ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂಗನವಾಡಿಯಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಕ್ರೀಡಾಕೂಟ ಏರ್ಪಡಿಸಿ ಪ್ರಶಸ್ತಿ ವಿತರಿಸಲಾಯಿತು.
ಕೊಪ್ಪಳ:ತಾಲೂಕಿನ ಹಳೆ ಗೊಂಡಬಾಳ ಎರಡನೆಯ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುದ್ದಪ್ಪ ದೇವರಮನಿ,ಸಸಿಗಳಿಗೆ ನೀರು ಹಾಕುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸರಸ್ವತಿ ಕಾರ್ಯಕ್ರಮಕ್ಕೆ ಉದ್ಘಾಟನೆ ಮಾಡಿ ಪ್ರತಿ ವರ್ಷ ಮಾರ್ಚ್ 8ರಂದು ಆಚರಣೆ ಮಾಡಲಾಗುತ್ತದೆ,ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಗೌರವಿಸಲು ಅವರ ಶ್ರಮಕ್ಕೆ ಧನ್ಯವಾದಗಳು ಹೇಳುವುದಕ್ಕೆ ಇದು ಒಂದು
ಸುವರ್ಣ ಅವಕಾಶವಾಗಿದೆ, “ಅಮ್ಮನಾಗಿ ಉಸಿರು ನೀಡುತ್ತಾಳೆ,ಸೋದರಿಯಾಗಿ ಪ್ರೀತಿ ತೋರುತ್ತಾಳೆ, ಅಜ್ಜಿಯಾಗಿ ಮುದ್ದಿಸುತ್ತಾಳೆ,ಗೆಳತಿಯಾಗಿ ಧೈರ್ಯ ತುಂಬುತ್ತಾಳೆ,ಮಡದಿಯಾಗಿ ಬದುಕು ನೀಡುತ್ತಾಳೆ, ಗುರುವಾಗಿ ದಾರಿ ತೋರುತ್ತಾಳೆ,ಧಣಿಯಾಗಿ ಬದುಕಿಗೆ ಭದ್ರತೆ ಕೊಡುತ್ತಾಳೆ,ಒಂದಾ..? ಎರಡಾ…?ಹೇಳುತ್ತಾ ಹೋದರೆ ಸಾಲದು ಎಂದರು”ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಈಶ್ವರಪ್ಪ ಮಾತನಾಡಿ, ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ”ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಅದು ರಾಷ್ಟ್ರೀಯ,ಜನಾಂಗೀಯ,ಭಾಷಾವಾರು,ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ.ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.
ಎರಡು ವರ್ಷದ ನಂತರ,೧೯೭೭ ರಲ್ಲಿ, “ದಿ ಜನರಲ್ ಅಸ್ಸೆಂಬ್ಲಿ” ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನ ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು.ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನ ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಲಾಯಿತು ಎಂದರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಎಂಬಂತೆ, ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ, ಕಿತ್ತೂರು ರಾಣಿ ಚೆನ್ನಮ್ಮ, ಇನ್ನು ಬಹಳಷ್ಟು ಮಾತೆಯರು ದೇಶಕ್ಕೆ ಮಾದರಿಯಾಗಿದ್ದಾರೆ ಆರೋಗ್ಯ ಇಲಾಖೆ ಅಧಿಕಾರಿಗಳಾದ,ಹುಸೇನ ಬೇಗಮ್ ಹೇಳಿದರು, ನಿರೂಪಣೆಯನ್ನು ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಪಲ್ಲವಿ ಸ್ವಾಗತ ಮಾಡಿದರು.
ಗಣ್ಯರಿಗೆ ಅಧಿಕಾರಿಗಳಿಗೆ ಸನ್ಮಾನ ಮಾಡಿ ಸವಿನೆನಪಿನ ಕಾಣಿಕೆಯನ್ನು ನೀಡಿ ಮತ್ತು ಶ್ರೀಮತಿ ಗಿರಿಜಮ್ಮ ವಂದನೆಗಳೊಂದಿಗೆ ಹೇಳುವ ಮೂಲಕ ಪೋಷಕರಿಗೆ ಪ್ರಶಸ್ತಿಯನ್ನು ವಿತರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಸುಶೀಲಮ್ಮ ಬಳಗನೂರ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೊಟ್ರೇಶ್, ಶೇಖರಯ್ಯ, ಗ್ರಾಮದ ಯುವ ಸದಸ್ಯರಾದ ಚಿದಾನಂದಯ್ಯ ಬನ್ನಿಮಠ, ಗ್ರಾಮದ ಹಿರಿಯರಾದ, ವೀರಭದ್ರಪ್ಪ ಇಂದ್ರಿಗಿ, ಅಂಗನವಾಡಿ ಶಾಲಾ ಶಿಕ್ಷಕಿಯರಾದ, ಶ್ರೀಮತಿ ಗಿರಿಜಮ್ಮ , ಕವಿತಾ, ರಮೀಜಾ ಅಕ್ಕಮ ಶಿಕ್ಷಕಿಯ ತಾಯಿ ಸ್ವರೂಪಿ ಸುನಿತಾ ಅಕ್ಷಾಲೆ ತಾಯಂದಿರು ಮಕ್ಕಳು, ಆಶಾ ಕಾರ್ಯಕರ್ತರು,ಅಂಗನವಾಡಿ ಸಹಾಯಕಿಯರು ಭಾಗಿಯಾಗಿದ್ದರು.