ಕೊಪ್ಪಳ/ಕುಷ್ಟಗಿ:ವಿದ್ಯಾನಗರದಲ್ಲಿ
ಸ.ಮಾ.ಹಿ.ಪ್ರಾ.ಶಾಲೆ ಇಂದು ವಿಶ್ವವಿಖ್ಯಾತ ವಿಜ್ಞಾನಿಯಾದ ಸರ್.ಸಿ.ವಿ.ರಾಮನ್ ರವರ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೆಳಿಗ್ಗೆ ಪ್ರಾರ್ಥನೆಯ ನಂತರ ಮಕ್ಕಳಿಗೆ ರಾಷ್ಟ್ರೀಯ ವಿಜ್ಞಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ತದನಂತರದಲ್ಲಿ ಮಕ್ಕಳಿಂದ ವೈಜ್ಞಾನಿಕ ಪ್ರಯೋಗಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಲಕ್ಷ್ಮಿದೇವಿ ಪಾಟೀಲ ಹಾಗೂ ಶಿಕ್ಷಕರಾದ ಶ್ರೀನಿವಾಸ ದೇಸಾಯಿ ಮಕ್ಕಳಿಗೆ ಮಾರ್ಗದರ್ಶನ ನೀಡುವುದರ ಮೂಲಕ ಅನೇಕ ಪ್ರಯೋಗಗಳನ್ನು ಪ್ರದರ್ಶನ ಮಾಡಲು ಬೇಕಾದ ಸೂಕ್ತವಾದ ಮಾಹಿತಿ ನೀಡಿ, ಪ್ರೇರೆಪಿಸಿ ವೈಜ್ಞಾನಿಕ ಪ್ರಯೋಗಗಳನ್ನು ಮಕ್ಕಳಿಂದ ಪ್ರದರ್ಶನ ಮಾಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮರಿಯಮ್ಮ ಹಿರೇಮನಿ ವಹಿಸಿದ್ದರು. ಶಿಕ್ಷಕರಾದ ಶ್ರೀ ಶರಣಪ್ಪ ಹೆಬ್ಬುಲಿ,ಶ್ರೀ ಚಂದ್ರಶೇಖರ ತುಮ್ಮರಗುದ್ದಿ,ಶ್ರೀ ಶರಣಪ್ಪ ಹವಾಲ್ದಾರ್ ಹಾಗೂ ಶಿಕ್ಷಕಿಯರಾದ ಸರೋಜಿನಿ ದಡ್ಡಿ,ಉಮಾದೇವಿ ಕೋಟಿ,ಲೀಲಾವತಿ ಲಂಗಟದ,ಅನಿಲಕುಮಾರಿ, ರೇಣುಕಾ.ಎಮ್,ಅಶ್ವಿನಿ ಹಾಗೂ ಪೂರ್ಣಿಮಾ ಚವ್ಹಾಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಪ್ರಯೋಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಕರೆಕೊಟ್ಟರು.
ಎಲ್ಲಾ ಪ್ರಯೋಗಗಳನ್ನು ವೀಕ್ಷಿಸಿದ ಶಾಲೆಯ ಎಲ್ಲಾ ಮಕ್ಕಳು ವಿಜ್ಞಾನದ ವಿಸ್ಮಯಗಳನ್ನು ಕಂಡು ಆಶ್ಚರ್ಯದ ಜೊತೆಗೆ ಖುಷಿಯಿಂದ ಕಲಿಯುತ್ತಾ ನಲಿದಾಡುತ್ತಾ ವಿಜ್ಞಾನದ ಪ್ರಯೋಗಗಳನ್ನು ಚೆನ್ನಾಗಿ ಅರ್ಥ್ಯೈಸಿಕೊಂಡರು.