ಗಂಗಾವತಿ ತಾಲೂಕಿನ ಡಣಾಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶನಿವಾರ ಡಣಾಪುರ ಭೀರಲಿಂಗೇಶ್ವರ 11 ದಿನದ ಪುರಾಣ ಕಾರ್ಯಕ್ರಮ ಜಾತ್ರಾ ಮಹೋತ್ಸವ ಜರುಗಿತು.ಬೆಳಿಗ್ಗೆ ಬೀರಲಿಂಗೇಶ್ವರ ಮೂರ್ತಿಗೆ ಅಭಿಷೇಕ,ಅಲಂಕಾರ ವಿಷೇಶ ಪೂಜಾ ಕಾರ್ಯಕ್ರಮ ಜರುಗಿದವು.ಮಧ್ಯಾಹ್ನದ ವೇಳೆ ಶ್ರೀ ಆಂಜನೇಯ ಸ್ವಾಮಿಯನ್ನು ಗಂಗಾಸ್ಥಳಕ್ಕೆ ಕರೆದುಕೊಂಡು ಹೋಗಿ ಗ್ರಾಮದ ರಾಜ ಬೀದಿಯಲ್ಲಿ ಡೊಳ್ಳು,ಸಕಲ ವಾದ್ಯಗಳಿಂದ ಭೀರಲಿಂಗೇಶ್ವರ ದೇವಸ್ಥಾನಕ್ಕೆ ಬರಲಾಯಿತು.ಬಳಿಕ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.
ನಂತರ ಸಂಜೆ ವೇಳೆ ಭಕ್ತ ಕನಕದಾಸರ ಭಾವ ಚಿತ್ರ ಹಾಗೂ ಭೀರಲಿಂಗೇಶ್ವರ ಭಾವ ಚಿತ್ರ ಮೆರವಣಿಗೆ ಗ್ರಾಮದ ರಾಜ ಬೀದಿಯಲ್ಲಿ ಸಕಲವಾದ್ಯಗಳಿಂದ ಜರುಗಿತು.
ಈ ವೇಳೆಯಲ್ಲಿ ಗ್ರಾಮದ ಹಿರಿಯರಾದ ಬಿ ಪಕೀರಪ್ಪ , ಮಲ್ಲನಗೌಡ,ಅಯ್ಯಪ್ಪ,ನಾಗಪ್ಪ,ದೊಡ್ಡನಗೌಡ,ರಾಮಣ್ಣ,ವೆಂಕಟೇಶ,ಗಂಗಾಧರ ಹಾಗೂ
ಕಮಿಟಿಯವರಾದ ಕೆ ಈರಪ್ಪ,ಭೀರಪ್ಪ,ಅಯ್ಯಪ್ಪ,ಹೊನ್ನೂರಪ್ಪ,ಭುವನೇಶ, ಬಿ ಕೃಷ್ಣ,ಸೋಮರಾಜ ಶಿಕ್ಷಕರು,ಕೆ ಹನುಮೇಶ,ರಾಘವೇಂದ್ರ ಗ್ರಾಮದ ಯುವಕರು ಹಿರಿಯರು ಭಾಗಿ ಇದ್ದರು.
ವರದಿ-ಹನುಮೇಶ ಭಾವಿಕಟ್ಟಿ