ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಂಜುಟಗಿ ನೂತನ ಗ್ರಾಮ ಪಂಚಾಯತ ಮತ್ತು ಗ್ರಾಮೀಣ ಸಂತೆ ಕಟ್ಟೆ ಉದ್ಘಾಟನೆ

ವಿಜಯಪುರ ಜಿಲ್ಲೆಯ ಇಂಡಿ ಸಮೀಪದ ಅಂಜುಟಗಿ ಗ್ರಾಮದ ನೂತನ ಹೈಟೆಕ್ ಗ್ರಾಮ ಪಂಚಾಯತ ಕಟ್ಟಡ ಮತ್ತು ಗ್ರಾಮಿಣ ಸಂತೆ ಕಟ್ಟೆ ಉದ್ಘಾಟನೆಯನ್ನು ಹ್ಯಾಟ್ರಿಕ್ ಗೆಲುವಿನ ಇಂಡಿ ಶಾಸಕರು ಯಶವಂತರಾಯಗೌಡ ಪಾಟೀಲರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಜಿಲ್ಲೆಗಳಲ್ಲಿ ಸಿಗುವಂತಹ ಸೌಲಭ್ಯ ಜಿಲ್ಲೆಗಳಲ್ಲಿ ಇರುವಂತಹ ಕಟ್ಟಡಗಳು ಶಿಕ್ಷಣ ನಮ್ಮ ಗ್ರಾಮಗಳಲ್ಲಿ ಸಿಗವಂತೆ ಮಾಡಬೇಕೆನ್ನುವುದೇ ನನ್ನ ಆಸೆ ಆದ್ದರಿಂದ ನಮ್ಮ ತಾಲೂಕಿನ ಪ್ರತಿ ಗ್ರಾಮ ಪಂಚಾಯತಗಳನ್ನು ಗ್ರಾಮ ಸೌಧ ಮಾಡೇ-ಮಾಡುತ್ತೇನೆ ಎಂದು ಶಾಸಕರಾದ ಯಶವಂತರಾಯಗೌಡ ಪಾಟೀಲರು ತಿಳಿಸಿದರು.
ಜಿಲ್ಲೆಯಲ್ಲಿ ಇಲ್ಲದಂತಹ ಮಿನಿ ವಿಧಾನ ಸೌಧ, ತಾಲೂಕುಗಳಲ್ಲಿ ಇಲ್ಲದಂತಹ ಗ್ರಾಮ ಸೌಧಗಳು ನಮ್ಮ ಇಂಡಿ ತಾಲೂಕಿನಲ್ಲಿವೆ ತಾಲೂಕಿನ ೩೮ ಗ್ರಾಮ ಪಂಚಾಯತಗಳಲ್ಲಿ ೧೫ ಗ್ರಾ-ಪಂಗಳು ಇವತ್ತು ಗ್ರಾಮ ಸೌಧವಾಗಿ ಲೊಕಾರ್ಪಣೆಗೊಂಡಿವೆ.ಇತರೆ ಜಿಲ್ಲೆಗಳಲ್ಲಿ ಇರುವಂತಹ ಶಾಲಾ ಕಾಲೇಜುಗಳು ಇವತ್ತು ಅಂಜುಟಗಿ,ಝಳಕಿ,ಹೋರ್ತಿ ಗ್ರಾಮಗಳಲ್ಲಿ ತಲೆ ಎತ್ತಿ ನಿಂತಿವೆ ನೆನೆಗುದಿಗೆ ಬಿದ್ದಂತಹ ಸಕ್ಕೆರೆ ಕಾರ್ಖಾನೆ ಇವತ್ತು ಇಂಡಿ,ಸಿಂದಗಿ ತಾಲೂಕಿನ ರೈತರ ಕಣ್ಮಣಿಯಾಗಿ ಹೊರಹೊಮ್ಮಿದೆ,ಇತರ ಜಿಲ್ಲೆಯಲ್ಲಿರುವಂತಹ ಸೌಲಭ್ಯಗಳು ನಮ್ಮ ತಾಲೂಕಿನಲ್ಲಿವೆ ಆದ್ದರಿಂದ ಮುಂದಿನ ದಿನಗಳಲ್ಲಿ ಇಂಡಿ ತಾಲೂಕನ್ನು ಜಿಲ್ಲೆಯಾಗಿ ಪರಿವರ್ತಿಸದೆ ಹೋದಲ್ಲಿ ನಾನು ರಾಜಕಿಯ ನಿವೃತ್ತಿ ಹೊಂದುತೇನೆ ಎಂದು ಶಾಸಕರು ಶಪಥ ಮಾಡಿದರು.
ಹಿಂದಿನ ಸರ್ಕಾರದಲ್ಲಿ ಅನುದಾನದ ಕೊರತೆ ಇದ್ದರಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಸಾಧಿಸಿದ್ದೇನೆ,ಮುಂದಿನ ದಿನಗಳಲ್ಲಿ ತಾಲೂಕಿನ ರಸ್ತೆಗಳು,ಗ್ರಾಮಿಣ ಅಭಿವೃದ್ಧಿ ಕಾರ್ಯಗಳು ಮಾಡುತ್ತೇನೆ ಮತ್ತು ನಮ್ಮ ತಾಲೂಕು ನೀರಾವರಿ ಯೋಜನೆಯ ಕೊನೆಯ ಹಂತದಲ್ಲಿರುವುದರಿಂದ ನಮ್ಮ ರೈತರು ಸುಧಾರಿಸಲು ತೊಂದರೆಯಾಗಿದೆ ಕಾಲುವೆ ತರುವದು ನನ್ನ ಜವಾಬ್ದಾರಿ ನೆರವೇಸಿದ್ದೇನೆ, ಆದರೆ ನೀರು ಹರಿಸೋದರಲ್ಲಿ ನಮಗೆ ಮಲತಾಯಿ ಧೋರಣೆಯಾಗಿದೆ,ಇದನ್ನು ಮುಂದಿನ ದಿನಗಳಲ್ಲಿ ಖಂಡಿತವಾಗಲೂ ಸಂಪೂರ್ಣವಾಗಿ ನೀರಾವರಿ ಯೋಜನೆ ನಮ್ಮ ತಾಲೂಕಿಗೆ ತಲುಪುವಂತೆ ಮಾಡುತ್ತೇನೆ,ಸರ್ಕಾರ ಗ್ಯಾರಂಟಿಗಳಲ್ಲಿ ಹಣ ತೊಡಗಿಸಿದ್ದರೂ ನಮ್ಮ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಇಂತಹ ಕಷ್ಟದಲ್ಲಿ ಹೈಟೆಕ್ ಕಾರ್ಯಗಳು ನಿರ್ವಹಿಸಲು ಸಾಧ್ಯವಾದದ್ದು ನಿಮ್ಮೆಲ್ಲರ ಆಶಿರ್ವಾದವೇ ಕಾರಣ, ನೀವುಗಳು ನೀಡಿರುವಂತಹ ಆಶೀರ್ವಾದ ದೇವರ ಆಶಿರ್ವಾದ ಎಂದರು.
ನಮ್ಮ ಜಿಲ್ಲಾ ಪಂಚಾಯತ ಅಡಿಯಲ್ಲಿ ೪೩೬ ಗ್ರಾಮ ಪಂಚಾಯತಗಳು ಇದ್ದು ಇವುಗಳಿಗೆ ಈಗಾಗಲೇ ಬಡವರ ಪಾಲಿನ ಸರ್ಕಾರಿ ಅನುದಾನದ ಮನೆಗಳು ಕಡಿಮೆ ಪ್ರಮಾಣದಲ್ಲಿದ್ದು,ಮುಂದಿನ ದಿನಗಳಲ್ಲಿ ಪ್ರತಿ ಗ್ರಾ-ಪಂ ಗೆ ೧೦೦ರಂತೆ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ಮಾನ್ಯ ಶಾಸಕರು,ವಿಧಾನ ಪರಿಷತ್ ಸುನೀಲಗೌಡ ಪಾಟೀಲ ಅವರೊಂದಿಗೆ ಮಾತನಾಡಿದರು,ನಮ್ಮ ಜಿಲ್ಲೆಯಲ್ಲಿ ಇಂತಹ ಕಟ್ಟಡಗಳು ಅತಿಸುಂದರವಾಗಿ ನಿರ್ಮಾಣ ಮಾಡಿರುವದರಿಂದ ನಮ್ಮ ಜಿಲ್ಲೆಯು ಬೇರೆ ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದೆ.ಬೇರೆ ಜಿಲ್ಲೆಯ ಜನರು ನಮ್ಮ ಗ್ರಾಮಗಳಿಗೆ ಭೇಟಿ ನೀಡುವಂತಾಗಿದೆ ಇದು ನಮ್ಮ ಹೆಮ್ಮೆಯ ವಿಷಯ ಇದಕ್ಕೆಲ್ಲಾ ಇಲ್ಲಿನ ಅಧ್ಯಕ್ಷರು,ಸದಸ್ಯರು,ಅಧಿಕಾರಿಗಳು ಮತ್ತು ಮುಖ್ಯವಾಗಿ ಗ್ರಾಮಸ್ಥರ ಸಹಕಾರ ಕಾರಣ ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಸಂಸ್ಥಾನ ಹಿರೇಮಠ ತಡವಲಗಾ ಷ.ಬ್ರ.ಶ್ರೀ ಅಭಿನವ ರಾಜೋಟೇಶ್ವರ ಶಿವಾಚಾರ್ಯರು,ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯಾದ ಸಂಜಯ ಖಡಗೆಕರ,ಗ್ರಾ-ಪಂ ಅಧ್ಯಕ್ಷೆ ಸುವರ್ಣ ಬಸವರಾಜ್ ಕವಡಿ,ಉಪಾಧ್ಯಕ್ಷ ಶಂಕರ ದೊಡ್ಡೇನವರ್,ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಶಿವಣಗಿ, ಎಸ್.ಆರ್.ರುದ್ರವಾಡಿ,ಸುಭಾಸ ಅಚ್ಚಿಗರ,ಸಣ್ಣಪ್ಪ ತಳವಾರ,ಅಣ್ಣಪ್ಪ ತಳವಾರ,ನೀಲಕಂಠ ರೂಗಿ,ಜೆಟ್ಟೆಪ್ಪ ರವಳಿ,ಅಣ್ಣಾರಾಯ ಬಬಲಾದ,ಶೇಖರ ನಾಯಕ,ಭೀಮಣ್ಣ ಕವಲಗಿ,ಸತೀಶ ಹತ್ತಿ,ರುಕ್ಮುದ್ದೀನ ತದ್ದೆವಾಡಿ,ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

ವರದಿ:ಅರವಿಂದ್ ಕಾಂಬಳೆ, ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ