ಹನೂರು:ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಗಳಿಗೆ ಮೂಲ ಭೂತ ಸೌಕರ್ಯ ಗಳನ್ನು ಒದಗಿಸುವಂತೆ ಮಾನ್ಯ ರಾಜ್ಯ ಪಾಲರು ಹಾಗೂ ಮುಖ್ಯಮಂತ್ರಿಗಳು,ಅರಣ್ಯ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಶಾಸಕರುಗಳಿಗೆ ವಿಧಾನ ಸೌಧ ಕಚೇರಿಯಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಗ್ರಾಮದ ನಿವಾಸಿ ಬೊಮ್ಮಯ್ಯ ಸ್ವತಂತ್ರ ಬಂದು 75ವರ್ಷ ಕಳೆದರೂ ಇನ್ನೂ ಸಹ ನಮ್ಮ ಗ್ರಾಮ ಗಳಿಗೆ ಮೂಲಭೂತ ಸೌಕರ್ಯ ಗಳಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಕಾಡಂಚಿನ ಗ್ರಾಮಗಳಾದ
ತೋಳಸಿ ಕೆರೆ,ನಾಗ ಮಲೆ,ದೊಡ್ಡಣೆ,ಮೇದಗಣೆ, ಕೊಕ್ಕಬರೆ,ಮಾಂದರೆ,ಇಂಡಿಗ ನತ್ತ,ಪಡಸಲ ನತ್ತ ಸೇರಿದಂತೆ ಇತರೆ ಕಾಡಂಚಿನ ಸುತ್ತ ಮುತ್ತ,ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿದ್ದೆ,ಮೂರು ನಾಲ್ಕು ತಲೆ ಮಾರುಗಳಿಂದ ನಾವು ಜೀವನ ನಡೆಸುತ್ತಿದ್ದೇವೆ,ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ ಆದರೆ ನಮ್ಮ ಕಷ್ಟ ಗಳನ್ನು ಬಗೆಹರಿಸುತ್ತಿಲ್ಲ,ನಾಗು ಮಲೆ ಗ್ರಾಮದಲ್ಲಿ ನಾವು ಧನ ಕರು ಆಡು ಗಳನ್ನು ಮೇಯಿಸಿ ಕೊಂಡು ಜೀವನ ಸಾಗಿಸುತ್ತಿದೆವು ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದೊಳಗೆ ದನ ಕರುಗಳನ್ನು ಬಿಡದ ಕಾರಣ ನಾವು ಧನ ಕರುಗಳನ್ನು ಮಾರಾಟ ಮಮಾಡಿ ಆದರೆ ನಾಗ ಮಲೆ ದೇವಾಲಯದ ಬಳಿ ಸಣ್ಣ ಪುಟ್ಟ ಅಂಗಡಿ ಗಳನ್ನು ಇಟ್ಟು ಜೀವನ ನಡೆಸುತ್ತಿದ್ದೇವೆ ಆದರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ನಾಗ ಮಲೆ ದೇವಾಲಯಕ್ಕೆ ಭಕ್ತಾದಿಗಳನ್ನು ನಿಷೇದ ಮಾಡಿರುವುದರಿಂದ ನಮಗೆ ವ್ಯಾಪಾರವಿಲ್ಲದೆ ತುಂಬಾ ತೊಂದರೆಯಾಗಿದೆ,ಬೆಂಗಳೂರು ವಿಧಾನ ಸೌಧದ ಸಚಿವರ ಕಚೇರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ನಾಗ ಮಲೆ ನಾಗರಾಜು ಮಾತನಾಡಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಡಂಚಿನ ಗ್ರಾಮಗಳಾದ ನಾಗ ಮಲೆ,ಮಂದರೆ,ಮೆದಗಣೆ ತೊಕೆರೆ ಸೇರಿದಂತೆ ಹಲವು ಕಾಡಂಚಿನ ಗ್ರಾಮಗಳಲ್ಲಿ ಸೋಲಾರ್,ರಸ್ತೆ ಕುಡಿಯುವ ನೀರಿನ ವ್ಯವಸ್ಥೆ,ಆಸ್ಪತ್ರೆ ವ್ಯವಸ್ಥೆ ಇಲ್ಲದೆ ನಾಗ ಮಲೆ ಗ್ರಾಮ ದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ 15ಕಿಲೋ ಮೀಟರ್ ಕಾಡಿನಲ್ಲೇ ನಡೆದುಕೊಂಡು ಬರುವ ಪರಿಸ್ಥಿತಿ ಯಾಗಿದೆ,ಜ್ವರ,ಅನಾರೋಗ್ಯ ಉಂಟಾದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ, ನಮ್ಮ ಬದುಕು ಶೋಚನಿಯ ವ್ಯವಸ್ಥೆಯಾಗಿದೆ ಎಂದು ತಮ್ಮ ಅಲಳನ್ನು ತೋಡಿಕೊಂಡರು,ಜಿಲ್ಲಾಧಿಕಾರಿಯಾಗಿ ರವಿ ಅವರು ಇದ್ದ ಸಂದರ್ಭದಲ್ಲಿ ಗ್ರಾಮಗಳ ಬಗ್ಗೆ ಮೂಲ ಭೂತ ಸೌಕರ್ಯ ಒದಗಿಸುವಂತೆ ಮನವಿ ಮಾಡಲಾಯಿತು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ ಸೋಮಣ್ಣ ಅವರಿಗೂ ಸಹ ಮನವಿ ಸಲ್ಲಿಸಿದ್ದೆವು ಆದರೆ ಏನು ಪ್ರಯೋಜನವಾಗಿಲ್ಲ,ಸೋಲಾರ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲೇ ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ,ಜಲ ಜೀವನ್ ಯೋಜನೆ ಯಡಿಯಲ್ಲಿ ಕಳಪೆ ಕಾಮಗಾರಿಯನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಿದರು ಆದ್ದರಿಂದ ಸರಕಾರ ಇತ್ತ ಗಮನ ಹರಿಸಿ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮ ಗಳಲ್ಲಿ ವಾಸಿಸುವ ಜನರಿಗೆ ಮೂಲ ಭೂತ ಸೌಕರ್ಯ ಗಳನ್ನು ಒದಗಿಸಬೇಕೆಂದು ಕೈ ಮುಗಿದು ಮನವಿ ಮಾಡಿಕೊಂಡರು.
ವರದಿ:ಉಸ್ಮಾನ್ ಖಾನ್