ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಂಗು ರಂಗಿನ ಹೋಳಿ ಹಬ್ಬಕ್ಕೆ ಸಾಕ್ಷಿಯಾದ ಯಲಬುರ್ಗಾ

ಕೊಪ್ಪಳ:ಬಣ್ಣದ ಆಟದಲ್ಲಿ ಮುಳುಗಿ ಎದ್ದ ಯುವಕರು ಹೋಯ್ಕೋಂಡವರ ಬಾಯಿಗೆ ಹೋಳಿಗೆ ತುಪ್ಪ ಇದು ಈ ಹೋಳಿ ಹಬ್ಬದಲ್ಲಿ ಸಾಗಿ ಬಂದಿರುವ ಸಂಪ್ರದಾಯ.

ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ   ಪ್ರತಿಯೊಂದು ಹಬ್ಬ ಹರಿದಿನಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡು ಬಂದಿರುತ್ತವೆ,  ಅಂತಹ ಹಬ್ಬದಲ್ಲಿ ಇದು ಒಂದು ಹಬ್ಬ ವಿಶೇಷವಾಗಿ ಪುರುಷರಿಗೆ ಮಾತ್ರ ಸೀಮಿತವಾಗಿದೆ,ಈ ಯುವ ಸಮುದಾಯ ಹರುಕು ಬಟ್ಟೆಗಳನ್ನು ಹಾಕಿಕೊಂಡು ಲಭ..ಲಭ..ಲಭನೆ ಹೊಯ್ಕೊಂಡು ಕೇಕೆ ಹಾಕುತ್ತಾ ರಂಗು ರಂಗಿನ ಹೋಳಿ ಬಣ್ಣದ ಆಟ ಆಡುವುದೇ ಇವರ ಹಬ್ಬವಾಗಿದೆ,ಉಳಿದಿರುವ ಎಲ್ಲಾ ಹಬ್ಬಗಳು ಮಹಿಳೆಯರಿಗೆ ಸೀಮಿತವಾಗಿವೆ,ಇರಲಿ ಏನೇ ಆದರೂ ಸರ್ವರ ಸಹಕಾರದಿಂದ ಜಾತಿ ಭೇದ ಭಾವ ಮರೆತು ಹಬ್ಬದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವುದು ವಿಶೇಷವಾಗಿದೆ ಈ ಹಬ್ಬದ ಬಗ್ಗೆ ಪುರಾಣ ಕಥೆಗಳಿಂದ ನಾವು ಹಿರಿಯರಿಂದ ಇನ್ನೂ ತಿಳಿದುಕೊಳ್ಳಬೇಕು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಹುಣ್ಣಿಮೆಯ ದಿವಸ ಶಿವನು ತನ್ನ ಮೂರನೇ ಕಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದ್ದಕ್ಕಾಗಿ ಹೋಳಿ ಹುಣ್ಣಿಮೆಯನ್ನು ಕಾಮದೇವನ ಹಬ್ಬವನ್ನಾಗಿ ಪುರಾತನ ಕಾಲದಿಂದ ಆಚರಿಸುವ ಸಂಪ್ರದಾಯ ಇದಾಗಿದೆ,ನಮ್ಮಲ್ಲಿರುವ ದ್ವೇಷ,   ಅಸೂಯೆ,ಅಜ್ಞಾನ,ಅಂಧಕಾರ,ಮೂಢನಂಬಿಕೆಯ ಆಚಾರಗಳನ್ನು ಬಣ್ಣಗಳಿಂದ ತೊಳೆದು ಸ್ವಚ್ಛಂದವಾಗಿ ನಿಚ್ಚಳವಾಗಿ ಪರಸ್ಪರ ಪ್ರೀತಿ,ಪ್ರೇಮ,ಹಿರಿಯರಿಗೆ ಗೌರವ,ಸದ್ವಿವಿಚಾರ,ಸದ್ವಿನಯ,ಸದ್ಗಗುಣಗಳನ್ನು,ಉತ್ತಮ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಳಿ ಹಬ್ಬವನ್ನು ಆಚರಣೆ ಮಾಡಿದರೆ ಈ ಹೋಳಿ ಹಬ್ಬಕ್ಕೆ ಮತ್ತಷ್ಟು ಮೆರಗು ಬರುವುದಕ್ಕೆ ನಾವೆಲ್ಲರೂ ಕಾರಣ ಇದರ ಜೊತೆಗೆ ನಮ್ಮಲ್ಲಿರುವ ಕಾಮ, ಕ್ರೋಧ,ಲೋಭ,ಮೋಹ-ಮದ, ಮತ್ಸರ ಇಂತಹ ದುಷ್ಟ ಗುಣಗಳಿಂದ ದೂರವಿದ್ದು ಬಣ್ಣಗಳ ಮೂಲಕ ತೊಳೆಯಬೇಕು ಆಗ ನಮ್ಮ ಬದುಕು ಸುಂದರ ಬಣ್ಣದ ಬದುಕು ಆಗುವದಕ್ಕೆ ಸಾಧ್ಯವಾಗುತ್ತದೆ.ಇಂತಹ ಹೋಳಿ ಹಬ್ಬವನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗದಲ್ಲಿ ನಾವೆಲ್ಲರೂ ನೋಡಬೇಕು ಯಲ್ಬುರ್ಗಾದಲ್ಲಿ ರಂಗು ರಂಗಿನ ಹೋಳಿ ಹೋಯ್ಕೊಂಡವರ ಬಾಯಿಗೆ ಹೋಳಿಗೆ ತುಪ್ಪ ಇದು ಈ ಹಬ್ಬದ ವಿಶೇಷ ಸಂಪ್ರದಾಯವಾಗಿದೆ ಪ್ರಮುಖ ಮಾರ್ಗದಲ್ಲಿ ಸರ್ಕಾರಿ ಕಾಮ ದೈವದ ಕಾಮ,ಗಾಳೇರ ಕಾಮ,ಕಂಡೇರ ಕಾಮ ಹೀಗೆ ನಾಲ್ಕು ಕಡೆ ನಗರದ ಹಿರಿಯರು ಯುವ ಸಮುದಾಯದವರು ಜಾತಿ ಭೇದ ಮರೆತು ಕಾಮನ ಮೂರ್ತಿ,ರತಿದೇವಿ ಹಾಗೂ ಭೀಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ಆಚರಿಸುತ್ತಾರೆ ಈ ವೇಳೆ ಕಲಾವಿದರಿಂದ ಮನರಂಜನೆ ಕಾರ್ಯಕ್ರಮಗಳು ಜರುಗುತ್ತವೆ, ಹುಣ್ಣಿಮೆಯ ರಾತ್ರಿಯ ವೇಳೆ ನಾಲ್ಕು ಕಾಮನ ಸಮಿತಿಯ ಸರ್ವ ಸದಸ್ಯರು ಕೂಡಿಕೊಂಡು ಕಳಬೇಡ ಸೋಗು,ಹೆಣದ ಬಂಡಿ,ಬಣ್ಣದ ಓಕುಳಿ ಬಂಡಿಗಳ ಮೂಲಕ ಮೆರವಣಿಗೆಯ ಮುಖಾಂತರವಾಗಿ ಸರ್ಕಾರಿ ಕಾಮದ ಕಟ್ಟಿಯವರಿಗೆ ಬರುತ್ತಾರೆ ಈ ಸಮಯದಲ್ಲಿ ಕಳಬೇಡನ ಸೋಗು ಈತನ ಕುಣಿತವನ್ನು ನೋಡಿದರೆ ಮೈ ಕೈ ಜುಮ್ ಎನ್ನುತ್ತದೆ,ಕಳಬೇಡನ ಹಿಡಿಯಬೇಕಾದರೆ 20- 30 ಜನ ಯುವಕರೇ ಬೇಕಾಗುತ್ತದೆ ಈ ಸೋಗು ನಡೆಯುತ್ತಾ ಬರುವಾಗ ಯುವಕರು ಬಾಗುತ್ತಾರೆ ಆಗ ಇವರ ಬೆನ್ನಿನ ಮೇಲೆ ಕಾಲನ್ನು ಇಡುವ ಮೂಲಕ ಹೆಜ್ಜೆಯ ಮೇಲೆ ಹೆಜ್ಜೆಯ ಕಾಲಿನಿಂದ ಗೆಜ್ಜೆಯ ಸಪ್ಪಳ ಮಾಡುತ್ತಾ ಅತ್ತ ಕಡೆಯಿಂದ ಇತ್ತ,ಇತ್ತ ಕಡೆಯಿಂದ ಅತ್ತ ತಕ ತೈ ದಿತ್ತ ತೈ ಅಂತ ಕುಣಿಯುತ್ತಾ ಕಳಬೇಡ ಹೋಗುತ್ತದೆ,ಇದರ ಹಿಂದೆ ಹೆಣದ ಬಂಡಿಯಲ್ಲಿ ಪತಿಯನ್ನು ಕಳೆದುಕೊಂಡಿರುವ ಪತ್ನಿ ತನ್ನ ಕಷ್ಟಗಳನ್ನು ತೋಡಿಕೊಂಡು ಬೋರಾಡಿ,ಚೀರಾಡಿ ಅತ್ತು  ಕರೆಯುವ ಪ್ರಸಂಗ ನೋಡುಗರ ಹೃದಯ,ಮನಸ್ಸು ಕರಗಿ ನೀರಾಗಿ ಕಣ್ಣು ತುಂಬಿ ನೀರು ಬರುತ್ತದೆ ಮತ್ತು ಹಾಸ್ಯಮಯವಾಗಿ ಅಳುವಾಗ ಜನರು ನಗುತ್ತಾರೆ, ಒಟ್ಟಿನಲ್ಲಿ ಹೇಳಬೇಕೆಂದರೆ ಮನರಂಜನೆ ಸಿಗುತ್ತದೆ.   ಇದರ ಮಧ್ಯದಲ್ಲಿ ವಿವಿಧ ಕಲಾವಿದರು ಪುರುಷರು ಮಹಿಳೆಯರ ಬಟ್ಟೆ ಧರಿಸಿ ಕುಣಿದು ಕುಪ್ಪಳಿಸುತ್ತಾರೆ ಇದರ ಹಿಂದೆ ಬಣ್ಣದ ಓಕಳಿ ಬಂಡಿಯವರು ಸಾರ್ವಜನಿಕರಿಗೆ ಬಣ್ಣವನ್ನು ಎರಚುತ್ತಾರೆ, ಉಗ್ಗುತ್ತಾರೆ ಇದರಿಂದ ಇವರ ಬದುಕು ಸುಂದರವಾಗುತ್ತದೆ ಎಂಬ ನಂಬಿಕೆ ಇವರದಾಗಿದೆ. ಬೆಳಗಿನ ಜಾವದಲ್ಲಿ ಕಾಮ ಸತ್ತ ಭೀಮ ಉಳಿದ , ರತಿದೇವಿ ರಂಡಿ ಮುಂಡಿ ಆದಳಪ್ಪೊ ಎಂದು ಎರಡೂ ಕೈಯಿಂದ ಬಾಯಿಗೆ ಬಡಿದುಕೊಂಡು ಲಭ ಲಭನೆ ಹೊಯ್ಕೋಂಡು ತುಡಗತನದಿಂದ ಕಳವು ಮಾಡಿ ತಂದಿರುವ ಕಟ್ಟಿಗೆ ರಾಶಿಯಲ್ಲಿ ಕಾಮದಹನ ಮಾಡುತ್ತಾರೆ ಇದೇ ಬೆಂಕಿಯನ್ನು ತಂದು ಮನೆಯ ಕುಟುಂಬದವರು ಸೇರಿ ಹುಳಿ ಕಡಲೆಯನ್ನು ಸುಟ್ಟುಕೊಂಡು ತಿನ್ನುತ್ತಾರೆ ಇದರಿಂದ ಇವರ ಹಲ್ಲು ಗಟ್ಟಿಮುಟ್ಟಿ ಆಗುತ್ತವೆ ಎಂಬ ನಂಬಿಕೆ ಇವರದಾಗಿದೆ, ನಂತರ ಯುವಕರು ಓಕಳಿಯ ಬಣ್ಣದ ಆಟ ಮುಗಿಸಿದ ನಂತರ ಕಾಮ ಸತ್ತ ಭೀಮ ಉಳಿದ ರತಿ ದೇವಿ  ರಂಡಿಮುಂಡಿ ಆದಳಪ್ಪೋ ಎಂದು ಹೊಯ್ಕೋಂಡು ಹೊಯ್ಕೋಂಡವರ ಬಾಯಿಗೆ ಹೋಳಿಗೆ ತುಪ್ಪ ಎಂದು ಹೋಳಿಗೆ ಊಟ  ಮಾಡುತ್ತಾರೆ ನಂತರ ಕಾಮದಹನವಾದ ಬಳಿಕ ರೈತರು ಕಾಮನ ಬೂದಿಯನ್ನು ತಮ್ಮ ಹೊಲದಲ್ಲಿ ಹಾಕುತ್ತಾರೆ ಇದರಿಂದ ರೈತರ ಫಸಲು ಬೆಳೆ ತುಂಬಾ ಚೆನ್ನಾಗಿ ಬರುತ್ತದೆ ಎಂಬುದು ಇವರ ನಂಬಿಕೆಯಾಗಿದೆ ಇದು ಹೋಳಿ ಹಬ್ಬದ ಸಂಪ್ರದಾಯ ಏನೇ ಆಗಲಿ ಈ ಹಬ್ಬದಲ್ಲಿ ರೈತರಿಗೆ ಉಪಯೋಗಕ್ಕೆ ಬರುವ ಕೂರಿಗೆ,ಕುಂಟೆ,ತೊಲೆ,ಕಂಬ ಇಂತಹ ಕಟ್ಟಿಗೆಯ ವಸ್ತುಗಳನ್ನು ತರಲಾರದೆ ಉಳಿದ ಕಟ್ಟಿಗೆಯನ್ನು ತರುವುದಕ್ಕೆ ರೈತರು ಯುವಕರಿಗೆ ಮಾಹಿತಿಯನ್ನು ಪೂರ್ವಭಾವಿ ಸಭೆಯಲ್ಲಿ ನೀಡಬೇಕು ಅಂದಾಗ ಅಂತ ಕಟ್ಟಿಗೆಯನ್ನು ತರಲಾರದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಅಲ್ಲವೇ?…

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ