ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

೧೨ ವರ್ಷ ಮೈಸೂರು ಒಡೆಯರ ಮಹಾರಾಜರುಗಳಿಗೆ ಆಶ್ರಯ ನೀಡಿ ಇತಿಹಾಸದಲ್ಲಿ ಮಾಸದ “ಜಗನ್ಮೋಹನ ಅರಮನೆ

ಮೈಸೂರು:”ಜಗನ್ಮೋಹನ ಅರಮನೆ
1871ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಿಂದ ಸ್ಥಾಪನೆ ಆಯಿತು.ಅವರು ವಾಸವಿದ್ದ ಅರಮನೆ 1871ರಲ್ಲಿ ಅಗ್ನಿ ಅವಘಡಕ್ಕೆ ಸಿಕ್ಕಿದಾಗ ರಾಜವಂಶಸ್ಥರು ಇಲ್ಲಿ 12 ವರ್ಷಗಳ ಕಾಲ ವಾಸವಾಗಿದ್ದರು.ಬೇಸಿಗೆ ಅರಮನೆಯಾಗಿದ್ದ ಈ ಕಟ್ಟಡ ಸಾವಿರದ ಒಂಬೈನೂರ ಹದಿನೈದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಅರಮನೆ ಚಿತ್ರಶಾಲೆಯಾಗಿ ಬದಲಾವಣೆ ಹೊಂದಿತು.ಮೈಸೂರು ರಾಜವಂಶಸ್ಥರು ಐದು ತಲೆ ಮಾರಿನ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.ತೈಲ ವರ್ಣ ಚಿತ್ರಗಳು,ಜಲ ವರ್ಣ,ಛಾಯಾಚಿತ್ರ ಹಾಗೂ ಅನೇಕ ಪುರಾತನ ವಸ್ತುಗಳು ಇಲ್ಲಿವೆ.ಗಂಧ,ದಂತ,ಲೋಹ ಶಿಲ್ಪ ಹೀಗೆ ವಿಧ ವಿಧವಾದ ಕಲಾಕೃತಿಗಳಿವೆ.ರಾಜಾ ರವಿವರ್ಮನ ಅಪೂರ್ವ ಕಲಾಕೃತಿಗಳ ಭಂಡಾರ ಇದೆ “ದೀಪ ಹೊತ್ತ ಮಹಿಳೆ “ಎಂಬ ಜಲ ವರ್ಣ ಚಿತ್ರ ಇಲ್ಲಿನ ವಿಶೇಷ 1820 ರಲ್ಲಿ ಫ್ರಾನ್ಸ್ ದೇಶದಿಂದ ಆಮದು ಮಾಡಿಕೊಂಡ ಗಡಿಯಾರ ಎಲ್ಲರನ್ನು ಸೆಳೆಯುತ್ತ ಬಂದಿದೆ.500 ಕ್ಕೂ ಹೆಚ್ಚು ಚಿತ್ರಗಳನ್ನು ಹೊಂದಿರುವ ಭಾರತ ದೇಶದ ಏಕೈಕ ಕಲಾ ಸಂಗ್ರಹ ಎಂಬ ಹೆಸರಿಗೆ ಪಾತ್ರವಾಗಿದೆ.ಮೈಸೂರು ಶೈಲಿಯ,ಮೊಘಲ್ ಶೈಲಿ,ರಾಜಸ್ಥಾನ ಶೈಲಿ,ಕಂಪನಿ ಶೈಲಿ,ಶಾಂತಿನಿಕೇತನದ ಬಂಗಾಳ ಶೈಲಿಯ ಚಿತ್ರಗಳು ಇಲ್ಲಿ ರಾರಾಜಿಸಿವೆ. ಮೈಸೂರು ಸಂಸ್ಥಾನವನ್ನು ಆಳಿದ ಯದುವಂಶದ ರಾಜರುಗಳ ವರ್ಣ ಚಿತ್ರಗಳು ಹಾಗೂ ಮೈಸೂರು ಸಂಸ್ಥಾನವನ್ನು ೧೮೯೧ ರಿಂದ 1947ರ ವರೆಗೆ ಆಳಿದ ನಾಲ್ಕು ಮಹಾರಾಜರುಗಳಾದ ಮುಮ್ಮಡಿ ಕೃಷ್ಣರಾಜ ಒಡೆಯರ್,10ನೇ ಚಾಮರಾಜ ಒಡೆಯರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ರವರ ಬೃಹತ್ ಕಲಾ ಕೃತಿಗಳು ಪ್ರದರ್ಶಿಸಲ್ಪಟ್ಟಿವೆ ನಾಲ್ವಡಿ ಕೃಷ್ಣರಾಜ ಒಡೆಯರ ವಿವಾಹ ಮಹೋತ್ಸವದ ಅತಿ ದೊಡ್ಡ ತೈಲ ವರ್ಣ ಚಿತ್ರ ಹಾಗೂ ದಸರಾ ದರ್ಬಾರ್ ನ ಪ್ರಮುಖ ಆಕರ್ಷಣೆ ಈ ಕಟ್ಟಡದ ಎರಡನೇ ಮಹಡಿಯಲ್ಲಿ ಅಪೂರ್ವ ವಾದ್ಯಗಳ ಸಂಗ್ರಹವೇ ಇದ್ದು ಮತ್ತೊಂದು ಹಜಾರದಲ್ಲಿ ಬಿತ್ತಿ ಚಿತ್ರ ನೆಲದಿಂದ ತಾರಸಿಯವರೆಗೆ ಅಲ್ಲಿನ ದಸರಾ ಜಂಬೂಸವಾರಿಯ ವೈಭವವನ್ನು ಪ್ರತಿಬಿಂಬಿಸುತ್ತಿದೆ.ಮೊದಲನೇ ಮಹಡಿಯಲ್ಲಿ ಪುರಾತನ ಪೀಠೋಪಕರಣ,ಮೈಸೂರು ಮಹಾರಾಜರ ಚಿತ್ರಗಳು,ರಷ್ಯಾದ ಕಲಾವಿದ ನಿಕೋಲಸ್,ರೋರಿಚ್ ಅವರ ಹಿಮಾಲಯ ಜಲವರ್ಣ ಚಿತ್ರಗಳು ಇಲ್ಲಿ ಹೊಂದಿವೆ 1955ರಲ್ಲಿ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಈ ಚಿತ್ರ ಶಾಲೆಯನ್ನು ಸಾರ್ವಜನಿಕ ದತ್ತಿ ಸಂಸ್ಥಾನವಾಗಿ ಪರಿವರ್ತಿಸಿ “ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ” ಎಂದು ನಾಮಕರಣ ಮಾಡಿದರು.

ವರದಿ:ಚೇತನ್ ಕುಮಾರ್,ಎಂ ಕೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ