ನೆನಪು ಮರುಕಳಿಸಿದಾಗ
ಕಳೆದಕ್ಷಣಗಳು ಸಾವಿರ ನಕ್ಷತ್ರಗಳಂತೆ
ಕಣ್ಣಿಗೆ ಕಾಣುವುದು
ಮಿನಗುತಲಿರುವಂತೆ ಕಂಡಂತೆ
ಆಗೋಚರ ನೆನಪುಗಳು
ಕಾಣದ ಹಲವು ಕ್ಷಣಗಳು
ಮರೆಯದ ಭಾವನೆಗಳು
ಸಾವಿರ ದುಖಃಗಳು ಯಾವುದೆ ಪ್ರತಿಬಿಂಬವ ಸಾರದೆ
ಕನಸುಗಳಂತೆ ಮಿಂಚಿಮರೆಯಾದ
ಮನಸ್ಸಿನ ತೊಡಕುಗಳು ಸಾವಿರ ಮಿತ್ರರಂತೆ
ಬಾನಿನಲ್ಲಿ ಕಂಡಂತೆ ಜೀವನದ
ಅಂತ್ಯಕಂಡರೂ ಮುಂದಿನ ಹೋರಾಟ
ಮತ್ತೇನಲ್ಲ ಅದು ಕನಸು.
ಭಾವನೆಗಳು ಅಂತ್ಯ ಮನಸ್ಸುಗಳ
ಮಾನವಿಕ ತೊಳಲಾಟ
ಕವಿತೆಗಳು ನದಿಯಂತೆ ಹರಿಯುವ ಹೊತ್ತು
ಕಣ್ಣಂಚಿನಲ್ಲಿ ಮಿಂಚಿ ಮರೆಯಾದ ಕ್ಷಣಗಳು
ನೆನಪು ಮರುಕಳಿಸಿದಾಗ ಸಾವಿರ ಹೊತ್ತು
-ಚೇತನ್ ಕುಮಾರ್ ಎಂ.ಕೆ.