ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ದಿನಾಂಕ 23.02.2024 ರಂದು ಸಂವಿಧಾನ ಜಾಗೃತಿ ಜಾಥಾ ಯಶಸ್ವಿಯಾಗಿ ನೆರವೇರಿತು.
ಬೆಳಿಗ್ಗೆ ಸಂವಿಧಾನ ಜಾಗೃತಿ ಜಾಥಾ ರಥವನ್ನು ಪಿಡಿಒ ನರಸಪ್ಪ ಗೌಡ ಕಾಡಮಗೇರಿ ಪೂಜೆ ಮಾಡುವುದರ ಮೂಲಕ ರಥದ ಮೆರವಣಿಗೆಗೆ ಚಾಲನೆಯನ್ನು ಕೊಟ್ಟರು ಊರಿನ ಮುಖ್ಯ ಬೀದಿಯ ಮೂಲಕ ಹೊರಟು ಅಂಬೇಡ್ಕರ್ ಅವರ ಪುತ್ತಳಿಗೆ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಚನೆ ನಂತರ ಕಾರ್ಯಕ್ರಮ ಜರುಗಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕ ಪಂಚಾಯತಿ ಸಿಬ್ಬಂದಿ ಮತ್ತು ಕಾಚಾಪುರ ಗ್ರಾಮದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಮಹಿಳಾ ಸಂಘಟನೆ ಮತ್ತು ಆರೋಗ್ಯ ಇಲಾಖೆಯಿಂದ ನಿಂಬೆಣ್ಣ ಮತ್ತು ಸಿದ್ದು ಪಾಲ್ಗೊಂಡಿದ್ದು ಮತ್ತು ಪಂಚಾಯ್ತಿಯ ವ್ಯಾಪ್ತಿಗೆ ಬರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಶಾಲಾ ಗುರುಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು ಶಾಲಾ ಮಕ್ಕಳು ನೃತ್ಯ ಮತ್ತು ಹಾಡುಗಳ ಮೂಲಕ ಜನರನ್ನು ರಂಜಿಸಿದರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಗಳನ್ನು ತೊಟ್ಟು ರಾರಾಜಿಸಿದರು ಹಾಗೂ ಕೆಲವು ಮಕ್ಕಳು ಅಂಬೇಡ್ಕರ್ ಅವರ ವೇಷಭೂಷಣವನ್ನು ತೊಟ್ಟು ಜಗಮಗಿಸಿದರು ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ಡಿಎಸ್ಎಸ್ ಸಂಘದ ಮುಖಂಡರಾದ ಚಂದ್ರಶೇಖರ್ ಹರನಾಳ ಹಾಗೂ ಗುರಣ್ಣ ಜಿ ದೊಡ್ಮನಿ ಶರಣಪ್ಪ ಜಿ ದೊಡ್ಮನಿ ಬಸವರಾಜ್ ಹೊಸಮನಿ ಮಾಂತೇಶ್ ದೊಡ್ಮನಿ ದೊಡ್ಡೇಶ್ ವರ್ಮಾ ಹಾಗೂ ಮಡಿವಾಳಪ್ಪ ದೊಡ್ಮನಿ ಸಮಾಜದ ಇನ್ನುಳಿದ ಮುಖಂಡರು ಭಾಗವಹಿಸಿದ್ದರು ಕಾರ್ಯಕ್ರಮಕ್ಕೆ ಆಗಮಿಸಿದಂತ ವಾದ್ಯ ವೃಂದಗಳಾದ ಡೊಳ್ಳು ಮತ್ತು ತಮಟೆ ಮತ್ತು ಶಹನಾಯಿ ನುಡಿಸುವವರು ಕಾರ್ಯಕ್ರಮಕ್ಕೆ ವಿಶೇಷತೆ ತಂದು ಕೊಟ್ಟರು ಮತ್ತು ಊರಿನ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿ ನೆರವೇರಿಸಿಕೊಟ್ಟರು.
ವರದಿ-ತಿಪ್ಪಣ್ಣ ಜಾಲಹಳ್ಳಿ