ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸುತ್ತಿರುವ ಮೊಟ್ಟೆ ಮತ್ತು ಬಾಳೆಹಣ್ಣಿಗೆ ಕನ್ನ ಹಾಕುತ್ತಿರುವ ಆದರ್ಶ ವಿದ್ಯಾಲಯ ಮುಖ್ಯ ಗುರುಗಳು !ಮೌನಕ್ಕೆ ಶರಣಾದ ಬಿಇಒ ಎಚ್ ಗುರಪ್ಪ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ಅಥವಾ ಬಾಳೆಹಣ್ಣು ಸಿಗದೇ ಕೆಲ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಆ ಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಾಲೆಗಳ ಒಂದನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಜೊತೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಮಾಡುವ ಯೋಜನೆ ಜಾರಿಗೆ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ರಾಜ್ಯದ ಶಾಲಾ ಮಕ್ಕಳ ಆಪೌಷ್ಟಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಪ್ರಧಾನಮಂತ್ರಿ ಪೋಷಣಾ ಅಭಿಯಾನದ ಅಡಿಯಲ್ಲಿ ಬಿಸಿಯೂಟದ ಜೊತೆಗೆ ಮೊಟ್ಟೆ ಅಥವಾ ಬಾಳೆಹಣ್ಣನ್ನು ನೀಡುತ್ತಿದೆ.
ಆದರ್ಶ ವಿದ್ಯಾಲಯ ಶಾಲೆಯು 6 ರಿಂದ 10 ನೇ ತರಗತಿ ಇದ್ದು ಒಟ್ಟು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಮೊಟ್ಟೆ ಅಥವಾ ಬಾಳೆ ಹಣ್ಣಿನ ಭಾಗ್ಯ ಈ ಶಾಲೆಯ ಕೆಲ ಮಕ್ಕಳಿಗೆ ಸಿಗುತ್ತಿಲ್ಲ
ಕಳೆದ ತಿಂಗಳಿಗಳಿಂದ ಈ ಮಕ್ಕಳು ಮೊಟ್ಟೆ ಅಥವಾ ಬಾಳೆ ಹಣ್ಣಿನಿಂದ ವಂಚಿತರಾಗಿದ್ದಾರೆ.
ಈ ಬಗ್ಗೆ ಬಿಸಿ ಊಟದ ಅಧಿಕಾರಿ ರಾಮ್ ಮೋಹನ್ ಬಾಬು ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ವಿದ್ಯಾರ್ಥಿಗಳು ಮಾತನಾಡಿ ನಮಗೆ ಮೊಟ್ಟೆ ನೀಡುತ್ತಿಲ್ಲ ಬಾಳೆಹಣ್ಣು ನೀಡುತ್ತಿದ್ದಾರೆ ಆದರೆ ಕಳಪೆ ಮಟ್ಟದ ಬಾಳೆಹಣ್ಣು ನೀಡುತ್ತಿದ್ದಾರೆ ಎಂದು ಹೇಳಿದಾಗ ಅವರು ಗಮನಕ್ಕೆ ತಂದರು ಬಿ ಇ ಓ ನಿರ್ಲಕ್ಷ ಎದ್ದು ಕಾಣುತ್ತಿದೆ.
ಸರ್ಕಾರದಿಂದ ಇಷ್ಟೆಲ್ಲಾ ಸೌಕರ್ಯ ಸೌಲಭ್ಯಗಳಿದ್ದರೂ ಸಹ ಈ ಆದರ್ಶವಿದ್ಯಾಲಯ ಶಾಲೆಯ ಮಕ್ಕಳು ಬಾಳೆಹಣ್ಣಿನಿಂದ ಮೊಟ್ಟೆಯಿಂದ ವಂಚಿತರಾಗುತ್ತಿದ್ದಾರೆ.
ಮಕ್ಕಳ ಆರೋಗ್ಯದ ಪೌಷ್ಟಿಕತೆಯ ಅಭಿವೃದ್ಧಿಗಾಗಿ ಸರ್ಕಾರವು ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಯೋಜನೆಗಳನ್ನ ಜಾರಿಗೆ ತಂದರೆ ಅವುಗಳನ್ನು ಅವರ ಸ್ವಾರ್ಥಕ್ಕಾಗಿ ಇಲ್ಲಿನ ಮುಖ್ಯೋಪಾಧ್ಯಾಯರು ಬಳಸಿಕೊಳ್ಳುತ್ತಿದ್ದಾರೆ ಎಂದು ಇಲ್ಲಿನ ಶಾಲೆಯ ಮಕ್ಕಳು ಹಾಗೂ ಪೋಷಕರು ಆರೋಪಿಸುತ್ತಿದ್ದಾರೆ.
ಈ ಶಾಲೆಯ ಮಕ್ಕಳು ಮೊಟ್ಟೆ ಬಾಳೆ ಹಣ್ಣಿನ ರುಚಿಯನ್ನು ನೋಡದೆ ಇರುವದಕ್ಕೆ ಕಾರಣ ಇಲ್ಲಿನ ಮುಖ್ಯೋಪಾಧ್ಯಾಯರಾದ ಸಿದ್ದಲಿಂಗಪ್ಪ..!
ದುರ್ದೈವ ಸಂಗತಿ ಏನಪ್ಪಾ ಅಂದರೆ ಮಕ್ಕಳು ತಿನ್ನುವಂತಹ ಮೊಟ್ಟೆ ಬಾಳೆ ಹಣ್ಣಿನ ಮೇಲೆ ಕೂಡಾ ಈ ಮುಖ್ಯೋಪಾಧ್ಯಾಯರ ಕಣ್ಣು ಬಿದ್ದಿರುವುದು ಅವಮರ್ಯಾದೆಗೆ ಎಡೆ ಮಾಡಿಕೊಡುತ್ತಿದೆ.
ಒಟ್ಟಾರೆ ಹೇಳುವುದಾದರೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಬಿಸಿ ಊಟದ ಜೊತೆಗೆ ಸೇವಿಸಬೇಕಾದ ಮೊಟ್ಟೆ ಹಾಗೂ ಬಾಳೆಹಣ್ಣಿನ ರುಚಿಯನ್ನು ಸವಿಯದೆ ಇರುವುದು ದುರ್ದೈವದ ಸಂಗತಿ.
ಇಲ್ಲಿನ ಮುಖ್ಯೋಪಾಧ್ಯಾಯರು ತಮ್ಮ ಸ್ವಾರ್ಥಕ್ಕಾಗಿ ಅವರ ಆಸೆ ಬೇಡಿಕೆಗಳಿಗಾಗಿ ಮಕ್ಕಳು ತಿನ್ನುವಂತಹ ಮೊಟ್ಟೆ ಬಾಳೆ ಹಣ್ಣಿನ ಮೇಲೆ ಕನ್ನ ಹಾಕುತ್ತಿರುವುದು ನಾಚಿಗೇಡು ವಿಷಯವಾಗಿದೆ…
ಬಿಇಒಗಮನಕ್ಕೆ ಬಂದರು ಕ್ರಮ ತೆಗೆದು ಕೊಳ್ಳದೆ
ಮೌನವಹಿಸಿರುವುದು ಏಕೆ !
ಬಿ ಇ ಓ ಎಚ್ ಗುರಪ್ಪ ಅವರಿಗೆ ತಿಂಗಳ ಮಾಮೂಲು ಏನಾದರೂ ಕೊಡಬೇಕೆನೋ,ಆದ್ದರಿಂದ ಇಲ್ಲಿನೆ ಮುಖ್ಯವಾದರೂ ಮೊಟ್ಟೆ ಕೊಡದಿರಲು ಕಾರಣವಾಗಿದೆಯೇ ಎಂಬ ಯಕ್ಷಪ್ರಶ್ನೆಯಾಗಿದೆ
2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವಂತಹ ಅದೆಷ್ಟೋ ವಿದ್ಯಾರ್ಥಿಗಳು ಮೊಟ್ಟೆ ಹಾಗೂ ಬಾಳೆಹಣ್ಣಿನಿಂದ ವಂಚಿತರಾಗುತ್ತಿದ್ದು ಈಗಲಾದರೂ ಇದಕ್ಕೆ ಸಂಬಂಧಪಟ್ಟಂತಹ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಯ ಮುಖ್ಯೋಪಾಧ್ಯಯರನ್ನು ವಜಾಗೊಳಿಸಬೇಕೆಂದು ಇಲ್ಲಿನ ವಿದ್ಯಾರ್ಥಿಗಳ ಪೋಷಕರ ಒತ್ತಾಯವಾಗಿದೆ.
ವರದಿ ಎಂ ಪವನ್ ಕುಮಾರ್