ಚಿತ್ತಾಪುರ:ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಪಂ ಕಲಬುರಗಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಅಂಧತ್ವ ವಿಭಾಗ ಕಲಬುರಗಿ,ಆಶಾಕಿರಣ ಅಭಿಯಾನ 2023-24 ನೇ ಸಾಲಿನಲ್ಲಿ ಫೆ.24 ರಂದು ಬೆಳಗ್ಗೆ 11 ಗಂಟೆಗೆ ಸಮಗ್ರ ನೇತ್ರ ತಪಾಸಣೆ ಮತ್ತು ನೇತ್ರ ಶಸ್ತ್ರ ಚಿಕಿತ್ಸೆ ಅಭಿಯಾನ ಹಮ್ಮಿಕೊಳ್ಳಲಾಯಿತು.
ಇದೇ ವೇಳೆ 300ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ಮಾಡಿ ನೇತ್ರ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ನಂತರ ಉಚಿತ ಕನ್ನಡಕಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಡಿಎಲ್’ಓ ಡಾ.ರಾಜಕುಮಾರ ಕುಲಕರ್ಣಿ,ತಾಲೂಕು ಆಡಳಿತಾಧಿಕಾರಿ ಡಾ.ಮುಬಾಶೀರ್,ಡಾ.ಆಫ್ರೀನ್ ಕೌಸರ್, ಡಾ.ಅಬ್ದುಲ್ ಮಾಜೀದ್,ಶಾರದಾ ಸೇರಿದಂತೆ ವೈದ್ಯರು ಇದ್ದರು.
ವರದಿ-ಮೊಹಮ್ಮದ್ ಅಲಿ