ಹನೂರು ಇಲ್ಲಿನ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ಸೇರಿದಂತೆ ಇಬ್ಬರು ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತೋಮಿಯಾರ್ ಪಾಳ್ಯದ ಅನುದಾನಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರೊಬ್ಬರಿಗೆ ಗಳಿಕೆ ರಜೆ 139 ದಿನದ ಮೂರು ಲಕ್ಷ ಹಣವನ್ನು ಸರ್ಕಾರದಿಂದ ಮಂಜೂರಾಗಬೇಕಿತ್ತು ಈ ಹಣವನ್ನು ಮಂಜೂರು ಮಾಡಿಕೊಡಲು ಬಿಇಓ ಶಿವರಾಜ್ ಸಿ.ಆರ್ ಪಿ ಮುನಿರಾಜ್ ಮೂಲಕ 15,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಆದರೆ ನಿವೃತ್ತ ಶಿಕ್ಷಕರಾದ ವಿಜಯ್ ಕುಮಾರ್ ಲಂಚ ಕೊಡಲು ಒಪ್ಪದೇ ಭ್ರಷ್ಟಾಚಾರ ತಡೆಗೆಟ್ಟುವ ಸಲುವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಬುಧವಾರ ಸಂಜೆ 5 ರ ವೇಳೆಯಲ್ಲಿ ಚಾಮರಾಜನಗರ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಿ.ಇ.ಓ ಶಿವರಾಜ್ ಹಾಗೂ ಸಿ ಆರ್ ಪಿ ಮುನಿರಾಜು ಎಂಬುವರನ್ನು ಹಿಡಿದು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ನಿರೀಕ್ಷಕರಾದ ಲೋಹಿತ್ ಕುಮಾರ್ ಮತ್ತು ಸಿಬ್ಬಂದಿ ಮಹಾಲಿಂಗ ಸ್ವಾಮಿ ಹಾಗೂ ಇನ್ನಿತರರು ಇದ್ದರು.
ವರದಿ ಉಸ್ಮಾನ್ ಖಾನ್