ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬದುಕಿಗೆ ಗುರಿಯಿರಲಿ ಗುರಿ ಸಾಧನೆಗೆ ಶಿಸ್ತಿರಲಿ- ಜಗದೀಶ ಕರಿಯಮ್ಮನವರ

ಧಾರವಾಡ-ವಿದ್ಯಾರ್ಥಿಗಳು ಸ್ವ ಅಧ್ಯಯನ , ಉತ್ತಮ ಹವ್ಯಾಸಗಳ ರೂಢಿ ಉನ್ನತ ಚಿಂತನೆಗಳನ್ನು ಬೆಳೆಸಿಕೊಂಡು ಸಾಧನಾ ಮುಖದತ್ತ ಸಾಗಬೇಕು ಮಕ್ಕಳ ಬದುಕಿಗೆ ಗುರಿಯಿರಲಿ ಆ ಗುರಿ ಸಾಧನೆಗೆ ಶಿಸ್ತಿರಲಿ ಎಂದು ಮನಗುಂಡಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ ಕರಿಯಮ್ಮನವರ ಹೇಳಿದರು.

ಅವರು ತಾಲೂಕಿನ ಸರಕಾರಿ ಪ್ರೌಢ ಶಾಲೆ ಮನಗುಂಡಿಯಲ್ಲಿ ನಡೆದ ಈ ಶೈಕ್ಷಣಿಕ ವರ್ಷದ ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಚಿಕ್ಕಂದಿನಲ್ಲಿಯೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಅಂಕ ಗಳಿಕೆಯ ಜೀವನದ ಪ್ರಧಾನ ಗುರಿಯಾಗಿಸದೇ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಸಾರ್ಥಕ ಬದುಕನ್ನು ನಡೆಸಲು ಅಗತ್ಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು . ಜೀವನದ ಸಾರ್ಥಕತೆ ಅಡಗಿರುವುದು ಶಿಸ್ತುಬದ್ದ ಜೀವನ ನಿರ್ವಹಿಸುವದರಲ್ಲಿ ಸೇವಾ ಮನೋಭಾವ ಹೊಂದುವದರಲ್ಲಿ ಅಡಗಿದೆ ಎಂದರು.

ಇದೇ ವೇಳೆ ಕವಯಿತ್ರಿ ಶಿಕ್ಷಕಿಯರಾದ ಬಿ.ಪಿ ಜೋಶಿ ಮಾತನಾಡುತ್ತಾ ಪರೀಕ್ಷೆ ಎಂದರೆ ಮಕ್ಕಳು ಭಯಪಡುವ ಅಗತ್ಯಯಿಲ್ಲ ಜೀವನದಲ್ಲಿ ನೂರಾರು ಪರೀಕ್ಷೆಗಳು ಬರುತ್ತವೆ ಅವುಗಳಲ್ಲಿ ವಾರ್ಷೀಕ ಪರೀಕ್ಷೆಯೂ ಒಂದು ಅಷ್ಟೇ . ಸೂಕ್ತ ತಯಾರಿ ಅಧ್ಯಯನ ಶಿಸ್ತುಬದ್ದ ಓದುವಿನಿಂದ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯ. ಮಕ್ಕಳು ಪರೀಕ್ಷಾ ಸಿದ್ದತೆಯೊಂದಿಗೆ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ನಮ್ಮನ್ನು ಇನ್ನೊಬ್ಬರ ಜೊತೆ ಹೋಲಿಸಿಕೊಳ್ಳಬಾರದು. ಸದಾ ವಿನಯತೆಯನ್ನು ಹೊಂದಿ ನಿತ್ಯ ಹೊಸ ಹೊಸ ಕಲಿಯುವ ಮನಸ್ಥಿತಿ ನಮ್ಮದಾಗಿರಬೇಕು ಅಹಂ ಭಾವ ಬೆಳೆಸಿಕೊಳ್ಳಬಾರದು ಎಂದು ಮಕ್ಕಳಿಗೆ ಹಿತ ನುಡಿ ಹೇಳಿದರು.ಶಿಕ್ಷಕರಾದ ಸಿ,ಸಿ ಹಿರೇಮಠ ಶಾಲಾ ಶೈಕ್ಷಣಿಕ ವರದಿ ವಾಚಿಸಿದರು. ಇದಕ್ಕೂ ಮುನ್ನ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ ಜರುಗಿತು. ಶಾಲಾ ವಾರ್ಷೀಕೋತ್ಸವ ನಿಮಿತ್ತ ಹಮ್ಮಿಕೊಂಡ ಕ್ರಿಕೇಟ್‌ , ಮೆಹಂದಿ ಹಚ್ಚುವ , ಕೇಶವಿನ್ಯಾಸ, ಅಡುಗೆ ತಯಾರಿ, ಅಲಂಕಾರಿಕ ವಸ್ತುಗಳ ತಯಾರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಶಾಲಾ ಹಂತದ ವಿವಿಧ ವಿಷಯಗಳ ಸಂಘದಡಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಂಟು, ಒಂಬತ್ತು, ಹತ್ತನೆಯ ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ ಎಸ್‌ ಎಸ್‌ ಎಲ್‌ ಸಿ ವಾರ್ಷೀಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಭಾಗ್ಯಶ್ರೀ ಪಾಟೀಲ, ಲಕ್ಷ್ಮೀ ಸೋಮನಕೊಪ್ಪ ಪವಿತ್ರಾ ಗೋರೋಜನವರಿಗೆ ಇವರಿಗೆ ಬಹುಮಾನ ವಿತರಿಸಲಾಯಿತು. ಈ ಸಾಲಿನ ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳೆಂದು ಅನ್ನಪೂರ್ಣಾ ಹೊಸಾಂಗಡಿ, ವಿಜಯಲಕ್ಷ್ಮೀ ದುಪ್ಲಾಪೂರ , ಆಕಾಶ ದುಪ್ಲಾಪೂರ ಇವರಿಗೆ ಸನ್ಮಾನಿಸಲಾಯಿತು. ವಿದ್ಯಾ ವಾಯಚಾಳ ಇವಳನ್ನು ಉತ್ತಮ ಸೇವಾಮನೋಭಾವ ಹೊಂದಿದ ವಿದ್ಯಾರ್ಥಿ ಎಂದು ನೆನಪಿನ ಕಾಣಿಕೆ ನೀಡಲಾಯಿತು. ಇದೇ ವೇಳೆ ಎಸ್‌ ವಿ ವಾಯ್‌ ಎಮ್‌ ಸಂಸ್ಥೆಯಿಂದ ಶಾಲಾ ಸುಗಮಕಾರರಾಗಿ ಸೇವೆ ಸಲ್ಲಿಸಿದ ಮಂಜುನಾಥ ಕವಳಿ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಎಸ್‌ ಡಿ ಎಮ್‌ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೊರೋಜನವರ, ಉಪಾಧ್ಯಕ್ಷರಾದ ಶರಣಪ್ಪ ಆಲೂರ , ಸದಸ್ಯರಾದ ಮಂಜುನಾಥ ಸಣ್ಣಿಂಗಮ್ಮನವರ, ಪಾಲಕರಾದ ಮುದಲಿಂಗಪ್ಪ ಅಮ್ಮಿನಬಾವಿ ಶಾಲಾ ಸಿಬ್ಬಂದಿಗಳಾದ ಜೆ.ಆರ್‌ ಬಾಳೇರಿ, ಸುನೀತಾ ಗೊರವರ, ಉಷಾ ಶಿವಣ್ಣನವರ, ಸಿ.ಸಿ ಹಿರೇಮಠ , ಲಕ್ಷ್ಮೀ ತಿರ್ಲಾಪೂರ ಮೊದಲಾದವರ ಉಪಸ್ಥಿತರಿದ್ದರು. ನಾಗವೇಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರಾದ ಪ್ರಮೋದ ವಾದಿರಾಜ ಸ್ವಾಗತಿಸಿದರು. ಸತ್ಯನಾರಾಯಣ ಜೋಶಿ ವಂದಿಸಿದರು. ರಂಗನಾಥ ವಾಲ್ಮೀಕಿ ನಿರೂಪಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ