ಹನೂರು ಸಮುದಾಯದ ಭವನ ನಿರ್ಮಾಣಕ್ಕೆ ತೊಂದರೆ ಉಂಟಾದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆ ಬಗೆಹರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ದೊಡ್ಡಿ ಇಂದವಾಡಿ ಸಿದ್ದರಾಜು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುವ ಚೌಡರ ಕೆರೆ ನೆನಪಿನಾರ್ಥವಾಗಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ನಡೆಯುವ ಸಮಾವೇಶಕ್ಕೆ ತೆರಳುವ ಉದ್ದೇಶದಿಂದ ಹನೂರು ಪಟ್ಟಣದ ಆರ್ ಎಂ ಸಿ ಆವರಣದಲ್ಲಿ ಪೂರ್ವ ಬಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ನಮ್ಮ ಸಂಘಟನೆ ವತಿಯಿಂದ ನೆಡೆಯುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಚೌಡರ ಕೆರೆ ನೀರನ್ನು ತಮ್ಮ ಅಪಾರ ಅನುಯಾಯಿಗಳ ಜೊತೆಗೆ ನೀರನ್ನು ಕುಡಿದ ನೆನಪಿನಾರ್ಥವಾಗಿ ಕಾರ್ಯಕ್ರಮಕ್ಕೆ ದಯಮಾಡಿ ಎಲ್ಲರೂ ಸ್ವ-ಇಚ್ಛೆಯಿಂದ ಬರಬೇಕು ಹಾಗೂ ಹೆಚ್ಚಿನ ರೀತಿಯಲ್ಲಿ ನಿಮ್ಮ ಜೊತೆ ಆಸಕ್ತರನ್ನು ಕರೆದುಕೊಂಡು ಬರಬೇಕು ಎಂದರು ನಮ್ಮ ಸಮುದಾಯದ ಹಿತ ದೃಷ್ಟಿಯಿಂದ ನಾವು ಜಾಗೃತಿ ಆಗುತ್ತಿರುವುದು ಸಂತೋಷದ ವಿಷಯ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆ ಆಗಬೇಕಾಗಿದೆ ಗ್ರಾಮ ಮಟ್ಟದಲ್ಲಿ ಶಾಖೆಗಳನ್ನು ತೆರೆದು ಪಧಾಧಿಕಾರಿಗಳನ್ನು ಆಯ್ಕೆ ಮಾಡಬೇಕು,ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದರು ನಮ್ಮ ಭಾಗದ ಕೊತ್ತನೂರು ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯದ ನಿರ್ಮಾಣಕ್ಕೆ ಕೆಲವು ಅಡೆತಡೆಗಳು ಇದ್ದು ಅವುಗಳನ್ನು ನಿವಾರಣೆ ಮಾಡಬೇಕು ದೇವಸ್ಥಾನ ನಿರ್ಮಾಣಕ್ಕೆ ಕೊಡುವ ಆಸಕ್ತಿಯನ್ನು ಸಮುದಾಯದ ಭವನ ನಿರ್ಮಾಣ ಮಾಡುವುದಕ್ಕೆ ಕೊಡುತ್ತಿಲ್ಲ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಕ್ಕೆ ಸಿದ್ದರಾಗಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ವೀರ,ಹನೂರು ತಾಲ್ಲೂಕು ಸಂಚಾಲಕ ಮಾದೇಶ್ ಬೈರಾನಾಥ್,ಕೊಳ್ಳೇಗಾಲ ತಾಲ್ಲೂಕು ಸಂಚಾಲಕ ಶಿವಸ್ವಾಮಿ,ಜಿಲ್ಲಾ ಸಂಘಟನೆ ಸಂಚಾಲಕ ಹನೂರು ನಾಗರಾಜು,ಮಂಬಳ್ಳಿ ಹಿಂಡಿಗಯ್ಯ,ಕೊತ್ತನೂರು ಚಿಕ್ಕ ದೊಡ್ಡಯ್ಯ,ಭಾಗ್ಯಮ್ಮ,ಮರಿಯಮ್ಮ,ಚಿಕ್ಕತಾಯಮ್ಮ, ಹಾಗೂ ಇನ್ನಿತರರು ಇದ್ದರು.
ವರದಿ:ಉಸ್ಮಾನ್ ಖಾನ್