ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗೌಡತಿಮ್ಮನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಜನಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೋಟ್ ಬುಕ್ಸ್ ಮತ್ತು ಪೆನ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಈರಣ್ಣನವರು ಶಿಕ್ಷಣದ ಮಹತ್ವದ ಬಗ್ಗೆ ಮತ್ತು ಅಂಬೇಡ್ಕರ್ ರವರು ಶಿಕ್ಷಣಕ್ಕಾಗಿ ಎಷ್ಟು ಮಹತ್ವ ನೀಡಿದ್ದರು ಎಂದು ಮಾತನಾಡುತ್ತಾ ಅಂದಿನ ದಿನಗಳಲ್ಲಿ ಅಂಬೇಡ್ಕರ್ ಶಿಕ್ಷಣ ಪಡೆಯಲು ಎಷ್ಟು ಕಷ್ಟ ಮತ್ತು ಅವಮಾನಗಳನ್ನು ಎದುರಿಸಿ ಶಿಕ್ಷಣ ಪಡೆದು ಈ ದೇಶಕ್ಕೆ ಪ್ರಪಂಚದಲ್ಲಿಯೆ ಬೃಹತ್ ಗಾತ್ರದ ಸಂವಿಧಾನವನ್ನು ಬರೆದು ಈ ದೇಶಕ್ಕೆ ಅರ್ಪಿಸಿದರು ಎಂದು ವಿವರಿಸಿದರು ನಂತರ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಬಿ ಹೊಸಹಳ್ಳಿ ಮಲ್ಲಿಕಾರ್ಜುನ ರವರು ಮಾತನಾಡುತ್ತಾ ಕರ್ನಾಟಕ ಜನಸೇವಾ ಚಾರಿಟೇಬಲ್ ಟ್ರಸ್ಟ ಯಾವ ಉದ್ದೇಶೇಕ್ಕೆ ಸ್ಥಾಪಿಸಲಾಯಿತೆಂದರೆ ನಾವು ಯಾವತ್ತೂ ಒಂದು ದಿನ ಸಾಯುವುದು ನಿಶ್ಚಿತ ನಾವು ಸತ್ತರೆ ನಮ್ಮ ಹಿಂದೆ ಏನು ಬರುವುದಿಲ್ಲ ಆದ್ದರಿಂದ ನಾವು ಜೀವನದಲ್ಲಿ ಮೊದಲು ಶಿಕ್ಷಣಕ್ಕೆ ಸಾಥ್ ಕೊಡುವ ಮುಖ್ಯ ಗುರಿಯಾಗಿದ್ದು ಮತ್ತು ಸಮಾಜದ ಸುಧಾರಣೆ ಕಾರ್ಯಗಳ ಉದ್ದೇಶವಿದ್ದು ಜ್ಯೋತಿ ಬಾ ಪುಲೇ,ಸಾವಿತ್ರಿ ಬಾ ಪುಲೇ ಮತ್ತು ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣ ಕ್ಷೇತ್ರಕ್ಕೆ ಸರ್ವ ಜನಾಂಗದ ಹಿತಕ್ಕಾಗಿ ನಮ್ಮ”ಕರ್ನಾಟಕ ಜನ ಸೇವಾ ಚಾರಿಟೇಬಲ್ ಟ್ರಸ್ಟ್” ನ ಮುಖ್ಯ ಉದ್ದೇಶವಾಗಿರುತ್ತದೆ ಮುಂದೆ ಇನ್ನು ಅನೇಕ. ಸಮಾಜ ಸೇವೆಯಲ್ಲಿ ಮುಂದುವರೆಯುವಂತಹ ಟ್ರಸ್ಟ್ ಆಗಿರುತ್ತದೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಬೇಳಕು ಚೆಲ್ಲುವಂತಹ ಶಿಕ್ಷಣ ಗುಣಮಟ್ಟಕ್ಕೆ ಸಹಾಯದ ಸಹಾಭಾಗಿತ್ವ ವಹಿಸುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಜಿ,ಟಿ ಹಳ್ಳಿ ಗ್ರಾಮದ ಪಂಚಾಯತಿ ಸದಸ್ಯರಾದ ಶಾರದಮ್ಮ ಈಶ್ವರಪ್ಪ ,SDMC ಅದ್ಯಕ್ಷರಾದ ನರಸಿಂಹಪ್ಪ ಮತ್ತು ಶಾಲಾ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ ರವರು ಹಾಗೂ ಸಹ ಶಿಕ್ಷಕರಾದ ಹನುಮಂತರಾಯಪ್ಪ,ನಾಗೆಂದ್ರ ಮತ್ತು ಟ್ರಸ್ಟ್ ನ ಅಧ್ಯಕ್ಷರಾದ ಭೀಮನಕುಂಟೆ ರಾಮಾಂಜಿನೇಯ,ಉಪಾಧ್ಯಕ್ಷರಾದ ಪೃಥ್ವಿರಾಜ್ ಕಾರ್ಯದರ್ಶಿ ಗೋಪಾಲ ಮತ್ತು ಟ್ರಸ್ಟ್ ನ ಪದಾಧಿಕಾರಿಗಾಳಾದ ರಾಮಕೃಷ್ಣ(ಶೋಭನ್ ಬಾಬು) ರವಿ ಇಂದ್ರಬೆಟ್ಟ,ಹೊನ್ನೂರಸ್ವಾಮಿ,ಮಧವಾ,ಅಶೋಕ್, ರಾಮಾಂಜಿ YNH,ಎ.ನಾರಾಯಣಪ್ಪ,ನಾಗರಾಜು ಮತ್ತು ಊರಿನ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.
