ಕಂಪ್ಲಿ ತಾಲೂಕಿನ ನಂ 3 ಸಣಾಪುರ ಗ್ರಾಮದ ಶ್ರೀ ಉದ್ಭವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಂಪ್ಲಿ ವನಸಿರಿ ಫೌಂಡೇಶನ್ ತಾಲೂಕ ಘಟಕದ ವತಿಯಿಂದ ಬೇಸಿಗೆಯ ಕಾಲದ ಅಂಗವಾಗಿ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ನೆರವೇರಿತು.ಈ ಕಾರ್ಯಕ್ರಮವನ್ನು ಪರಮ ಪೂಜ್ಯ ಶ್ರೀ ಶಿವ ಶಾಂತವೀರ ಶರಣರು ಬಳಗಾನೂರ ಸುಕ್ಷೇತ್ರ ಅವರು ಹಕ್ಕಿ ಪಕ್ಷಿಗಳಿಗೆ ಕಾಳು ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಕ್ಕಿ ಪಕ್ಷಿಗಳ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಕ್ಷೇತ್ರ ಬಳಗಾನೂರಿನ ಪರಮ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಮಾತನಾಡಿ ದಯವಿರಲಿ ಸಕಲಜೀವರಾಶಿಗಳಲ್ಲಿ ದಯವೇ ಧರ್ಮದ ಮೂಲವಯ್ಯಾ ಎನ್ನುವಂತೆ ಯಾವುದೇ ಜೀವರಾಶಿಗಳಿಗೆ ದಯೆ ತೋರಿದರೆ ನಮ್ಮ ಮಾನವ ಧರ್ಮಕ್ಕೆ ಸುಖವುಂಟಾಗಲಿದೆ.ವನಸಿರಿ ಫೌಂಡೇಶನ್ ನಿಂದ ಸುಡುಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ಕಾಳು ಮತ್ತು ನೀರು ಹಾಕು ಅರವಟ್ಟಿಗೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.ಬಿಸಿನ ಬೇಗೆಯಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ಹೆಚ್ಚಾಗುತ್ತಿರುವವ ಸಂದರ್ಭದಲ್ಲಿ ಇಂತಹ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಬೇಕು ಕಂಪ್ಲಿ ಯುವಕರು ಇದನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ನಿಮ್ಮಂತಹ ಯುವಕರ ಕಾಳಜಿ,ಪ್ರೀತಿ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಶ್ರೀಗಳು ಆರ್ಶೀವದಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕ ವನಸಿರಿ ಫೌಂಡೇಶನ್ ಘಟಕದ ಪದಾಧಿಕಾರಿಗಳಾದ ವಿನೋದ ಕುಮಾರ ಒಂಟೆ,ಪ್ರಶಾಂತ ಕನಕಗಿರಿ,ಬಸವರಾಜ ಕನಕಗಿರಿ,ಶಂಕರಗೌಡ ಪಾಟೀಲ, ಶರಣೆಗೌಡರೆಡ್ಡಿ,ಬದ್ರಿಗೌಡ ರೆಡ್ಡಿ,ಶರಣಪ್ಪಗೌಡ ಹಾಗೂ ದೇವಸ್ಥಾನದ ಸೇವಾಸಮಿತಿ ಸದಸ್ಯರು,ಗ್ರಾಮದ ಹಿರಿಯರು,ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.