ಜೋಕಾಲಿ ಪ್ರಕೃತಿಯ ಮಡಿಲಲಿ ಒಲವಿನ ಜೋಕಾಲಿ,
ತೂಗಿ ಹಾಡುವೆ ನಾ ಪ್ರೇಮದ ಲಾಲಿ,
ಮಧು ಮಾಸ ಚಂದ್ರನ ಬೆಳದಿಂಗಳ ರಾತ್ರಿ,
ನನ್ನ ನಿನ್ನ ಪ್ರೇಮದ ಸುಮಧುರ ಮೈತ್ರಿ….
ಮುಂಜಾವಿನ ಮಂಜಿನ ಹನಿಗಳ ಜೊತೆಯಲಿ,
ನಿನ್ನ ಮುದ್ದಿಸಬೇಕು ನನ್ನಿನಿಯ..
ಮಳೆ ನಿಂತ ಮೇಲೂ ಮರಗಳ ಎಲೆಗಳಲ್ಲಿ ಬಚ್ಚಿ ,
ತೊಟ್ಟಿಕ್ಕುವ ಹನಿಗಳ ಜೊತೆ ಸರಸವಾಡಬೇಕು ಗೆಳೆಯ…
ಹೇಳಿಕೊಳ್ಳಬೇಕು ಮನದಾಸೆಯ ಜಾಲಿ ಜಾಲಿ,
ಕಾದಿರಬೇಕು ಅಲ್ಲಿ ಪ್ರೀತಿ ತುಂಬಿದ ಲಾಲಿ…
ಕೊನೆತನಕ ನೀನಿರಬೇಕು ನನ್ನ ಉಸಿರಲಿ,
ಬಚ್ಚಿಟುಕೊ ನನ್ನ ಹೃದಯ ಮಂದಿರದಲಿ….
ಮುಸ್ಸಂಜೆಯ ಆ ತಂಗಾಳಿಗೆ,
ಪಡುವಣ ದಿಕ್ಕು ರಂಗು ಚೆಲ್ಲುತಿರೆ…
ನನ್ನವನ ತುಂಟಾಟ ಜಾಸ್ತಿ ಆಗುತಿರಲು ,
ಕದ್ದು ಮುಚ್ಚಿ ನೀಡಬೇಕು ಅವನ ಗಲ್ಲಕೊಂದು ಸಿಹಿ ಮುತ್ತು…..!
-ಕಸ್ತೂರಿ.ಕೆ.