ಯಾರು ಬಂದವರು ಇಲ್ಲಿಗೆ
ಧರೆಯ ನೋಡಲೆಂದು
ಸನಿಹದ ಸುತ್ತಲೂ
ಕವಿದಿದೆ ಕತ್ತಲು
ಸದ್ದು ಗದ್ದಲಗಳೆ ಆವರಿಸಿದೆ ಎಲ್ಲವು ಮೌನ
ಎಲ್ಲೋ ಇರುವೆವೆಂಬ ಬಾನಂಚಿನ ನಕ್ಷತ್ರಗಳ
ಸುಳಿವುಗಳ ಹುಡುಕುತ್ತಾ ಯಾರು ಬಂದವರು
ಎಲ್ಲವೂ ಶ್ವಾಸದ ಪಿಸುಗುಟ್ಟುವಿಕೆ
ತಾ ಮನವು ಚಡಪಡಿಸುವಿಕೆ ಅರಿವಿನಿಂದಾವ್ರತ
ಗದ್ದಲಗಳಾಚೆ ಮುಗಿದಿದೆ ಮೌನದ ಮಾತು
ನಕಾರತೆಯ ತರಂಗಳಾಚೆ ಚಲನವೀಯ
ಕಾಲದ ನಿರ್ದಿಷ್ಟತೆಗೆ ಬೆರಗು ನುಡಿಗಳ ಆಶ್ಚರ್ಯ!.
-ಚೇತನ್ ಕುಮಾರ್,ಮೈಸೂರು




















