ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಪ ನೋಂದಣಿ ಕಛೇರಿಯಲ್ಲಿ ಮಧ್ಯವರ್ತಿಗಳಿಗೂ ಉಪನೊಂದಣಾಧಿಕಾರಿ ರವೀಂದ್ರನಾಥ ಎ ಹಂಚನಾಳನಿಗೂ ಬಿಡಿಸಲಾಗದ ನಂಟು. ಸಾರ್ವಜನಿಕರ ಕೆಲಸಗಳಿಗೆ ಬೇಕೇ ಬೇಕು ನೋಟು..!ಸಾರ್ವಜನಿಕರ ಕೆಲಸಗಳು ಸಬ್ ರಿಜಿಸ್ಟರ್ ಕಛೇರಿಯಲ್ಲಿ ಅಷ್ಟು ಸಲೀಸಾಗಿ ಆಗೋದಿಲ್ಲ ಇಂಡಿ ತಾಲೂಕಿನ ಉಪ ನೋಂದಣಾಧಿಕಾರಿಯೆ ಖುದ್ದಾಗಿ ಹೇಳುತ್ತಾನೆ ಮಧ್ಯವರ್ತಿಗಳ ಹತ್ರ ಹೋಗಿ ಹಣ ಕೊಟ್ಟು ಕೆಲಸ ಮಾಡಿಕೊಳ್ಳಿ ಅಂತ.ಅದು ಅಷ್ಟೋ ಇಷ್ಟೋ ಹಣ ಅಲ್ಲ ಒಂದೊಂದು ಕೆಲಸಕ್ಕೂ ಒಂದೊಂದು ರೇಟು ಮಾತಾಡಿ ಅವನ ನೆಚ್ಚಿನ ಮದ್ಯವರ್ತಿಗಳಿಗೆ…!ಎಜೇಂಟ್ ರಿಗೆ ತಯಾರಿ ಮಾಡಿ ಹಸಿದ ನರಿಗಳ ಹಾಗೆ ಮಿನಿ ವಿಧಾನ ಸೌಧದ ಉಪ ನೊಂದಣಿ ಕಛೇರಿಯ ಮುಂದೆ ದೃಷ್ಟಿ ಗೊಂಬೆಯ ಹಾಗೆ ಮುಂದೆ ನಿಲ್ಲಿಸಿರುತ್ತಾನೆ ಅದು ಒಬ್ಬರೋ ಇಬ್ಬರೂ ಅಲ್ಲ 20 ಜನಕ್ಕೂ ಮೀರಿ..!
ಯಾರಾದರೂ ಪ್ರಶ್ನೆ ಮಾಡಿದರೆ ಅವನು ಸಾಕಿರುವ ಅವನ ನೆಚ್ಚಿನ ಮದ್ಯವರ್ತಿಗಳು/ಎಜೇಂಟರೆ ಈ ಭ್ರಷ್ಟ ಉಪ ನೊಂದಣಾಧಿಕರಿಗೆ ಶ್ರೀರಕ್ಷೆ ಇವರು ಮಾಡುತ್ತಿರುವ ಈ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಿದರೆ ಈ ಅಧಿಕಾರಿಯ ಒಂದು ಸನ್ನೆಯೇ ಸಾಕು ಅವರಿಗೆ ಅವಾಜ್ ಹಾಕಿ ಗೂಂಡಾಗಿರಿ ನಡೆಸುತ್ತಿದ್ದಾರೆ ಮಧ್ಯವರ್ತಿಗಳು ಮತ್ತು ಇಂಡಿ ತಾಲೂಕಿನ ಹೆಮ್ಮೆಯ ಭ್ರಷ್ಟ ಅಧಿಕಾರಿ ದುಡ್ಡಿನ ಅಮಲಿನಲ್ಲಿ…. ಸಾರ್ವಜನಿಕರ ಜೊತೆ ದುಡ್ಡಿಗಾಗಿ ಗುಂಡಾ ವರ್ತನೆ. ಮಾಡುತ್ತಾರೆಂದು
ಎಂದು ಹಣ ಕಳೆದುಕೊಂಡು ನೊಂದ ಜನರು ಆರೋಪಿಸಿದ್ದಾರೆ.
ಒಬ್ಬ ಸರ್ಕಾರಿ ನೌಕರರಾಗಿ
ಏಜೆಂಟರ ಜೊತೆ ಇಂಡಿ ತಾಲೂಕಿನ ಉಪ ನೊಂದಣಾಧಿಕಾರಿ
ಗುಂಪು ಕಟ್ಟಿಕೊಂಡು ಹರಟೆ ಹೊಡೆಯುವದನ್ನು ಸಾರ್ವಜನಿಕರು ತಮ್ಮ ಮೊಬೈಲಗಳಲ್ಲಿ ಸೆರೆ ಹಿಡಿದಿದ್ದಾರೆ.
ಮದ್ಯವರ್ತಿಗಳ ನಂಟು ಎಂಥದ್ದು ಎಂದರೆ ಉಪ ನೊಂದಣಾಧಿಕಾರಿಗಳ ವಾಹನಕ್ಕೂ ಏಜೇಂಟರೆ ಚಾಲಕರಾಗಬೇಕು..!
ಇಂತಹ ನಂಟಿನ ಮಧ್ಯ ಮದ್ಯವರ್ತಿಗಳ ಜೋತೆ ಸೇರಿ ಸಾರ್ವಜನಿಕರಲ್ಲಿ ಪಿಕುತ್ತಿದ್ದಾರೆ ಕಂತೆ ಕಂತೆ ನೋಟು..!
ಜನ ಸಾಮಾನ್ಯರು ಹಾಗೂ ರೈತರು ನೋಂದಣಿಗಾಗಿ ಅರ್ಜಿ ಸಲ್ಲಿಸುವಾಗ ವಿಪರಿತ ಹಣವನ್ನು ಪಡೆಯುತ್ತಿರುವ ಬಗ್ಗೆ ಹಾಗೂ ಮಧ್ಯವರ್ತಿಗಳು ನೋಂದಣಾಧಿಕಾರಿ ಕಛೇರಿಯಲ್ಲಿ ಇದ್ದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಈ ವಿಷಯದ ಕುರಿತು ಮಾದ್ಯಮದಲ್ಲಿ ವರದಿಗಳು ಸಹ ಬಂದಿವೆ ಕಾರಣ ಇನ್ನೂ ಮುಂದೆ ಯಾವುದೇ ಅರ್ಜಿ ಸಲ್ಲಿಸುವಾಗ ಸರ್ಕಾರದ ನೋಂದಣಿ ಶುಲ್ಕ ಹಾಗೂ ಮುದ್ರಾಂಕ ಶುಲ್ಕ ಹೊರತು ಪಡೆಸಿ ರೂ 50 ಗಿಂತ ಹೆಚ್ಚಿನ ಶುಲ್ಕ ಪಡೆಯುವ ಹಾಗಿಲ್ಲ ಹಾಗೂ ಹೆಚ್ಚಿನ ಶುಲ್ಕ ಮತ್ತು ದಲ್ಲಾಳಿಗಳು ಆ ಕಚ್ಚೆರಿಯಲ್ಲಿ ಕಂಡು ಬಂದರೆ ಮುಲಾಜಿಲ್ಲದೆ ಅವರ ಮೇಲೆ ಎಫ್ ಐ ಆರ್ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೊಳ್ಳಲಾಗುವದು ಎಂದು ಉಪ ವಿಭಾಗಾಧಿಕಾರಿ ಇಂಡಿ ಅಬಿದ್ ಗದ್ಯಾಳ ತಿಳಿಸಿದ್ದಾರೆ
ವರದಿ:ಅರವಿಂದ್ ಕಾಂಬಳೆ ಇಂಡಿ