ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೌನ ಕೋರಿಕೆ

ಕಲಿಕೆಯೊಳಗಿನ ಮೊಳಕೆಯೊಂದು ಪುಳಕದ ಸೆಳೆತಕೆ ಸಿಲುಕಿ
ತಳುಕು ಬಳುಕಿನ ಕೊಳಕು ಮನದ ಕನ್ಯೆಯ ಸೂಕ್ಷ್ಮ ಸನ್ನೆಯೊಂದು ಕ್ಷಮಿಸೆನ್ನುತಿದೆ ಪ್ರತೀ ಕ್ಷಣವಿಂದು| ಮುದುಡಿ ಮಂಕಾದ ಎನ್ಮನದಲಿಂದು….!!

ಯೌವ್ವನದಲಿ ಎಲ್ಲವನೂ ಸಹಿಸಿ ಸಿಹಿ ಬೆಲ್ಲದ ನೆಪದಿ ಗಲ್ಲವನಿಡಿದು ಮೆಲ್ಲಗೆ ಮುಂದೆ ಹೆಜ್ಜೆಯನಿಕ್ಕುತ ಭಯವ ತೊರೆದಾ ಬಯಕೆಯ ಹಂಬಲಕೆ ಹಿಂಬಾಲಕರಿಗಂಜದೆ|
ಹಿಂದಿಂದೆ ಸುಳಿದಾಕ್ಷಣವ ಮೆರೆತು ಕಂಡರೂ ಕಣ್ಮರೆಯಾದಂತಿರುವಿ ನೀನಿಂದು….!!

ಕರ ಬೆರಳನು ಪಿಡಿದು ಕರುಳ ಕಂಬನಿಯ ಮಿಡಿದು
ಸರಳ ಸನಿಹದಲಿ ನೆರಳೆಂದು ಪೇಳಿದ ನೀಳ ನಲ್ಮೆಯ| ನಡೆ ನುಡಿಗಳಿಂದು ನಡೆದು ಹೋಗಿವೆ ಬಹುದೂರ ಬಾರದೂರಿಗೆ ಬರಿದಾದ ಬದುಕಲಿಮಿಂದು….!!

ಅತ್ತ ಇತ್ತ ಎತ್ತ ಸುತ್ತಲೂ ಸುಳಿದರೂ ಕತ್ತಲಾವರಿಸಿದ ಮನಕೆ ಬೆಳಕನಿಕ್ಕಲು ಓರ್ವರಿಲ್ಲದ ಒಂಟಿ ಹೃದಯದ ಒಡೆತನಕೆ| ಕಂಟಕವಾವರಿಸಿದೆಯೆಂದು ಸಂಕಟದಿ ಬೆರೆಯದೆ ಸಂತೋಷದಾ ಸಂಬಂಧವು ಮರಳಿ ಅರಳಿ ದೊರೆಯಲೆಂಬ ಬಯಕೆಯ ಹೊತ್ತಿರುವೆ ನಾನಿಂದು….!!

-ಹನುಮಂತ ದಾಸರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ