ಗಂಗಾ ಸಾಗರಗಾಮಿಯಾಗುತ್ತಾಳೆ,ಹಾಗೆಯೇ ಋಷಿಗಳ ತಪಸ್ಸಿನಿಂದ ಅವತರಿಸಿ ಬಂದ ಜ್ಞಾನ ಗಂಗೆ ಅಲ್ಲಿಯೆ ತಳುವುದೆ ಲೋಕ ಹಿತಾರ್ಥವಾಗಿ ಪಾತ್ರ ಪಾತ್ರಗಳಲ್ಲೆ ನಾಲೆ ಕಾಲುವೆಗಳಲ್ಲಿ ಹರಿದು ಬರಬೇಕು. ವಿದ್ಯಾತಪಸ್ಸಿನಲ್ಲಿ ತೊಡಗಿರುವ ಶ್ರದ್ಧಾಂಶರು ಕಿಂಚಿತ್ ಸಂಬೋತರು ಅಂಥವರು ಪಡೆದ ಜ್ಞಾನ ಗಂಗೆಯು ಉದ್ಭವ ಅಗತ್ಯ ಅದೇ ನಮ್ಮ ಸಂಶೋಧನಾಂಗದ ಕಾರ್ಯಕ್ಷೇತ್ರ.ಆ ಸಂಶೋಧನೆ ಭೋಧನವಾಗಿ ವಿದ್ಯಾರ್ಥಿಗಳಲ್ಲಿ ಹರಿದು ಹೋಗಬೇಕು.ಅದು ಭೋಧನಾಂಗದ ಕಾರ್ಯ ಮೇಲಾಗಿ ನದೀ ಪಾತ್ರದಿಂದ ಗಂಗೋತ್ರಿಯಿಂದ ಬಹುದೂರಗತವಾದ ಒಳನಾಡಿನ ಜನತೆಗೆ ಕಾಲುವೆಯು ನೀರಾಗಿ ಹರಿದು ಅವರು ಮನೆಯ ಬಾಗಿಲಿಗೆಹೋಗಬೇಕು.ಅವರ ಜೀವನ ಕ್ಷೇತ್ರವನ್ನೆಲ್ಲಾ ಆರ್ದ್ರಗೊಳಿಸಿ ಹುಲುಸಾಗಿ ಬೆಳೆಸಬೇಕು,ಶಕ್ತಿವತ್ತಾಗಿ ಮಾಡಬೇಕು.ಅದೇ ಪ್ರಸಾರಂಗದ ಕಾರ್ಯವಾಗಿದೆ ಮಾನಸ ಗಂಗೋತ್ರಿಗೆ ಅವತರಿಸುವ ಮಾನಸ ಅತೀಮಾನಸ ಗಂಗೆ ಯಾವ ದೇಶದಿಂದಲಾದರೂ ಬರಲಿ,ಯಾವ ಭಾಷೆಯಿಂದಲಾದರೂಹರಿದು ಬರಲಿ,ಯಾವ ಕಾಲದ ಯಾವ ವ್ಯಕ್ತಿ ಶಕ್ತಿಗಳಿಂದಲಾದರೂ,ಯಾವ ಮತ ಧರ್ಮ ದಿಂದಲಾದರೂ,ಅವತರಿಸಿ ಬರಲಿ,ಇಲ್ಲಿನ ವಿದ್ವದ್ದುಪಾಸಕರು ಅದನ್ನು ಸ್ವೀಕರಿಸಬೇಕು ಆದರೆ ಅವರಿಂದ ಅಲ್ಲಿಂದ ಹೊರಬರಬೇಕಾದ ಜ್ಞಾನ ಗಂಗೆ ಮೊದಲು ನಮ್ಮ ನೆಲದಲ್ಲಿ ಹರಿಯಬೇಕು.ನಮ್ಮ ನುಡಿಯಲ್ಲೆ ಮೂಡಿಬರಬೇಕು ಎಂಬುದು ಕುವೆಂಪುರವರ ಅಭಿಲಾಷೆಯಾಗಿತ್ತು.
ಲೇಖನ:ಚೇತನ್ ಕುಮಾರ ಎಂ.ಕೆ
ಎಂ,ಎ. ಎಂ,ಫಿಲ್ ಇನ್ ಅಂಬೇಡ್ಕರ್ ಅದ್ಯಯನ ಕೇಂದ್ರ,
ಮಾನಸ ಗಂಗೋತ್ರಿ,ಮೈಸೂರು.