ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ
ಅತ್ತೆ ಸಾಯುವ ಹರಕೆ ಆಯ್ತು ಈಗ ಪಿಯುಸಿ ವಿದ್ಯಾರ್ಥಿ ಒಬ್ಬರು ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ನಾಗಾವಿ ಯಲ್ಲಮ್ಮ ದೇವಿಗೆ ಹರಕೆ ಹೊತ್ತು ಹುಂಡಿಗೆ ಹಣ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಇತ್ತಿಚೆಗೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಅತ್ತೆ ಸಾಯಲಿ ಎಂದು ಹರಕೆ ಹೊತ್ತು ಸೊಸೆ ಒಬ್ಬರು ನೋಟಿನ ಮೇಲೆ ಬರೆದು ಹುಂಡಿಗೆ ಹಣ ಹಾಕಿರುವ ಘಟನೆ ಭಾರೀ ವೈರಲ್ ಆಗಿತ್ತು.
ಈಗ ಚಿತ್ತಾಪುರ ತಾಲೂಕಿನ ರಾಷ್ಟ್ರ ಕೂಟರ ಕುಲದೇವತೆ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಒಬ್ಬರು ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಇಪ್ಪತ್ತು ರೂಪಾಯಿಯ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿದ್ದು ಮಾ.15 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿರುವ ಹುಂಡಿಯ ಹಣ ಎಣಿಕೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಯ ಕೈಗೆ ದೊರಕಿದೆ.
ವರದಿ ಮೊಹಮ್ಮದ್ ಆಲಿ ಚಿತ್ತಾಪುರ