ಸಿಂಧನೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮವನ್ನು ಚಲನಚಿತ್ರ ನಟ ಹಾಗೂ ಇಂಡೇನ್ ಗ್ಯಾಸ್ ಮಾಲಿಕರಾದ ವೀರೇಶ ನಟೆಕಲ್ ಅವರು ಮಣ್ಣಿನ ಮಡಿಕೆಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಯೊಬ್ಬರೂ ನಮ್ಮ ಜೊತೆಯಲ್ಲಿ ವಾಸಿಸುವ ಹಕ್ಕಿ ಪಕ್ಷಿಗಳಿಗೆ ನೀರುಣಿಸಲು ಮುಂದಾಗಬೇಕು.ಪ್ರಾಣಿ ಪಕ್ಷಿಗಳಿಗೂ ಜೀವಿಸುವ ಹಕ್ಕಿದೆ ಮನುಷ್ಯರಾದ ನಾವುಗಳು ನೀರು ಕಾಳು ಹಾಕಿ ಜೀವಿಸಲು ಸಹಾಯ ಮಾಡಬೇಕು ಆಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಇಂತಹ ಕಾರ್ಯಗಳನ್ನು ಈಗಾಗಲೇ ವನಸಿರಿ ಫೌಂಡೇಶನ್ ತಂಡ ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಇವರ ಪರಿಸರ ಸೇವೆ ಅಗಾಧವಾಗಿದೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.
ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರೈತ ಮುಖಂಡರಾದ ಶಿವನಗೌಡ ಗೊರೆಬಾಳ ಮಾತನಾಡಿ ಸುಮಾರು ವರ್ಷಗಳಿಂದ ಅಮರೇಗೌಡ ಮಲ್ಲಾಪುರ ಮತ್ತು ಅವರ ತಂಡ ಪರಿಸರ ರಕ್ಷಣೆ,ಪ್ರಾಣಿಪಕ್ಷಿಗಳ ರಕ್ಷಣೆಯಲ್ಲಿ ತೊಗಿದೆ ಪರಿಸರ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.ನಮ್ಮ ಭಾಗದಲ್ಲಿ ಇಂತಹ ಪರಿಸರ ಪ್ರೇಮಿ ಹುಟ್ಟಿಕೊಂಡಿರುವುದು ತುಂಬಾ ಹೆಮ್ಮೆಯ ವಿಷಯ ಪ್ರತಿಯೊಬ್ಬರೂ ನಿಮ್ಮ ನಿಮ್ಮ ಮನೆಯ ಮಹಡಿಗಳ ಮೇಲೆ,ಹತ್ತಿರದ ಗಿಡಮರಗಳಿಗೆ ಅರವಟ್ಟಿಗೆ ನಿರ್ಮಿಸಿ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ ಪಕ್ಷಿಗಳ ಸಂಕುಲ ಉಳಿವಿಗಾಗಿ ಅಮರೇಗೌಡ ಮಲ್ಲಾಪುರ ಅವರ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಗ್ರಾಮದ ಹಿರಿಯರು,ವನಸಿರಿ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.
