ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಲದ ಸುಳಿಗೆ ಸಿಲುಕಿ ನಲುವುದಕ್ಕಿಂತ ಸರಳ ವಚನ ಮಾಂಗಲ್ಯ ಮಾಡಿಕೊಳ್ಳುವುದು ಸೂಕ್ತ

ಮೈಸೂರು:
ನರಸಿಂಹರಾಜಪುರದ ದೊಡ್ಡಿನತಲೆ ಪುಷ್ಪ ಬಸವರಾಜು ರವರ ಪುತ್ರಿ ವಚನ ಹಾಗೂ ಚಾಮರಾಜನಗರ ಜಿಲ್ಲಾ ವಿ.ಸಿ.ಹೊಸೂರಿನ ಮೀನಮ್ಮ ಪ್ರಕಾಶ ರವರ ಪುತ್ರ ಮಂಜುನಾಥ್ ರವರ ಕಲ್ಯಾಣ ಮಹೋತ್ಸವ ನರಸಿಂಹರಾಜಪುರದ ಬಸವಕೇಂದ್ರದ ಅನುಭವ ಮಂಟಪದಲ್ಲಿ ಪೂಜ್ಯ ಶ್ರೀ ಬಸವಯೋಗಿಪ್ರಭುಗಳ ನೇತೃತ್ವದಲ್ಲಿ ನಿಜಚಾರಣೆಯ ಮೂಲಕ ನಡೆಯಿತು.ಆಶೀರ್ವಾಚನ ನೀಡಿದ ಬಸವಯೋಗಿ ಪ್ರಭುಗಳು ಲಿಂಗಾಯತ ಧರ್ಮದವರು
ಯಾವುದೇ ಮೂಢನಂಬಿಕೆ ಆಚರಣೆಗಳನ್ನು ಮಾಡಬಾರದು ಬಸವಾದಿ ಶರಣರ ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಗಳ ಅಷ್ಟವರಣಗಳ ಮೂಲಕ ಕಲ್ಯಾಣ ಮಹೋತ್ಸವ ನಡೆಯಬೇಕು.ಅಕ್ಕಿ ಚೆಲ್ಲುವುದು ಹಾಲು ತುಪ್ಪ ವ್ಯರ್ಥ ಮಾಡುವುದು ಶಾಸ್ತ್ರ ಪಂಚಾಗ ಕೇಳುವುದು ಲಿಂಗಾಯತ ಧರ್ಮದ ಆಚರಣೆ ಅಲ್ಲ. ಆಡಂಬರದ ದುಂದು ವೆಚ್ಚದ ಮದುವೆ ಮಾಡುವುದು ಸಾಲದ ಸುಳಿಗೆ ಸಿಲುಕಿ ನಲುವುದಕ್ಕಿಂತ ಸರಳ ವಚನ ಮಾಂಗಲ್ಯ ಮಾಡಿಕೊಳ್ಳುವುದು ಸೂಕ್ತವೆಂದರು ಸತಿ ಪತಿಗಳು ಜೀವನದಲ್ಲಿ ಏನೆ ಕಷ್ಟ ಬಂದರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು.ಪರನಿಂದೆ ಪರಹಿಂಸೆ ಪರಧನ ಪರಸತಿ
ಪರಪತಿ ಪಾತಕಗಳನ್ನು ಮಾಡದೇ ಕಾಯಕ ಧಾಸೋಹ ಬಸವಯೋಗವನ್ನ ಅಳವಡಿಸಿಕೊಂಡು ಬದುಕಬೇಕು ಬಸವಣ್ಣನವರ ವಚನಗಳನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ನೂತನ ಸತಿ ಪತಿಗಳು ಬದುಕಬೇಕು ಎಂದು ಬಸವ ಮಾರ್ಗವನ್ನು ತಿಳಿಸಿದರು.ಈ ರೀತಿಯ ಸರಳ ವಚನ ಮಾಂಗಲ್ಯ ಹೆಚ್ಚಿನ ರೀತಿಯಲ್ಲಿ ನಡೆಯಬೇಕು ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಮೂಢನಂಬಿಕೆ ತೋಲಗಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ವಚನ ಗಾಯಕರಾದ ತೋಟಪ್ಪ,ವಧು ಮತ್ತು ವರನ ಕುಟುಂಬದವರು ಪುಟ್ಟಸ್ವಾಮಿ ಸೋಮೇಶ್ ನತೀಶ್ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ