ಸಿಂಧನೂರು ನಗರದ ವಾಣಿಜ್ಯ ತೆರಿಗೆಗಳ ಇಲಾಖೆ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ಕಾರ್ಯಾಲಯ ಆವರಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ,ನ್ಯಾಷನಲ್ ಕಾಲೇಜ್ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವನಸಿರಿ ಫೌಂಡೇಶನ್ ಸಹಯೋಗದೊಂದಿಗೆ ಬೇಸಿಗೆಯ ಅಂಗವಾಗಿ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗಗಳ ಇಲಾಖೆಯ ಸಹಾಯಕ ಆಯುಕ್ತರಾದ ಎಸ್ ಎನ್ ಪಾಟೀಲ್ ಪಕ್ಷಿಗಳಿಗೆ ಕಾಳು ನೀರು ಹಾಕುವ ಮೂಲಕ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅಭಿಯಾನ ಕೈಗೊಂಡು ರಾಜ್ಯಾದ್ಯಂತ ಪ್ರಾಣಿ ಪಕ್ಷಿಗಳ ಸಂಕುಲ ಉಳಿವಿಗಾಗಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ.ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ,ಗಿಡಮರಗಳಿಗೆ,ಅರವಟ್ಟಿಗೆಗಳನ್ನು ನಿರ್ಮಿಸಿ ಕಾಳು,ನೀರು ಹಾಕಿ ಪಕ್ಷಿಗಳ ಬಾಯಾರಿಕೆಯನ್ನು ತೀರಿಸುವ ಮೂಲಕ ಪಕ್ಷಿಗಳ ಸಂಕುಲ ಉಳಿವಿಗಾಗಿ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ನಂತರ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಧಿಕಾರಿ ಹಾಗೂ ನ್ಯಾಷನಲ್ ಕಾಲೇಜು ಉಪನ್ಯಾಸಕರಾದ ಎಸ್ ರವಿಕುಮಾರ ಮಾತನಾಡಿ ಪ್ರತಿವರ್ಷ ಎಪ್ರಿಲ್ ನಲ್ಲಿ ಬೇಸಿಗೆ ಕಾಲ ಶುರುವಾಗುತ್ತಿತ್ತು ಆದರೆ ಈ ಬಾರಿ ಮಳೆಯ ಕೊರತೆಯಿಂದ ಜನವರಿ ಫೆಬ್ರುವರಿಯಲ್ಲೇ ಬೇಸಿಗೆಕಾಲ ಶುರುವಾಗಿದೆ ಮನುಷ್ಯರಾದ ನಾವು ಮಾತನಾಡುವ ಮೂಲಕ ಬಾಯಾರಿಕೆಯನ್ನು ಈಡೇರಿಸಿಕೊಳ್ಳುತ್ತೇವೆ ಆದರೆ ಪ್ರಾಣಿ ಪಕ್ಷಿಗಳಿಗೆ ಮಾತನಾಡಲು ಆಗುವುದಿಲ್ಲ ಈ ಬೇಸಿಗೆಯಲ್ಲಿ ನೀರು ಹುಡುಕಿದರು ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ನಮ್ಮ ಸಿಂಧನೂರಿನ ವನಸಿರಿ ಫೌಂಡೇಶನ್ ತಂಡ ರಾಜ್ಯಾದ್ಯಂತ ಪಕ್ಷಿಗಳ ಅರವಟ್ಟಿಗೆ ಕಟ್ಟಿ ಪಕ್ಷಿಗಳಿಗೆ ಕಾಳು ನೀರು ಹಾಕು ಕಾರ್ಯದಲ್ಲಿ ತೊಡಗಿದೆ ಈ ಕಾರ್ಯದಲ್ಲಿ ನಾವುಗಳು ಭಾಗವಹಿಸುತ್ತಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಸತೀಶ,ಮಲ್ಲಿಕಾರ್ಜುನ,ಸೂಗೂರಪ್ಪ,ಎಮ್ ಶಿವಶಂಕರ,ಭೋನೇಶಪ್ಪ,ಕುಮಾರಿ ರೇಣುಕಾ,ಗುರುಶಾಂತ ಸ್ವಾಮಿ,ಇರ್ಫಾನ್,ದುರುಗಪ್ಪ, ನರಸಿಂಹ,ನ್ಯಾಷನಲ್ ಕಾಲೇಜು ಪ್ರಾಧ್ಯಾಪಕರಾದ ರಾಮಕೃಷ್ಣ ಭಂಡಾರಿ,ಮಾರಯ್ಯ,ವನಸಿರಿ ಫೌಂಡೇಶನ್ ಸದಸ್ಯರಾದ ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ಸದಸ್ಯರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿದ್ಯಾರ್ಥಿಗಳು ಇದ್ದರು.