ.ಇಂದಿನ ಕಾರ್ಯಕ್ರಮದ ಉದ್ದೇಶ ಹಾಗೂ svym ವಿಭಿನ್ನ ಕಾರ್ಯಗಳ ಕುರಿತು ಕಾರ್ಯಕ್ರಮದ ಅಧ್ಯಕ್ಷರಾದ ಅಧ್ಯಕ್ಷ ನುಡಿಯನ್ನು ನೋಡಿದರು ಚಂದ್ರಯಾನ-3 ಸೌರಚಾಲಿತ ವಿದ್ಯುತ್,ಪ್ಲಾಸ್ಟಿಕ್ ನಿರ್ವಹಣೆ,ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ,ಸೌರವ್ಯೂಹದ ಸೂಕ್ಷ್ಮದರ್ಶಕದ ಮಾದರಿ ಗಣಿತದ ಕೋನಗಳ ವಿಧಗಳು,ಸಂಭವನೀಯತೆ ಮಾದರಿ,ತ್ರಿಭುಜ ರಚನೆ ಮಾದರಿ ಗೋಳದ ಮೇಲ್ಮೈ ವಿಸ್ತೀರ್ಣ ಮಾದರಿ ಇತ್ಯಾದಿ ಒಟ್ಟು ಪ್ರಾಥಮಿಕ ಹಾಗೂ ಪ್ರೌಢಶಾಲೆಯಿಂದ 63 ಗಣಿತ ಹಾಗೂ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ಮಾಡಲಾಯಿತು. ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.ಪ್ರಥಮ, ದ್ವಿತೀಯ, ಹಾಗೂ ತೃತೀಯ ಸ್ಥಾನವನ್ನು ಉತ್ತಮ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು ಹಿಂದಿನ ಕಾರ್ಯಕ್ರಮದಲ್ಲಿ ಗಣ್ಯರು ಸಂಪನ್ಮೂಲ ವ್ಯಕ್ತಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಸರ್ಕಾರಿ ಶಾಲೆ ಶಿಕ್ಷಕರು ಮುಖ್ಯ ಗುರುಗಳು ಶಾಲಾ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಒಟ್ಟಾಗಿ 200ಕ್ಕಿಂತಲೂ ಹೆಚ್ಚಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು,ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಕು.ಅನ್ನಪೂರ್ಣ ಹಾಗೂ
ಕಾರ್ಯಕ್ರಮದ ಅತಿಥಿಗಳಿಗೆ ಸ್ವಾಗತವನ್ನು ಕು.ಸುಹಾಸಿನಿ ಮಾಡಿದರು
ಕಾರ್ಯಕ್ರಮ ವಂದನಾರ್ಪಣೆ ಶ್ರೀ ಚಂದ್ರಕಾಂತ್ ಇವರು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ Svym ಸಂಸ್ಥೆಯ ಸಿಬ್ಬಂದಿಗಳಾದ ಶಿವಕುಮಾರ್,ಸುಧಾಕರ್, ಪ್ರದೀಪ್ ರೆಡ್ಡಿ,ರೇಷ್ಮಾ ಇದ್ದರು.
ಈ ಕಾರ್ಯಕ್ರಮದಲ್ಲಿ 20 ಶಾಲೆಗಳಿಂದ ಸುಮಾರು 250 ಕ್ಕು ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ವರದಿ ಮೊಹಮ್ಮದ್ ಅಲಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ