ಸೊರಬ ಪಟ್ಟಣದ ಶ್ರೀ ಬಸವೇಶ್ವರ ಮಹಾಸ್ವಾಮಿಯ ಮಹಾ ರಥೋತ್ಸವ ಶನಿವಾರ ವಿವಿಧ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿoದ ಜರುಗಿತು.
ಬತ್ತಿಕೊಪ್ಪದ ಪುರವಂತರಾದ ಮಹೇಶ್ವರಗೌಡ ಹನುಮಂತಗೌಡ ಸಂಗಡಿಗರಿoದ ಶ್ರೀ ವೀರಭದ್ರ ದೇವರ ಶರಭಿ ಗುಗ್ಗಳ,ಮಲ್ಲಿಕಾರ್ಜುನಶಾಸ್ತ್ರಿ ಅರಮನೆಮಠ ಅವರ ಪೌರೋಹಿತ್ಯದಲ್ಲಿ ಬಸವೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಿತು ನಂತರ ತೀರ್ಥ ಪ್ರಸಾದ ವಿನಿಯೋಗ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಭರತ ಹುಣ್ಣಿಮೆಯಂದು ನಡೆಯುವ ಬಸವೇಶ್ವರ ಸ್ವಾಮಿ ಜಾತ್ರೆ ವಿಶೇಷತೆಯನ್ನು ಹೊಂದಿದ್ದು,ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಿರೇಶಕುನ,ಚಿಕ್ಕಶಕುನ, ಕೊಡಕಣಿ ಸುತ್ತಮುತ್ತಲಿನ ಗ್ರಾಮಸ್ಥರ ಮನೆದೇವರಾಗಿದ್ದು,ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿದರು.ಫೆ.25 ರಂದು ಅವಭೃತ,ಫೆ.26 ರಂದು ಸ್ವಾಮಿಯ ಪಲ್ಲಕ್ಕಿ ಪುರಪ್ರವೇಶ ನಡೆಯಲಿದೆ.
ವರದಿ-ಸಂದೀಪ ಯು.ಎಲ್,ಕರುನಾಡ ಕಂದ ನ್ಯೂಸ್ ಸೊರಬ