ಹನೂರು ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ಮಂಜೂರಾತಿ ಹಾಗೂ ಆದೇಶಪತ್ರವನ್ನು ವಿತರಣೆ ಮಾಡಿ ಶಾಸಕ ಎಮ್.ಆರ್.ಮಂಜುನಾಥ್ ಮಾತನಾಡಿ ಪ್ರತಿ ಕುಟುಂಬಕ್ಕೆ ಒಂದು ಸೂರು ಅಗತ್ಯವಾಗಿದ್ದು ಮನಗಂಡು ಸರ್ಕಾರ ಸೂರು ಒದಗಿಸುತ್ತಿದೆ ಹೀಗಾಗಿ ವಸತಿ ಮಂಜೂರಾತಿ ಪಡೆದಿರುವ ಜನರು ನಿಗದಿ ಅವಧಿಯೊಳಗೆ ಮನೆ ಪೂರ್ಣಗೊಳಿಸಬೇಕು ಯಾವುದೇ ಕಾರಣಕ್ಕೂ ಅರ್ಧಕ್ಕೆ ಮೋಟಕುಗೊಳಿಸಬಾರದು.ಒಂದಷ್ಟು ಉಳಿಕೆ ಮನೆಗಳು ಇದೆ ಇದನ್ನು ತರಲು ಸಂಬಂಧಪಟ್ಟ ಇಲಾಖೆಯವರ ಜೊತೆ ಚರ್ಚೆ ನೆಡೆಸಲಾಗುವುದು ಚುನಾವಣೆ ಬಳಿಕ ಗ್ರಾಮಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸುವ ಕಾರ್ಯ ಮಾಡುವ ಚಿಂತನೆ ಇದೆ ಎಂದರು.
ಗುಂಡಾಲ್ ಡ್ಯಾಂ ನೀರು ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ನೀರು ಸಂಗ್ರಹ ಮಾಡಲು ಕ್ರಮವಹಿಸಲಾಗುವುದು ಮಣಗಳ್ಳಿ,ಬಂಡಳ್ಳಿ,ಶಾಗ್ಯ ಭಾಗಕ್ಕೆ ನೀರಾವರಿ ಅಗತ್ಯವಾಗಿದೆ.ಇದಕ್ಕಾಗಿ ಯಾವ ಕೆರೆಗಳ ಮೂಲಕ ನೀರು ಸಂಗ್ರಹ ಮಾಡಬಹುದು ಎಂಬ ದೊಡ್ಡ ಚಿಂತನೆ ನಡೆಸಲಾಗಿದ್ದು ಇದಕ್ಕಾಗಿಯೂ ಸಹ ಶ್ರಮಿಸಲಾಗುತ್ತಿದೆ.ಕ್ಷೇತ್ರದ ಮುಖ್ಯ ರಸ್ತೆಗಳು ತೀರಾ ಹದಗೆಟ್ಟಿದ್ದು ಗಮನಕ್ಕೆ ಬಂದಿದೆ ಈಗಾಗಲೇ ಅಂದಾಜು 25ಕೋಟಿ ವೆಚ್ಚದ ನಾಲಾರೋಡ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಆಗಿದೆ ಮತ್ತಷ್ಟು ರಸ್ತೆ ಅಭಿವೃದ್ಧಿ ಆಗಬೇಕಿದ್ದು ಇದಕ್ಕೆ ಅನುದಾನ ಸಹ ಬೇಕಿದೆ.ಮುಖ್ಯವಾಗಿ ಲೊಕ್ಕನಹಳ್ಳಿ ಹಾಗೂ ಬಂಡಳ್ಳಿ ಮಾರ್ಗ ರಸ್ತೆಗೆ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪ್ರಸ್ತಾವನೆ ಸಹ ಕಳುಹಿಸಲಾಗಿದೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಖಂಡಿತ ಆಗಲಿದೆ ಎಂದು ಹೇಳಿದರು.
ಬಂಡಳ್ಳಿ-ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಆಗಿದ್ದು ಅಲ್ಪ ಬಾಕಿ ಉಳಿದಿದೆ ಶಾಲೆ ದುರಸ್ಥಿ ಕಾರ್ಯ ಸೇರಿದಂತೆ ವಿದ್ಯುತ್ ಕಲ್ಪಿಸಲು ಸೋಲಾರ್ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದರಲ್ಲದೆ ವಸತಿ ನಿರ್ಮಾಣಕ್ಕೆ ನೀಡುತ್ತಿರುವ ಸಹಾಯ ಧನ ಸಾಲುತ್ತಿಲ್ಲ ಹೀಗಾಗಿ ನಾಲ್ಕರಿಂದ ಐದು ಲಕ್ಷಕ್ಕೆ ಹೆಚ್ಚಿಸಬೇಕು ಈ ಬಗ್ಗೆ ಸದನದಲ್ಲಿ ದ್ವನಿ ಎತ್ತಲಾಗುವುದು ಎಂದರು. ಲೊಕ್ಕನಹಳ್ಳಿ ಹಾಗೂ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿಗೆ ಒಟ್ಟು 460 ಮನೆ ಮಂಜೂರಾಗಿದ್ದು, ಕಣ್ಣೂರು,ಮಂಗಲ ಸೇರಿ ಒಟ್ಟು 209 ಮಂಜೂರು, ಬಂಡಳ್ಳಿ 168, ಮಣಗಳ್ಳಿ 160,ಶಾಗ್ಯ 63,ಹುತ್ತೂರು 150,ಪಿಜಿ ಪಾಳ್ಯ 211,ಬೈಲೂರು 182 ವಸತಿಗಳು ಮಂಜೂರು ಆಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್,ತಾಲ್ಲೂಕು ಪಂಚಾಯತಿ ನೋಡಲ್ ಅಧಿಕಾರಿ ಸತೀಶ್,ಅಧ್ಯಕ್ಷರಾದ ಯಶೋಧಾ,ಸದಸ್ಯರುಗಳಾದ ಮಮತಾ ನಾಗಯ್ಯ,ತಮ್ಮಯ್ಯ, ಸೋಮಣ್ಣ,ಮಹದೇವಪ್ಪ,
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಾಗೇಂದ್ರಪ್ಪ,
ಪಿಡಿಓ ವಿಶ್ವನಾಥ್,ರಾಮು,ಸಿದ್ದಪ್ಪ,ಸಾರ್ವಜನಿಕರು ಮುಖಂಡರುಗಳು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್