ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ 28ನೇ ಕಾಲುವೆ ಗ್ರಾಮದಲ್ಲಿ ಮಾಜಿ ಶಾಸಕರಾದ ಬಸವರಾಜ ಧಡೆಸೂಗೂರು ಅವರು ತಮ್ಮ ಅನುದಾನದ ದೇವಸ್ಥಾನ ಜೀರ್ಣೋದ್ಧಾರ ಅಡಿಯಲ್ಲಿ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನಕೆ 1,00,000/- (ಒಂದು ಲಕ್ಷ ರೂಪಾಯಿ) ನೀಡಿದ್ದರು.ಗ್ರಾಮಸ್ಥರು ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ದಡೇಸೂಗೂರ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆಯಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.ಈ ಸಂಧರ್ಭದಲ್ಲಿ ಕಮಿಟಿಯ ಅಧ್ಯಕ್ಷರು ಬ್ರಹ್ಮರ್ಜುನರಾವ್,ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಿ.ಮಂಜುನಾಥ ನಾಯಕ,ಲಕ್ಕಪ್ಪ ಕಲ್ಗುಡಿ,ಚಂದ್ರಮೌಳಿ,ರಾಮಣ್ಣ ಬಿ,ಗುರುನಾಗ, ಸತ್ಯಪ್ಪ ಸುರಂಪುಡಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ವರದಿ-ಹನುಮೇಶ ಭಾವಿಕಟ್ಟಿ



















