ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

431 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನಗೊಳಿಸುವ ಜೊತೆ ಜೊತೆಗೆ 431 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಮಂಗಳವಾರ ಚಿಂತಾಮಣಿ ನಗರದ ಹೊರ ವಲಯದ ಸೊಣ್ಣಶೆಟ್ಟಿ ಹಳ್ಳಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಿವಿಧ ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿ ಪ್ರತಿಯೊಬ್ಬರ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ.ಶಕ್ತಿ ಯೋಜನೆಯಡಿ ಮಹಿಳೆಯರು 170 ಕೋಟಿ ಸುತ್ತುವಳಿ (ಟ್ರಿಪ್)ಗಳ ಪ್ರಯಾಣವನ್ನು ಬೆಳೆಸಿದ್ದಾರೆ. ಹಸಿವು ಮುಕ್ತ ಕರ್ನಾಟಕ ಮಾಡಲಿಕ್ಕೆ ಅನ್ನ ಭಾಗ್ಯ ಯೋಜನೆ ಸಹಕಾರಿಯಾಗಿದೆ.ಕಡು ಬಡವರು ಮೂರು ಒತ್ತು ಊಟ ಮಾಡಲು ಅನುಕೂಲವಾದ ಮಹತ್ವದ ಯೋಜನೆಯಾಗಿದೆ.ಎಷ್ಟೋ ಉದ್ಯೋಗಾಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಹಣವಿರುವುದಿಲ್ಲ.ಸಂದರ್ಶನಕ್ಕೆ ಹಾಜರಾಗಲು ಹಣವಿರುವುದಿಲ್ಲ ಅಂತಹವರಿಗೆ ಯುವನಿಧಿ ನೆರವಾಗಿದೆ.ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರ ಸಾಮಾಜಿಕ ಭದ್ರತೆಯನ್ನು ನೀಡುವ ಯೋಜನೆಗಳಾಗಿವೆ ಎಂದರು.
ಈ ವೇಳೆ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಮುಖ್ಯಮಂತ್ರಿಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಬೇಕಾಗ ಕೆಲಸಗಳ ವಿವರಗಳ ಬೇಡಿಕೆ ಸಲ್ಲಿಸಿ ಮಾತನಾಡುತ್ತಾ,ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೂವು ಬೆಳೆಯುವ ರೈತರಿದ್ದು ಅವರ ಅನುಕೂಲಕ್ಕಾಗಿ ಸುಸಜ್ಜಿತ ಹೂವು ಮಾರುಕಟ್ಟೆಯನ್ನು ತಾಲ್ಲೂಕಿನ ನಂದಿ ಹೋಬಳಿಯ ಯಲುವಳ್ಳಿ ಗ್ರಾಮದ ಪಿ.ಆರ್.ಎಸ್ ತೋಟಗಾರಿಕಾ ಇಲಾಖೆಗೆ ಸೇರಿದ ಜಮೀನಿನಲ್ಲಿ ಎ.ಪಿ.ಎಂ.ಸಿ ಅಭಿವೃದ್ದಿ ಯೋಜನೆಗಳಡಿ ಹೂವಿನ ಮಾರುಕಟ್ಟೆ ಸ್ಥಾಪಿಸಲು ಘೋಷಣೆ ಮಾಡುವಂತೆ ಕೋರಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೆ.ಐ.ಡಿ.ಬಿ ಇಂದ ಗುರುತಿಸಿರುವ 2500 ಎಕರೆ ಜಮೀನಿನಲ್ಲಿ KHIR (Knowledge,Healthcare,Innovation and Research city) ನಗರ ಸ್ಥಾಪಿಸಲು ಕ್ರಮವಹಿಸಬೇಕು,ಚಿಂತಾಮಣಿ ತಾಲ್ಲೂಕಿನಲ್ಲಿ ಕುಶಾವತಿ ನದಿಯು ಏಕೈಕ ನೀರಿನ ಆಸರೆಯಾಗಿದ್ದು, ಈ ನದಿಯು ಸು 26 ಕಿ.ಮೀ ನಷ್ಟು ಉದ್ದ ಇದ್ದು, ಕೋಟಗಲ್ ಗ್ರಾಮದ ಮೂಲಕ ಬಾಲರೆಡ್ಡಿಪಲ್ಲಿ ಗ್ರಾಮದ ಬಳಿ ಪಾಪಾಗ್ನಿ ನದಿಗೆ ಸೇರುತ್ತದೆ.ನೆರೆಯ ಆಂಧ್ರಪ್ರದೇಶಕ್ಕೆ ರಾಜ್ಯದಿಂದ ವ್ಯರ್ಥವಾಗಿ ಹರಿದು ಹೋಗುವ ಈ ನದಿ ನೀರನ್ನು ಸಂರಕ್ಷಣೆ ಮಾಡಲು ಸರಣಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವುದು ಅವಶ್ಯಕವಾಗಿರುತ್ತದೆ.ಈ ಹಿಂದಿನ ಕೆಲವು ವರ್ಷಗಳಲ್ಲಿ ಸುರಿದ ಭಾರಿ ಮಳೆಗೆ ಈ ನದಿಗೆ ಕಟ್ಟಲಾಗಿದ್ದ ಚೆಕ್ ಡ್ಯಾಂಗಳು ಹಾಳಾಗಿರುವುದರಿಂದ ಸದರಿ ಚೆಕ್ ಡ್ಯಾಂಗಳ ದುರಸ್ತಿ ಕಾರ್ಯಗಳನ್ನು ಮಾಡುವ ಜೊತೆಗೆ ಅಸ್ತಿತ್ವದಲ್ಲಿರುವ ಚೆಕ್ ಡ್ಯಾಂಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವುದು ಹಾಗೂ ಅವಶ್ಯಕತೆಗೆ ಅನುಗುಣವಾಗಿ ಚೆಕ್ ಡ್ಯಾಂಗಳ ಎತ್ತರವನ್ನು ಎತ್ತರಿಸಿ ನೀರಿನ ಸಂಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸಲು ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿರುತ್ತದೆ ಎಂದು ಮನವಿ ಮಾಡಿದರು.
ಹೆಚ್.ಎನ್ ವ್ಯಾಲಿ ಯೋಜನೆಯಡಿ ಮೊದಲನೇ ಹಂತದಡಿ ಜಿಲ್ಲೆಯ ಚಿಕ್ಕಬಳ್ಳಾಪುರ,ಶಿಡ್ಲಘಟ್ಟ, ಗೌರಿಬಿದನೂರು ಮತ್ತು ಗುಡಿಬಂಡೆ ತಾಲ್ಲೂಕಿನ 65 ಕೆರೆಗಳಿಗೆ ನೀರು ಹರಿಸುತ್ತಿದ್ದು ಈಗ 2ನೇ ಹಂತದ ಯೋಜನೆಯಡಿ ಕೇವಲ ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ನೀರು ಹರಿಸಲು ಕ್ರಿಯಾ ಯೋಜನೆ ಸಲ್ಲಿಸಲಾಗಿರುತ್ತದೆ.ಇದರಿಂದ ಎರಡೂ ಯೋಜನೆಗಳಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚಿನ ಕೆರೆಗಳಿರುವ ಚಿಂತಾಮಣಿ ತಾಲ್ಲೂಕಿಗೆ ಅನ್ಯಾಯವಾಗಿರುತ್ತದೆ. ಇದನ್ನು ಸರಿಪಡಿಸಿ ಚಿಂತಾಮಣಿ ತಾಲ್ಲೂಕಿಗೆ 2ನೇ ಹಂತ ಯೋಜನೆಯಡಿ ಹೆಚ್ಚಿನ ಕೆರೆಗಳಿಗೆ ನೀರು ಹರಿಸಲು ಕೋರಿದರು.ಜಿಲ್ಲೆಗೆ 431 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಚಾಲನೆಗೆ ಅನುವು ಮಾಡಿದ್ದಕ್ಕಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ,ಉಪ ಮುಖ್ಯ ಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಖಾತೆಗಳ ಸಚಿವರಿಗೆ ಧನ್ಯವಾದಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.ಈವರೆಗೆ ಯಾವುದೇ ವ್ಯಕ್ತಿ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಲ್ಲಿ ಅಂತಹವರನ್ನು ಯೋಜನೆಗಳ ಅಡಿ ನೋಂದಾಯಿಸಲು ಸಮಾವೇಶದಲ್ಲಿ ನೊಂದಣಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ನೋಂದಾಯಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಿತು.
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳಡಿ ಆಯ್ಕೆಯಾಗಿರುವ 85,81,601 ಫಲಾನುಭವಿಗಳಿಗೆ ಇಂದು ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.ಸಂಕೇತಿಕವಾಗಿ 5 ಫಲನುಭವಿಗಳಿಗೆ ಮುಖ್ಯಮಂತ್ರಿಗಳ ವಿತರಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ,ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸಿರ್ ಅಹಮದ್,ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್ಎಂ ರೇವಣ್ಣ,ಶಾಸಕರಾದ ನಂಜೇಗೌಡ, ನಾರಾಯಣಸ್ವಾಮಿ,ಕೊತ್ತೂರ್ ಮಂಜುನಾಥ್, ಪ್ರದೀಪ್ ಈಶ್ವರ್,ಪುಟ್ಟಸ್ವಾಮಿಗೌಡ,ಅನಿಲ್ ಕುಮಾರ್,ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಗದೀಶ್,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳಾ,ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್,ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭಾಸ್ಕರ್,ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ಸಾರ್ವಜನಿಕರು ಇದ್ದರು.ಕಾರ್ಯಕ್ರಮಕ್ಕೆ ಮುನ್ನ ಮಾನ್ಯ ಮುಖ್ಯಮಂತ್ರಿಗಳಿಗೆ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ನೀಡಲಾಯಿತು.

ಇಂದು ಚಾಲನೆಯಾದ ವಿವಿಧ ಕಾಮಗಾರಿಗಳ ವಿವರ
ಸಹಕಾರ ಇಲಾಖೆಯಡಿ:

ಸೋಲಾರ್ ಪ್ಲಾಂಟ್-67 ಕೋಟಿ,ಐಸ್ ಕ್ರೀಂ ಪ್ಲಾಂಟ್- 53 ಕೋಟಿ.

ಲೋಕೋಪಯೋಗಿ ಇಲಾಖೆಯಡಿ:
12 ರಸ್ತೆ ಕಾಮಗಾರಿಗಳು-80.80 ಕೋಟಿ
ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಇಲಾಖೆಯಡಿ:

ರಸ್ತೆ ಕಾಮಗಾರಿಗಳು-20 ಕೋಟಿ

ಸಮಾಜ ಕಲ್ಯಾಣ ಇಲಾಖೆಯಡಿ:
ಅಂಬೇಡ್ಕರ್ ಭವನ (ಆಧುನೀಕರಣ)-9 ಕೋಟಿ

ಕಾಲೇಜು ಶಿಕ್ಷಣ ಇಲಾಖೆಯಡಿ:
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನವೀಕರಣ-9.25 ಕೋಟಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು & ಸ್ನಾತಕೋತ್ತರ ಕೇಂದ್ರ ನವೀಕರಣ- 10.50 ಕೋಟಿ,ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,ಬೆಳಗಾವಿ ಇದರ ಘಟಕ ಕಾಲೇಜು ನೂತನ ಕಟ್ಟಡ ನಿರ್ಮಾಣ-140 ಕೋಟಿ,ಸರ್ಕಾರಿ ಐ.ಟಿ.ಐ ಕಾಲೇಜು ನೂತನ ಕಟ್ಟಡ-5.50 ಕೋಟಿ,ಪಾಲಿಟೆಕ್ನಿಕ್ ಕಾಲೇಜು ನವೀಕರಣ-15.00 ಕೋಟಿ.

ವಿಶ್ಪೇಶ್ವರಯ್ಯ ಜಲ ನಿಗಮ (ನಿ.) ಎತ್ತಿನಹೋಳೆ ಯೋಜನೆಯಡಿ:ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಬಿಂಗ್ಯಾನಹಳ್ಳಿ ಮಜಿರ ರಾಯಪಲ್ಲಿ, ಭೂಮಿಶೆಟ್ಟಿನಹಳ್ಳಿ,ಸಿಂಗನಹಳ್ಳಿ,ಕಂಚಾನಯಾಕನಹಳ್ಳಿ ಕುರುಮಾರನಹಳ್ಳಿ ಗ್ರಾಮಗಳಲ್ಲಿ ಟಿ.ಎಸ್.ಪಿ.ಯೋಜನೆಯಡಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ-1.00 ಕೋಟಿ, ಕಟಮಾಚನಹಳ್ಳಿ, ಅನಕಲ್,ಅಕ್ಕಿಮಂಗಳ,ಗುಡಿಸಲಹಳ್ಳಿ, ನಲ್ಲರಾಳ್ಳಹಳ್ಳಿ,ಎನ್.ಕೊತ್ತೂರು,ಚೊಕ್ಕರೆಡ್ಡಿಹಳ್ಳಿ, ಬತ್ತಲಹಳ್ಳಿ,ಕಡದಲಮರಿ,ಕಲ್ಲಹಳ್ಳಿ,ಚಿನ್ನಸಂದ್ರ ಗ್ರಾಮಗಳಲ್ಲಿ ಎಸ್.ಸಿ.ಪಿ.ಯೋಜನೆಯಡಿ ಸಿ.ಸಿ.ರಸ್ತೆ ಮತ್ತು ಚರಂಡಿ
ನಿರ್ಮಾಣ ಕಾಮಗಾರಿ- 2.00 ಕೋಟಿ

ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ದಿ ಇಲಾಖೆಯಡಿ:
ಚಿಂತಾಮಣಿ ತಾಲ್ಲೂಕು ನಲ್ಲರಾಲ್ಲಹಳ್ಳಿ ಗ್ರಾಮದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ-3.30ಕೋಟಿ,ಚಿಂತಾಮಣಿ ತಾಲ್ಲೂಕು ಬ್ರಹ್ಮಣರಹಳ್ಳಿ ಗ್ರಾಮದ ಹತ್ತಿರ ಕುಶಾವತಿ ನದಿ ನಿರ್ಮಿಸಿರುವ ಡ್ಯಾಂ-ಎಲ್.ಎಲ್.ಸಿ ಯನ್ನು ಎತ್ತರಿಸುವ ಮತ್ತು ರಕ್ಷಣಾತ್ಮಕ ಕೆಲಸ ನಿರ್ಮಾಣ ಕಾಮಗಾರಿ- 1ಕೋಟಿ, ಚಿಂತಾಮಣಿ ತಾಲ್ಲೂಕು ಯಸಗಳಹಳ್ಳಿ ಗ್ರಾಮದ ಹತ್ತಿರ ಕುಶಾವತಿ ನದಿ ನಿರ್ಮಿಸಿರುವ ಡ್ಯಾಂ-ಎಲ್.ಎಲ್.ಸಿ ಯನ್ನು ಎತ್ತರಿಸುವ ಮತ್ತು ರಕ್ಷಣಾತ್ಮಕ ಕೆಲಸ ನಿರ್ಮಾಣ ಕಾಮಗಾರಿ- 70 ಲಕ್ಷ.

ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯಡಿ:
ವಿವೇಕ ಶಾಲೆ ಯೋಜನೆ -05 ಕೊಠಡಿ ನಿರ್ಮಾಣ- 0.82 ಕೋಟಿ,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ:

ಚಿಂತಾಮಣಿ ನಗರ ಶ್ರೀರಾಮನಗರ-1 ವಾರ್ಡ್ ನಂ.20, ವಿನೋಭಾ ಕಾಲೋನಿ ವಾರ್ಡ್ ನಂ.13,
ತಿಮ್ಮಸಂದ್ರ-2 ವಾರ್ಡ್ ನಂ.31, ಎನ್.ಎನ್.ಕಾಲೋನಿ ವಾರ್ಡ್ ನಂ.22, ಶಾಂತಿನಗರ-2 ವಾರ್ಡ್
ನಂ.27, ಟಿಪ್ಪುನಗರ-2 ವಾರ್ಡ್ ನಂ.15 ಒಟ್ಟು 06 ವಾರ್ಡ್ಗಳಲ್ಲಿ ತಲಾ 20.00 ಲಕ್ಷಗಳಂತೆಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಒಟ್ಟು 1. 20 ಕೋಟಿ.
ಉದ್ಘಾಟನೆಯಾದ ಕಾಮಗಾರಿಗಳ ವಿವರ:

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮೆಗಾ ಡೈರಿ ಆಡಳಿತ ಕಚೇರಿ (Admin Block)- 3.80 ಕೋಟಿ

ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ಕೋಟಗಲ್-2.02 ಕೋಟಿ,
ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳ ವಸತಿ ಗೃಹ ಕಟ್ಟಡ ನಿರ್ಮಾಣ,
ಯಗವಕೋಟೆ- 00.87 ಕೋಟಿ,
ಚಿಂತಾಮಣಿ ತಾಲ್ಲೂಕು ಆಸ್ಪತ್ರೆ 12 ಹಾಸಿಗೆಗಳ ಐಸೋಲೇಷನ್ ವಾರ್ಡ್
ನಿರ್ಮಾಣ-00.29 ಕೋಟಿ,
ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರ 06 ಹಾಸಿಗೆಗಳ ಐಸೋಲೇಷನ್
ವಾರ್ಡ್ ನಿರ್ಮಾಣ-00.17 ಕೋಟಿ.

ಚಿಂತಾಮಣಿ ತಾಲ್ಲೂಕು ಯಗವಕೋಟೆ ಗ್ರಾಮದ ಡಿ.ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ (BCWD-304) ಕಟ್ಟಡ ನಿರ್ಮಾಣ-1.99 ಕೋಟಿ,ಚಿಂತಾಮಣಿ ತಾಲ್ಲೂಕು ಕಾಗತಿ ಗ್ರಾಮದ ಡಿ.ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ (BCWD -1752) ಕಟ್ಟಡ ನಿರ್ಮಾಣ-3.67 ಕೋಟಿ,ಚಿಂತಾಮಣಿ ಟೌನ್ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ (BCWD -1752) ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿ-1.68 ಕೋಟಿ.
ಚಿಂತಾಮಣಿ ತಾಲ್ಲೂಕು ಕಂಚಿನಾಯಕನಹಳ್ಳಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ-00.20 ಕೋಟಿ,ಚಿಂತಾಮಣಿ ತಾಲ್ಲೂಕು ಸಂತೇಕಲ್ಲಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ
ನಿರ್ಮಾಣ ಕಾಮಗಾರಿ-00.20 ಕೋಟಿ.
ಪೊಲೀಸ್ ಇಲಾಖೆಯಡಿ:
ಪೊಲೀಸ್ ಠಾಣೆ ನೂತನ ಕಟ್ಟಡ, ಪೆರೇಸಂದ್ರ-1.99 ಕೋಟಿ.
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿವರ
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 1.02 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದು, 2023ರ ಜೂನ್ ಮಾಹೆಯಿಂದ ಈವರೆಗೆ 2,79,78,473 (ಸು. 2.79 ಕೋಟಿ) ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯ ಪಡೆದಿದ್ದಾರೆ. ಇದಕ್ಕಾಗಿ ಸರ್ಕಾರ 96,77,91,405 (ಸು. 96.77 ಕೋಟಿ) ಹಣವನ್ನು ವೆಚ್ಚ ಮಾಡುತ್ತಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 58,24,746 ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಬೆಳೆಸಿದ್ದಾರೆ. ಇದಕ್ಕಾಗಿ ಸರ್ಕಾರ 23,04,78,015 ರೂಗಳನ್ನು ಭರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ತಡೆರಹಿತ (ಪಾಯಿಂಟ್ ಟು ಪಾಯಿಂಟ್) ಸಾರಿಗೆ ಸೇವೆ ನೀಡುವ ಒಟ್ಟು 11 “ಅಶ್ವಮೇಧ ಕ್ಲಾಸಿಕ್” ಬಸ್ಗಳು ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಒಟ್ಟು 44 ಸುತ್ತುವಳಿಯಂತೆ (ಟ್ರಿಪ್) ಸಂಚಾರ ನಡೆಸುತ್ತಿವೆ. ಜೊತೆಗೆ 35ಕ್ಕೂ ಹೆಚ್ಚು ಬಸ್ಗಳು ಜಿಲ್ಲೆಗೆ ವಿತರಣೆಯಾಗಲಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿAದ “ಅಶ್ವಮೇಧ ಕ್ಲಾಸಿಕ್” ಬಸ್ಗಳ ಸೇವೆಯು ವಿಸ್ತರಣೆಯಾಗಲಿದೆ.
ಗೃಹಜ್ಯೋತಿ ಯೋಜನೆಯಡಿ ಈವರೆಗೆ 3,09,030 ಫಲಾನುಭವಿಗಳು (ಶೇ. 93 ರಷ್ಟು ಗ್ರಾಹಕರು) ನೋಂದಣಿಯಾಗಿದ್ದು, ಆಗಸ್ಟ್-2023 ಮಾಹೆಯಿಂದ ಫೆಬ್ರವರಿ-2024ರ ಮಾಹೆಯ ಅಂತ್ಯದವರೆಗೆ ಒಟ್ಟು 7559 ಲಕ್ಷಗಳ ರಿಯಾಯ್ತಿಯೊಂದಿಗೆ ಮಾಸಿಕ 200 ಯುನಿಟ್ಗಳ ಗೃಹ ಬಳಕೆಯ ವಿದ್ಯುತ್ನ್ನು ಉಚಿತವಾಗಿ ಒದಗಿಸಲಾಗಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 55,675 ಫಲಾನುವಿಗಳು ನೋಂದಣಿಯಾಗಿದ್ದು, 1526 ಲಕ್ಷಗಳ ರಿಯಾಯಿತಿ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜುಲೈ 2023ರಿಂದ ಈವರೆಗೆ ಡಿ.ಬಿ.ಟಿ ಮುಖಾಂತರ 85,97,60,210 ನೇರ ನಗದು ವರ್ಗಾಯಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 93.05 ರಷ್ಟು ಪಡಿತರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ. ಇದರ ಜೊತೆಗೆ ಅಂತ್ಯೋದಯ, ಬಿ.ಪಿ.ಎಲ್ ಪಡಿತರದಾರರಿಗೆ ಒಟ್ಟಾರೆ 55,237.50 ಕ್ವಿಂಟಲ್ ಆಹಾರ ಧಾನ್ಯವನ್ನು ವಿತರಿಸಲಾಗಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 64,827 ಪಡಿತರ ಕುಟುಂಬಗಳ 2,20,681 ಫಲಾನುಭವಿಗಳಿಗೆ ಪಡಿತರ ಮತ್ತು ನೇರ ನಗದು ಹಣವನ್ನು ವರ್ಗಾಯಿಸಲಾಗಿದೆ.
ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ 2,99,152 ಅರ್ಜಿದಾರರು ನೋಂದಣಿಯಾಗಿದ್ದು, ಈ ಪೈಕಿ 2,75,330 ಮಹಿಳಾ ಫಲಾನುಭವಿಗಳಿಗೆ ಈವರೆಗೆ 304.12 ಕೋಟಿ ಹಣ ವರ್ಗಾವಣೆಯಾಗಿರುತ್ತದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 66,000 ಮಹಿಳೆಯರು ನೋಂದಣಿಯಾಗಿದ್ದು, 80.00 ಕೋಟಿ ಹಣ ಅವರ ಖಾತೆಗೆ ಜಮೆಯಾಗಿದೆ.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2,527 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 347 ಅರ್ಜಿದಾರರಿಗೆ ಪ್ರತಿ ಮಾಹೆಯಾನ 3000 ರೂಗಳಂತೆ ಯುವನಿಧಿ ಭತ್ಯೆಯನ್ನು ಪಾವತಿಸಲಾಗಿರುತ್ತದೆ.ಈವರೆಗೆ ಜನವರಿ ಮತ್ತು ಫೆಬ್ರವರಿ ಮಾಹೆಯ ಭತ್ಯೆಯ ಮೊತ್ತ ಒಟ್ಟು 11,85,000 ರೂಗಳನ್ನು 2024ರ ಫೆಬ್ರವರಿ ಅಂತ್ಯದವರೆಗೆ ಪಾವತಿಸಲಾಗಿದೆ.ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 103 ಮಂದಿ ಅರ್ಜಿದಾರರಿಗೆ 6,18,000 ರೂಗಳನ್ನು ಪಾವತಿಸಲಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ