ಬೀದರ್ ನಗರದ ನಿರಂಜನ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಸ್ಪರ್ಧ ಗುರು ಬೀದರ,ಐಎಎಸ್,ಕೆಎಎಸ್ ಸ್ಟಡಿ ಸೆಂಟರ್ ವತಿಯಿಂದ ನಗರದ ಗುಂಪಾ ರಸ್ತೆಯಲ್ಲಿನ ಬೆಲ್ದಾಳೆ ಪೆಟ್ರೋಲ್ ಬಂಕ್ ಹಿಂದುಗಡೆಯ ಬಸವ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ದಿನಾಂಕ 10/03/2024 ರಂದು ರವಿವಾರ ಬೆಳಿಗ್ಗೆ 10:30 ಗಂಟೆಗೆ ಗ್ರಾಮ ಆಡಳಿತ ಅಧಿಕಾರಿ (ತಲಾಟಿ),ಭೂಮಾಪಕರು,ಟಿ.ಇ.ಟಿ,ಕೆ.ಎ.ಎಸ್ ಮುಂತಾದ ನೇಮಕಾತಿ ಪರೀಕ್ಷೆ ಕುರಿತು ಒಂದು ದಿನದ ಉಚಿತ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಅಭ್ಯರ್ಥಿಗಳಿಗೆ ನೇರವಾಗಲು 100 ಅಂಕದ ಮಾದರಿ ಪರೀಕ್ಷೆಯು ನಡೆಯಲಿದೆ ಎಂದು ಸೆಂಟರ್ ಮುಖ್ಯಸ್ಥ ಅಮಿತ್ ಸೋಲಪುರೆ ತಿಳಿಸಿದ್ದಾರೆ.2023 ರಲ್ಲಿ ಟಿ.ಇ.ಟಿ ಅರ್ಹತೆ ಹಾಗೂ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.ಈ ಕಾರ್ಯಗಾರಕ್ಕೆ ತಮ್ಮ ಹೆಸರನ್ನು ನೋಂದಾಯಿಸಲು ಹೆಚ್ಚಿನ ಮಾಹಿತಿಗಾಗಿ 8105332701 ಅಥವಾ 8105327282 ವಾಟ್ಸಾಪ್ ಮುಖಾಂತರ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಸೆಂಟರ್ ಸಂಚಾಲಕರಾದ ರಮೇಶ್ ಮರ್ಜಾಪುರ್ ರವರು ತಿಳಿಸಿದ್ದಾರೆ.
ವರದಿ:ರೋಹನ್ ವಾಘಮಾರೆ



















