ಬೀದರ್:ಇಂದು ಬೀದರನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಡ್ವೈಸರಿ ಚೇರ್ಮನ್ ಆಗಿ ಎಂ.ಡಿ ಫಿರೋಜ್ ಖಾನ್ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ಅವರ ಹಿತೃಷಿಗಳು,ಬೆಂಬಲಿಗರು, ಅಭಿಮಾನಿಗಳಿಂದ ವಿಶೇಷ ಸನ್ಮಾನ ಮಾಡಲಾಯಿತು.ಇದಾದ ಬಳಿಕ ಬೀದರ್ ನ ಓಲ್ಡ್ ಸಿಟಿಯ ಗವಾನ ಚೌಕ್ ಬಳಿ ಅವರ ಅಭಿಮಾನಿ ಬಳಗದ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು,ತದನಂತರದಲ್ಲಿ ಎಂ.ಡಿ ಫಿರೋಜ್ ಖಾನ್ ರವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ಎಂ.ಡಿ ಫಿರೋಜ್ ಖಾನ್ ರವರು ಏನ್.ಎಸ್.ಯು.ಐ. ಸದಸ್ಯರಾಗಿ ಗುರುತಿಸಿಕೊಂಡು ಯುವ ನಾಯಕರಾಗಿ ಯುವಕರಿಗೆ ಮಾದರಿಯಾಗಿದ್ದಾರೆ.ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಡಿ ಫಿರೋಜ್ ಖಾನ್ ರವರು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಡಿಕೆ ಶಿವಕುಮಾರ್ ರವರಿಗೆ , ಜಮೀರ್ ಅಹ್ಮದ್ ಖಾನ್ ರವರಿಗೆ,ಈಶ್ವರ್ ಖಂಡ್ರೆ ರವರಿಗೆ,ರಹೀಮ್ ಖಾನ್ ರವರಿಗೆ ಈ ಮೂಲಕವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಅನಧಿಕೃತ ನೊಂದಣಿ ಇಲ್ಲದ ಮಸೀದಿಗಳಿಗೆ ವಕ್ಫ್ ಅಡಿಯಲ್ಲಿ ಭದ್ರತೆ ನೀಡಲಾಗುವುದು,ನನಗೆ ನೀಡಿದ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ವರಿಷ್ಠರ ಮಾರ್ಗದರ್ಶನದಲ್ಲಿ ನಿಭಾಯಿಸುವುದಾಗಿ ಹಾಗೂ ನೀಡಿದ ಸ್ಥಾನಕ್ಕೆ ನ್ಯಾಯಯುತವಾಗಿ ಕಾರ್ಯ ನಿರ್ವಹಿಸುವುದಾಗಿ ಈ ಮೂಲಕ ಮಾತನಾಡಿ ಭರವಸೆಯನ್ನು ವ್ಯಕ್ತಪಡಿಸಿದರು.
ವರದಿ:ರೋಹನ್ ವಾಘಮಾರೆ