ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವನ್ನು ಪಕ್ಷಿಗಳ ಅರವಟ್ಟಿಗೆಗಳಿಗೆ ಕಾಳು ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಳಗಾನೂರ ಪೋಲಿಸ್ ಠಾಣೆಯ ಅಧಿಕಾರಿ PSI ದಾದಾವಲಿ ಅವರು ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಪಕ್ಷಿಗಳ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಬರಗಾಲದಲ್ಲಿ ಕೂಡಾ ಪ್ರಾಣಿ ಪಕ್ಷಿಗಳ ಉಳುವಿಗಾಗಿ ಕೈಗೊಂಡ ಕಾರ್ಯ ಶ್ಲಾಘನೀಯ.ಸಾರ್ವಜನಿಕರು ಕೂಡಾ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ಮುಂದಾಗಬೇಕು.ಈ ವರ್ಷ ದೇಶದಾದ್ಯಂತ ಬರಗಾಲದಿಂದ ಅಂತರ್ಜಲ ಮತ್ತು ಪ್ರತಿ ಹಳ್ಳಕೊಳ್ಳಗಳಲ್ಲಿರುವ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿ ಎಲ್ಲಾ ಕಡೆ ಒಣಗಿರುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೀರಿನ ಅಭಾವ ಹೆಚ್ಚಾಗಿದೆ.ಅದೇರೀತಿ ಪ್ರಾಣಿಪಕ್ಷಿಗಳಿಗೆ ಮೂಕ ಜಲಜಂತುಗಳಿಗೆ ಮುಖ್ಯವಾಗಿ ನೀರು ಅವುಗಳಿಗೂ ಬೇಕು ಅಂತ ಸಂದರ್ಭದಲ್ಲಿ ಆ ಪ್ರಾಣಿಗಳು ನೀರಿಲ್ಲದೆ ಹುಡುಕಿಕೊಂಡು ಹೋಗಿ ಸತ್ತು ಹೋಗಿರುವ ಸಾಕಷ್ಟೂ ಉದಾಹರಣೆಗಳು ನಮ್ಮಲ್ಲಿವೆ.ಇದನ್ನರಿತ ವನಸಿರಿ ಫೌಂಡೇಶನ್ ನಿಂದ ಪ್ರಾಣಿಪಕ್ಷಿಗಳ ಉಳುವಿಗೋಸ್ಕರ ವಿನೂತನ ಕಾರ್ಯಕ್ರಮ ಮಣ್ಣಿನ ಮಡಿಕೆಗಳನ್ನು ಕಟ್ಟಿ ಆಹಾರ ಮತ್ತು ನೀರು ಹಾಕಿ ಪ್ರಾಣಿ ಪಕ್ಷಿಗಳು ದಾಹವನ್ನು ತೀರಿಸಿ ಜೀವ ಉಳಿಸುವ ನಿಟ್ಟಿನಲ್ಲಿ ಒಂದು ವಿನೂತನ ವಿಶಿಷ್ಠವಾದ ಪ್ರಯೋಗವನ್ನು ಮಾಡುತ್ತಿರುವ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕದ ಅದ್ಯಕ್ಷರಾದ ರಾಜು ಪತ್ತಾರ ಅವರಿಗೆ ನಮ್ಮ ಪೋಲಿಸ್ ಇಲಾಖೆಯಿಂದ ಅಭಿನಂದನೆಗಳು ಅವರ ಕಾರ್ಯಗಳು ನಿರಂತರವಾಗಿ ಇರಲಿ ಅವರ ಪ್ರಯತ್ನ ಹೀಗೆ ಸಾಗಲಿ ದೇವರು ಇಂತಹ ಕಾರ್ಯಗಳನ್ನು ಮಾಡಲು ಇನ್ನಷ್ಟು ಹೆಚ್ಚು ಶಕ್ತಿ ನೀಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ PSI ದಾದವಲಿ,PSI ರತ್ನಮ್ಮ ವನಸಿರಿ ಫೌಂಡೇಶನ್ ತಾಲೂಕ ಘಟಕದ ಅಧ್ಯಕ್ಷರಾದ ರಾಜು ಪತ್ತಾರ ಬಳಗಾನೂರ,ಸಿಬ್ಬಂದಿಗಳಾದ ಗೌರಮ್ಮ,ಸಾಯಿಲತಾ,ರಾಮಣ್ಣ,ವಿಶ್ವನಾಥ ಗದ್ದಿ,ಹನುಮೇಶ ವೀರನಗೌಡ ಹಾಗೂ ವನಸಿರಿ ಫೌಂಡೇಶನ್ ಸದಸ್ಯರು ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.