ಕೊಟ್ಟೂರು;ಬಡವರ ಪಾಲಿನ ಆಶಾಕಿರಣ,ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಜನಮನ್ನಣೆ ಗಳಿಸಿದ ಮತ್ತು ಛಲವಾದಿ ಜನಾಂಗವನ್ನು ರಾಜ್ಯದಲ್ಲಿ ಗುರುತಿಸಿದ ಛಲವಾದಿ ಮಹಾಸಭಾದ ಸಂಸ್ಥಾಪಕರಾದ ಶ್ರೀ ಕೆ ಶಿವರಾಂ ಸರ್ ರವರು ವಿಧಿವಶರಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಮಂಜುನಾಥ ಡಿ ರವರು ತಿಳಿಸಿದರು. ಇದೇ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿಕೋರಿ ಸಮುದಾಯದ ಮುಖಂಡರಾದ ನಾನಿಕೆರಿ ಕೊಟ್ರೇಶ್,ಅಜ್ಜಪ್ಪ crp, ನಿಂಗೇಶ್ ಉಜ್ಜಿನಿ, ಅನಂತ್ ಮಂಗಾಪುರ,ವಾಮದೇವ ಅಲಬೂರು,ನಾಗರಾಜ್ ಅಂಬಳಿ,ಅಜ್ಜಯ್ಯ ಗೊಲ್ಲರಹಳ್ಳಿ,ಶೇಖರ್ ತೂಲಹಳ್ಳಿ,ಕೆಂಚಪ್ಪ ಹನುಮನಹಳ್ಳಿ ಇತರರು
ಉಪಸ್ಥಿತರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.
ವರದಿ.ವೈ:ಮಹೇಶ್ ಕುಮಾರ್ ಕೊಟ್ಟೂರು