ಚಾಮರಾಜನಗರ:ಕೇಂದ್ರಸರ್ಕಾರ ಸರ್ವಾಧಿಕಾರಿ ಧೋರಣೆಅನುಸರಿಸುತ್ತಿದೆ.ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರವಾಲ್ ಅವರ ಬಂಧನ ಇದಕ್ಕೆ ಸಾಕ್ಷಿಯಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಆಕ್ರೋಶವ್ಯಕ್ತಪಡಿಸಿದರು.’ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆಬಂದ ದಿನದಿಂದ ವಿರೋಧಪಕ್ಷಗಳನ್ನು ತುಳಿಯುವ ಕೆಲಸಮಾಡುತ್ತಿದೆ.ಭ್ರಷ್ಟಾಚಾರ ಸಹಮಿತಿ ಮೀರಿದೆ ಈ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.“ಅಂಬೇಡ್ಕರ್,ಮಹಾತ್ಮಗಾಂಧಿ ಚಿಂತನೆಯಲ್ಲಿ ಅರವಿಂದ ಕೇಜಿವಾಲ್ ಅಡಳಿತ ನಡೆಸುತ್ತಿದ್ದಾರೆ.ಅಬಕಾರಿ ನೀತಿಹಗರಣದ ಜೊತೆ ನಂಟಿರುವ ಹಣಅಕ್ರಮ ವರ್ಗಾವಣೆ ಆರೋಪದಲ್ಲಿಜಾರಿ ನಿರ್ದೇಶನಾಲಯದ (ಇ.ಡಿ)ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿರುವುದು ಖಂಡನೀಯ.ಇದು ಸಂವಿಧಾನದ ಕಗ್ಗೊಲೆ ಎಂದರು.
‘ಬಿಜೆಪಿಯವರು ತಮಗೆ ಅನುಕೂಲವಾಗುವಂತೆ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ. ದಾವೂದ್ ಇಬ್ರಾಹಿಂ ರೀತಿ ಕಂಪನಿಗಳಿಂದ ಹಫ್ತಾ ವಸೂಲಿ ಮಾಡಲಾಗುತ್ತಿದೆ.ಹಿಂದುಳಿದ ಸಮುದಾಯಗಳನ್ನು ಕೇವಲ ಮತಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದುಆರೋಪಿಸಿದರು.’ರಾಮನ ಧ್ಯಾನ ಮಾಡುವ ಇವರು ರಾಮನ ಚಿಂತನೆಗಳನ್ನು ಮಾತ್ರ ಅಳವಡಿಸಿಕೊಂಡಿಲ್ಲ.ಸರ್ಕಾರ ಸರಿದಾರಿಯಲ್ಲಿ ನಡೆಯಬೇಕಾದರೆ ವಿರೋಧಪಕ್ಷ ಬೇಕು.ಆದರೆ ವಿರೋಧಪಕ್ಷ ಇಲ್ಲದಂತೆ ಮಾಡಲು ಬಿಜೆಪಿ ಮುಂದಾಗಿದೆ ಎಂದರು.ಪಕ್ಷದ ಮುಖಂಡರಾದ ಮಹದೇವ್ ಪ್ರದಾಸ್,ಮಹದೇವ ಸ್ವಾಮಿ,ರವಿ,ನಾಗೇಶ್ ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್