ಗ್ರಾಮೀಣ ಮಕ್ಕಳ ಹಿತಚಿಂತನೆಯ ಪ್ರೊಫೆಸರ್ ಸು.ಜ.ನಾ.
ಪ್ರೊ.ಸು.ಜ.ನ. ಅವರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ದಿನಗಳು ನಾನು ಮೈಸೂರಿನ ಆರತಿ ದಿನಪತ್ರಿಕೆಯಲ್ಲಿ ಉಪಸಂಪಾದಕ ಆಗಿ ಕಾರ್ಯ ಮಾಡುತ್ತಿದ್ದೆ.ಜೊತೆಗೆ ಗೆಳೆಯ ಸಿಂಗನಹಳ್ಳಿ ಸ್ವಾಮಿಗೌಡ ಜೊತೆ ಸೇರಿ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಆರಂಬಿಸಿ ಆ ಸಂಸ್ಥೆಯ ಮೂಲಕ ಕವಿಗೋಷ್ಠಿಯನ್ನು ನಡೆಸುತ್ತಿದ್ದೆ.
ಹಲವು ಕವಿಗೋಷ್ಠಿಗಳಿಗೆ ಹೆಸರಾಂತ ಸಾಹಿತಿ ಸುಜನಾ ಅವರನ್ನು ಉದ್ಘಾಟಕರಾಗಿ,ಅಧ್ಯಕ್ಷರಾಗಿ, ಅಥಿತಿಗಳಾಗಿ ಆಗಮಿಸುತ್ತಿದ್ದರು.ಅವರ ಮಾತು ಹಾಗೂ ಉಡುಪಿನಲ್ಲಿ ಯಾವಾಗಲೂ ಸರಳತೆ,ಅಣ್ಣ ಎಂದು ಹೃದಯ ತುಂಬಿ ಮಾತನಾಡಿಸುತ್ತಿದ್ದರು. ಕವಿಗಳನ್ನು ಕಂಡರೆ ಅಪಾರ ಮಮತೆ. ಪ್ರೊ.ಹೆಚ್.ಎಸ್.ಕೆ,ಡಾ.ಸಿ.ಪಿ.ಕೆ,ಪ್ರೊ.ಸು.ಜ ನಾ,ಡಾ. ಆಕಬರ ಅಲಿ ಇವ್ರು ಕವಿಗೋಷ್ಠಿಯಲ್ಲಿ ಪಾಲ್ಗೊಂಡರು ಎಂದರೆ ಅದು ವಿದ್ವತ್ ಪೂರ್ಣ ಸಭೆ ಎನಿಸುತ್ತಿತ್ತು. ನಮ್ಮ ಸಂಸ್ಥೆಯ ಸುಮಾರು ಒಂದು ನೂರಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಈ ಗಣ್ಯರ ಸಮ್ಮುಖದಲ್ಲಿ ನಡೆದಿವೆ.ಇದು ನನ್ನ ಸೌಭಾಗ್ಯ.
ಸುಜನಾ ಅವ್ರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು ನನ್ನ ಗೆಳೆಯನ ಸಹೋದರ ಒಬ್ಬ ಹಳ್ಳಿಯಿಂದ ಬಂದು ಮೈಸೂರಿನಲ್ಲಿ.ಪಿ.ಯು.ಸಿ.ಓದುತ್ತಿದ್ದ ಹಳ್ಳಿಯ ಹುಡುಗ ವಿಜ್ಞಾನ ತೆಗೆದುಕೊಂಡು ಸರಿಯಾಗಿ ಓದಲಾಗದೆ ಕೇವಲ ನಲವತ್ತು ಶೇಕಡಾ ಅಂಕ ಪಡೆದಿದ್ದ ಆತ ಪದವಿ ಓದಲು ಯುವ ರಾಜ ಕಾಲೇಜಿಗೆ ಅರ್ಜಿ ಹಾಕಿದ.ಆದ್ರೆ ಕಡಿಮೆ ಅಂಕ ತೆಗೆದ ಕಾರಣದಿಂದ ಆತನಿಗೆ ಅಲ್ಲಿ ಪ್ರವೇಶ ಸಿಕ್ಕಿರಲಿಲ್ಲ.
ನಿನಗೆ ಸುಜನಾ ಪರಿಚಯ ಇದ್ದಾರಲ್ಲ ಒಂದು ಮಾತು ಹೇಳಿ ಆ ಕಾಲೇಜಿನಲ್ಲಿ ನನ್ನ ತಮ್ಮನಿಗೆ ಬಿ ಎಸ್ಸಿ ಗೆ ಸೀಟು ಕೊಡಿಸು ಅಂತ ನನ್ನ ಸ್ನೇಹಿತ ಗಂಟು ಬಿದ್ದ.ಕೊನೆಗೆ ಸುಜನಾ ನೋಡಲು ಕರೆದೊಯ್ದೆ.
ಸುಜನಾ ಅವ್ರಿಗೆ ಚೀಟಿ ಕಳಿಸಿದೆ.ಏನೂ ಭೇರ್ಯ ಅಣ್ಣ,ಏನು ಕವಿಗೋಷ್ಠಿಗೆ ಕರೆಯಲು ಬಂದಿರ, ಕಾಲೇಜ್ ಪ್ರವೇಶದ ಸಮಯ.ಈ ಬಾರಿ ನಾನು ಬರಲು ಆಗುವುದಿಲ್ಲ ಅಂತ ಸುಜನಾ ನುಡಿದರು.
ಇಲ್ಲ ಸರ್,ನನ್ನ ಗೆಳೆಯನ ತಮ್ಮನಿಗೆ ನಿಮ್ಮ ಕಾಲೇಜಿನಲ್ಲಿ ಸೀಟು ಬೇಕಾಗಿತ್ತು ಅಂತ ಹೇಳಿದೆ.
ಯಾಕ್ರೀ ಅರ್ಜಿ ಹಾಕಿಲ್ಲ ವೇ ಅಂತ ಕೇಳಿದರು.ಸರ್ ಹಾಕಿದ್ದಾನೆ,ಅವನಿಗೆ ಅಂಕಗಳು ಕಡಿಮೆ ಬಂದಿದೆ.ಆತ ಹಳ್ಳಿಯ ಹುಡುಗ ವಿಜ್ಞಾನ ಅರ್ಥವಾಗದೆ ಕಡಿಮೆ ಅಂಕ ಪಡೆದಿದ್ದಾನೆ.ಆತನಿಗೆ ನಿಮ್ಮ ಕಾಲೇಜಿನಲ್ಲಿ ಸೀಟು ಸಿಕ್ಕಿಲ್ಲ.ಅದಕ್ಕಾಗಿ ನಿಮ್ಮನ್ನು ನೋಡಲು ಬಂದೆ ಅಂತ ತಿಳಿಸಿದೆ .
ಆ ಹುಡುಗನ್ನ ಕರೆಯಿರಿ ಎಂದರು.ಪಾಪ ಗ್ರಾಮೀಣ ಮಕ್ಕಳು, ವಿಜ್ಞಾನ ವಿಷಯ ಹಾಗೂ ಆಂಗ್ಲ ಮಾದ್ಯಮ ಎರಡೂ ಅರ್ಥವಾಗದೆ ಕಷ್ಟಪಡುತ್ತವೆ ಅಂತ ಸುಜನಾ ನೋವಿನೊಂದಿಗೆ ನುಡಿದರು.
ಆ ವೇಳೆಗೆ ಆ ವಿದ್ಯಾರ್ಥಿ ಪ್ರಿನ್ಸಿಪಾಲ್ ಕೊಠಡಿಯ ಒಳಕ್ಕೆ ಬಂದ.ನೋಡಪ್ಪ ನಿನಗೆ ಸೀಟು ಕೊಡುತ್ತೇನೆ.ನೀನು ಮಹಾತ್ಮ ಗಾಂಧೀಜಿ ಅವರ ಫೋಟೋ ಮುಟ್ಟಿ ಚೆನ್ನಾಗಿ ಓದುತ್ತೇನೆ ಎಂದು ಪ್ರಮಾಣ ಮಾಡು ಅಂತ ಸೂಚಿಸಿದರು.ಆ ಹುಡುಗ ಪ್ರಮಾಣ ಮಾಡಿದ.ಆತನಿಗೆ ಕಾಲೇಜಿನಲ್ಲಿ ಪ್ರವೇಶ ನೀಡಿದರು.ಆ ವಿದ್ಯಾರ್ಥಿ ಈಗ ನ್ಯಾಯಾಂಗ ಇಲಾಖೆಯಲ್ಲಿ ಉತ್ತಮ ಸ್ಥಾನದಲ್ಲಿ ಇದ್ದಾನೆ.ಸಾಹಿತಿಗಳನ್ನು ಕಂಡರೆ ಬಹಳ ಗೌರವ ನೀಡುತ್ತಾನೆ.ಸುಜನಾ ಅವರ ಸರಳತೆ,ಗ್ರಾಮೀಣ ಪರ ಚಿಂತನೆಗೆ ಇದು ನೇರ ನಿದರ್ಶನ.
ಸರಿಸುಮಾರು 2000 ರ ದಿನಗಳು ಅಂದು ರಾಜ್ಯದ ಅತ್ಯುತ್ತಮ ಭಾವಗೀತೆಗಳ ಗಾಯಕಿ ಎಂದು ಹೆಸರು ಪಡೆದಿದ್ದ ಶ್ರೀಮತಿ ಶಾಂತಾ ಜಗದೀಶ್ ಅವರು ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿ ವಾಸವಿದ್ದರು. ಅವರು ಭಾವಸಂಪದ ಎಂಬ ಗಾಯನ ವೇದಿಕೆ ಆರಂಬಿಸಿದರು ಅವರು ಅಂದಿನ ಜನಪ್ರಿಯ ಕವಿಗಳಾದ ಡಾ.ಸಿಪಿಕೆ,ಡಾ.ಅಕಬರ ಅಲಿ,ಪ್ರೊ.ಹೆಚ್.ಎಸ್.ಕೆ.ಬೀ.ನಂ.ಚಂದ್ರಯ್ಯ,ಪ್ರೊ.ಕೆ.ಭೈರವ ಮೂರ್ತಿ,ಮಳಲಿ ವಸಂತ ಕುಮಾರ್,ಬಿ.ಎಸ್.ನಾಗರಾಜ ರಾವ್,ಇವರೊಡನೆ ಅಂದಿನ ಉದಯೋನ್ಮುಖ ಕವಿಯಾಗಿದ್ದ ಭೇರ್ಯ ರಾಮಕುಮಾರ್,ಶ್ರೀಮತಿ ಶಾಂತಾ ಜಗದೀಶ್ ಅವರ ಕವನಗಳನ್ನು ಸುಶ್ರಾವ್ಯವಾಗಿ ಹಾಡಿ,ಅದನ್ನು ಭಾವ ಸಂಪದ ಎಂಬ ಕ್ಯಾಸೆಟ್ ಮೂಲಕ ಹೊರತಂದರು.ಆ ಕ್ಯಾಸೆಟ್ ಲೋಕಾರ್ಪಣೆ ಸಂದರ್ಭದಲ್ಲಿ ಸುಜನಾ ಹೇಳಿದ ಒಂದು ಮಾತು ನನ್ನ ಬದುಕಿನ ಮೇಲೆ ಅಪಾರ ಪರಿಣಾಮ ಬೀರಿತು.ಕವಿಗಳು,ಚಿಂತಕರು,ಸಮಾಜಮುಖಿ ಆಗಿರುವ ವ್ಯಕ್ತಿಗಳು ಸರಳ ಬಾಳುವೆ ನಡೆಸಬೇಕು. ಜಾತ್ಯತೀತರಾಗಿ ಬದುಕ ಬೇಕು.ಇಲ್ಲದಿದ್ದರೆ ಭವಿಷ್ಯದ ಯುವ ಜನಾಂಗ ಎಂದಿಗೂ ನಮ್ಮನ್ನು ಕ್ಷಮಿಸುವುದಿಲ್ಲ.ಸುಜನಾ ಅವರ ಈ ಕಿವಿಮಾತು ಎಲ್ಲಾ ಕಾಲಕ್ಕೂ ಅನ್ವಯಿಸು ವಂತಹದ್ದು.
ಸುಜನಾ ಅವರು ಯುಗಸಂದ್ಯ ಎಂಬ ಮಹಾಕಾವ್ಯ ರಚಿಸಿದ್ದಾರೆ.ಗ್ರೀಕ್ ಭಾಷೆಯ ಪ್ರಸಿದ್ಧ ಏಜಕ್ಸ್ ನಾಟಕವನ್ನು ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. ಅವರ ಯುಗ ಸಂದ್ಯ ಮಹಾಕಾವ್ಯಕ್ಕೆ 2020 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಹೃದಯ ಸಂವಾದ ಕೃತಿಗೆ 1963 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ ಮೈಸೂರು ಯುವರಾಜ ಕಾಲೇಜಿನ ಪ್ರಿನ್ಸಿಪಾಲರು,ನಂತರ 2009 ರಲ್ಲೀ ಮೈಸೂರು ವಿಶ್ವ ವಿದ್ಯಾನಿಲಯದ ಉಪಕುಲ ಸಚಿವರಾಗಿ ಕಾರ್ಯ ನಿರ್ವಹಿಸಿದರು.ವಿದ್ಯಾರ್ಥಿ ದೆಸೆಯಲ್ಲಿಯೇ ರಾಷ್ಟ್ರಕವಿ ಕುವೆಂಪು ಅವರ ಪ್ರಭಾವಕ್ಕೆ ಒಳಗಾದ ಸುಜನ ಅವರು ಬದುಕನ್ನು ಸರಳವಾಗಿ ಕಟ್ಟಿಕೊಂಡವರು.ಜಾತ್ಯತೀತವಾಗಿಯೇ ಬದುಕು ಕಟ್ಟಿಕೊಂಡವರು ಅಂತಹವರ ಜೀವನ ಹಾಗೂ ಸಾಹಿತ್ಯ ಸೇವೆಯ ಬಗ್ಗೆ ಕನ್ನಡ ಸಾಹಿತ್ಯ ಪ್ರಪಂಚ,ಕರ್ನಾಟಕ ರಾಜ್ಯ ಸರ್ಕಾರ,ಸಮಾಜ ದಿವ್ಯ ಮೌನ ವಹಿಸಿರುವುದು ಅತ್ಯಂತ ದುಃಖದ ಸಂಗತಿ.
ಇಂದಿನ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಹಾ ಕವಿ ಸುಜನಾ ಅವರ ಕೊಡುಗೆಯನ್ನು ಅವರ ಸರಳ ಜೀವನ,ಆದರ್ಶಗಳು ಹಾಗೂ ಕೃತಿಗಳನ್ನು ತಿಳಿಸಬೇಕು.ಯಾವುದೇ ಅಧಿಕಾರ,ಅಂತಸ್ತು ಪಡೆದರೂ ಸರಳತೆ,ನಿಸ್ಪೃಹತೆ ತ್ಯಜಿಸದ ಸುಜನ ಅವರ ಜೀವನ ಮುಂದಿನ ಯುವ ಪೀಳಿಗೆಗೆ ದಾರಿದೀಪ ಆಗಬೇಕು.ಈ ಬಗ್ಗೆ ರಾಜ್ಯ ಸರ್ಕಾರ,ಕನ್ನಡ ಸಾಹಿತ್ಯ ಪರಿಷತ್ತು,ಕನ್ನಡ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ
-ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಹಾಗೂ ಪತ್ರಕರ್ತರು
ಕೆ.ಆರ್.ನಗರ
ಮೈಸೂರು ಜಿಲ್ಲೆ
Mobil-6363172368
2 Responses
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
ಸುಜನಾ ಸರ್ವ ಜನಾಂಗದ ಸಹೃದಯಿ. ಸರ್ವೋದಯ ಸಮನ್ವಯ ಮನುಜಮತ ವಿಶ್ವಪಥ ಪೂರ್ಣದೃಷ್ಟಿಗಳ ಪರಿಪೂರ್ಣ ವ್ಯಕ್ತಿತ್ವ ನಮ್ಮ ನಮ್ಮೆಲ್ಲರ ಕವಿ ಸಾಹಿತಿ ಡಾ ಸುಜನಾ ಹೊಸಹೊಳಲು ಅವರದು. ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯಗಳ ಆವಿರ್ಭಾವದ ಪರಕಾಯ ಪ್ರವೇಶದ ಸಹೃದಯ ವೈಶಾಲ್ಯತೆಯ ಸುಜ್ಞಾನಿ ನಮ್ಮ ನಮ್ಮೆಲ್ಲರ ಸುಜನಾ ಅವರದು. ಸತ್ಯ ಶಾಂತಿ ಅಹಿಂಸೆ ತ್ಯಾಗ ಪ್ರೇಮಗಳ ಮೌಲ್ಯಾಧಾರಿತ ವ್ಯಕ್ತಿತ್ವ ಅಸಾಧಾರಣ ವ್ಯಕ್ತಿಯು ನಮ್ಮ ನಮ್ಮೆಲ್ಲರ ಸುಜನಾ ಅವರು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com