ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಕ್ತದಾನ ಮಹಾ ದಾನ:ಡಾ.ಈಶ್ವರ ಕರಿಗೋಳೇಶ್ವರ

ಜೇವರ್ಗಿ:ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನವಾಗಿದೆ.ಹದಿನೆಂಟರಿಂದ ಅರವತ್ತು ವರ್ಷದೊಳಗಿನ ನಲ್ವತ್ತೈದು ಕೆಜಿ ತೂಕದ,ಯಾವುದೇ ಕಾಯಿಲೆ ಇಲ್ಲದ ಪ್ರತಿಯೊಬ್ಬ
ಆರೋಗ್ಯವಂತ ಮನುಷ್ಯರು ರಕ್ತದಾನ ಮಾಡಬಹುದು.ರಕ್ತದಾನದಿಂದ ಮೂರು ಜೀವವನ್ನು ರಕ್ಷಿಸಬಹುದು.ಈ ಕಾರ್ಯವು ಮಾನವೀಯತೆಯ ಸಂಕೇತವಾಗಿದೆ ಎಂದು ವೈದ್ಯ ಮಮತಾ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಘಟಕ,ಐಕ್ಯೂ ಏಸಿ,ತಾಲೂಕಾ ಸರ್ಕಾರಿ ಆಸ್ಪತ್ರೆ,ಎಐಡಿಎಸ್ಓ ಕಲಬುರಗಿ ಜಿಲ್ಲಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಹೀದ್ ಭಗತ್ ಸಿಂಗ್ ಅವರ ಹುತಾತ್ಮ ದಿನಾಚರಣೆ ಅಂಗವಾಗಿ ಕಾಲೇಜಿನ ಡಾ.ಬಿ. ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ತಾಲೂಕಾ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳಾದ ಡಾ.ಸಿದ್ದು ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಸ್ನೆೇಹಾ ಕಟ್ಟಿಮನಿ ರವರು ಹುತಾತ್ಮ ಭಗತ್ ಸಿಂಗ್ ಕುರಿತು ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಗೊಳೇಶ್ವರ ಅಧ್ಯಕ್ಷತೆ ವಹಿಸಿದ್ದರು.ಐಕ್ಯೂಏಸಿ ಸಂಚಾಲಕರಾದ ಡಾ.ಖುತೇಜಾ ನಸ್ರೀನ್,ಸಿಬ್ಬಂದಿ ಕಾರ್ಯದರ್ಶಿ ಡಾ.ಲಕ್ಷ್ಮಣ ಬೋಸ್ಲೆ,ಡಾ.ಶರಣಪ್ಪ ಸೈದಾಪೂರ,ಡಾ.ವಿನೋದ ಕುಮಾರ,ಡಾ.ಗಿರೀಶ ರಾಠೋಡ್,ಡಾ.ನಾಗರೆಡ್ಡಿ.
ಡಾ.ಖಾಜಾವಲಿ ಈಚನಾಳ,ಡಾ.ಶರಣಪ್ಪ ಗುಂಡುಗುರ್ತಿ,ಭೀಮಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆಯೋಜಕರು,ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ.ವಿಷ್ಣುವರ್ಧನ್ ಕಾರ್ಯ ಕ್ರಮವನ್ನು ನಡೆಸಿಕೊಟ್ಟರು.ಈ ಶಿಬಿರದಲ್ಲಿ ಆಧ್ಯಾಪಕರು ಸೇರಿದಂತೆ ೨೯ ಜನ ವಿದ್ಯಾರ್ಥಿಗಳು ರಕ್ತ ದಾನ ಮಾಡಿದರು.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ