ಸಿಂಧನೂರಿನ ಪ್ರತಿಷ್ಠಿತ ಪಾಟೀಲ್ ಮಹಿಳಾ ಮಹಾವಿದ್ಯಾಲಯದ ಜೊತೆ ಕಾರುಣ್ಯ ಆಶ್ರಮದ ಒಪ್ಪಂದ ಮಾಡಿಕೊಂಡು ಪಾಟೀಲ್ ಶಿಕ್ಷಣ ಸಂಸ್ಥೆಯ ಜೊತೆ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಿ ಸಾಮಾಜಿಕ ಜವಾಬ್ದಾರಿಯನ್ನು ಜೊತೆಗೂಡಿ ನಡೆಸಿಕೊಂಡು ಹೋಗುವ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಒಪ್ಪಂದ ಮಾಡಿಕೊಂಡಿತು. ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪಾಟೀಲ್ ಮಹಿಳಾ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಆರ್.ಸಿ.ಪಾಟೀಲ್ ಮಾತನಾಡಿ ಕಾರುಣ್ಯ ಆಶ್ರಮ ಬರೀ ವೃದ್ಧಾಶ್ರಮ ನಡೆಸುವುದಲ್ಲದೆ ಹಿರಿಯ ನಾಗರಿಕರ ಬಗ್ಗೆ ಹಾಗೂ ಬುದ್ಧಿಮಾಂದ್ಯ ಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ಸಮಾನತೆಯನ್ನು ಸಾರುತ್ತಿದೆ.ಈ ಒಪ್ಪಂದ ನಮ್ಮ ಸಂಸ್ಥೆಗೆ ಸಂದ ಗೌರವ.ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು ಹಾಗೂ ಪ್ರತಿಯೊಬ್ಬ ಹಿರಿಯರನ್ನು ಗೌರವಿಸುವುದು ಹಿರಿಯರ ಆದರ್ಶ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡು ಸುಂದರ ಸಮಾಜಕ್ಕೆ ಕಾರಣರಾಗಬೇಕು.ಕಾರುಣ್ಯ ಆಶ್ರಮಕ್ಕೆ ನಮ್ಮ ವಿದ್ಯಾ ಸಂಸ್ಥೆಯಿಂದ ನಿರಂತರವಾಗಿ ಸಹಾಯ ಸಹಕಾರ ದೊರೆಯುತ್ತದೆ ಎಂದರು ನಂತರ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಕಾರುಣ್ಯ ಆಶ್ರಮ ಹುಟ್ಟಿದಾಗಿನಿಂದಲೂ ಸಹ ಪಾಟೀಲ್ ಶಿಕ್ಷಣ ಸಂಸ್ಥೆಯಿಂದ ನಿರಂತರ ಸಹಾಯ ದೊರೆಯುತ್ತಿದೆ.ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕ್ಷಣದ ಜೊತೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ಬೇರೆ ಬೇರೆ ರೀತಿಯ ಸಮಾಜ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಾಟೀಲ್ ಶಿಕ್ಷಣ ಸಂಸ್ಥೆಯ ಎಲ್ಲಾ ಷರತ್ತುಗಳಿಗೆ ನಮ್ಮ ಸಂಸ್ಥೆಯು ಬದ್ಧವಾಗಿ ನಡೆದುಕೊಳ್ಳುತ್ತದೆ.ಈ ಸಂಸ್ಥೆಯಲ್ಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೊಂದು ದಿನ ಆಶ್ರಮದಲ್ಲಿ ಹಿರಿಯರ ಸೇವೆಯ ಬಗ್ಗೆ ತರಬೇತಿ ನೀಡಿ ಬೋಧನೆ ಮಾಡಲಾಗುವುದು ಎಂದು ಮಾತನಾಡಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.ಈ ಸಂದರ್ಭದಲ್ಲಿ ಪಾಟೀಲ್ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಮಾರುತಿ ಭಂಡಾರ್ಕರ್ ಹಾಗೂ ಸಿಬ್ಬಂದಿಗಳಾದ ಸೂಗೂರೇಶ ಸಾಲಿಮಠ ಹಾಗೂ ಆಶ್ರಮದ ಸದಸ್ಯರಾದ ವೀರಭದ್ರಗೌಡ ಗಿಣಿವಾರ ಮತ್ತು ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ ಸಿದ್ದಯ್ಯ ಸ್ವಾಮಿ ಹರ್ಷವರ್ಧನ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.