ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಧಗ್ರಾ ಯೋಜನೆಯಿಂದ ಕೆರೆ ಹೂಳೆತ್ತಿದ ಪ್ರಯುಕ್ತ ಕಿರು ಲೇಖನ
ಕೆರೆಗಳ ಮೂಲಕ ಹಳ್ಳಿಯನ್ನು ಗುರುತಿಸುವ ಕಾಲವಿತ್ತು ಇಂದು ಜಾಗತೀಕರಣದ ಪರಿಣಾಮವಾಗಿ ಕೆರೆಗಳು ಕಾಣದಾಗಿವೆ!ಕೆರೆಗಳು ಕೇವಲ ನೀರಿನ ದಾಹ ನೀಗಿಸುವ ತಾಣಗಳಲ್ಲ..ಬದಲಾಗಿ ಹಳ್ಳಿಯ ಜೀವನಾಡಿಗಳು…ಕೆರೆಗಳ ಮೂಲಕ ಹಳ್ಳಿಯ ಶ್ರೀಮಂತಿಕೆಯನ್ನು ಅಳೆಯುವ ಸ್ಥಿತಿಯನ್ನು ರಾಜ ಮಹಾರಾಜರ ಸಾಮ್ರಾಜ್ಯದ ಸಾಧನೆಗಳಲ್ಲಿ ಕಾಣುತ್ತೇವೆ…ಕೆರೆಗಳು ಉಳಿದರೆ ಹಳ್ಳಿಗಳು ಉಸಿರಾಡಲು ಸಾಧ್ಯ…ಇದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆ ಹೊಳೆತ್ತೆವ ಕಾರ್ಯಕ್ಕೆ ಮುಂದಾಗಿರುವುದು ನಾಡಿನ ಜನತೆಗೆ ಸಂತಸ ತಂದಿದೆ.
ನಾಡಿನಾದ್ಯಂತ ಇಲ್ಲಿಯವರೆಗೆ 6.400 ಕ್ಕೂ ಅಧಿಕ ಕೆರೆಗಳಿಗೆ ಹೊಳೆತ್ತೆವ ಕಾರ್ಯಕೈಗೊಂಡಿರುವದು ಹೆಮ್ಮೆ ಪಡುವ ಸಂಗತಿ ಹಿಂದುಳಿದ ಪ್ರದೇಶವೆನಿಸಿಕೊಂಡಿರುವ ಗದಗ ಜಿಲ್ಲೆಯಲ್ಲಿಯೂ ಕೂಡಾ ಅನೇಕ ಕೆರೆಗಳ ಹೊಳೆತ್ತುವ ಕೆಲಸಗಳು ಮುಗಿದಿವೆ ಇತ್ತೀಚೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಕುಡಿಯುವ ನೀರಿನ ಕೆರೆಗೆ ಹೊಳೆತ್ತುವ ಮೂಲಕ ಕಾಯಕಲ್ಪ ಕಲ್ಪಿಸಿದ್ಧು ಜಂತಲಿ ಶಿರೂರು ಗ್ರಾಮದ ಜನತೆ ಶ್ರೀ ಗಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ “ನಮ್ಮೂರ ನಮ್ಮ ಕೆರೆ” ಕಾರ್ಯಕ್ರಮದಡಿ ಕೆರೆ ಹೊಳೆತ್ತುವ 2 ಎಕ್ಕರೆ 10ಗುಂಟೆ ವಿಸ್ತೀರ್ಣ ದಲ್ಲಿರುವ ಜಂತಲಿ ಶಿರೂರು ಶುದ್ಧ ಕುಡಿಯುವ ನೀರಿನ ಕೆರೆಯನ್ನು ಕಾಮಗಾರಿ ಮಾಡಿದ್ಧು 4 ಲಕ್ಷ 12 ಸಾವಿರ ಮೊತ್ತ ಕಾಮಗಾರಿಗೆ ಖರ್ಚಾಗಿದೆ ಜಂತಲಿ ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿದಂತೆ ಜಂತಲಿ ಶಿರೂರು ಕೆರೆ ಹೊಳೆತ್ತೆವ ಸಮಿತಿಯವರ ಸಹಕಾರದಿಂದ ಶುದ್ಧ ಕುಡಿಯುವ ನೀರಿನ ಕೆರೆ ಪುನರ್ ಜೀವನಗೊಂಡಿದೆ.
ಐದು ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್ ಪ್ರಮಾಣದ ಫಲವತ್ತತೆಯ ಮಣ್ಣನ್ನು ರೈತರು ಹೊಲದ ಬದುಗಳಿಗೆ,ಶಾಲೆಯ ಆವರಣಕ್ಕೆ,ಕೃಷಿ ಫಲವತ್ತತೆಗೆ ರೈತರು ಬಳಸಿಕೊಂಡಿದ್ದಾರೆ.ಒಟ್ಟು 21 ದಿನಗಳ ಕಾಲ ಕೆಲಸ ನಡೆದು ಕೆರೆಯ ಸ್ವಚ್ಚತೆಯೊಂದಿಗೆ ಕೆರೆಯ ಮಣ್ಣು ಉಪಯುಕ್ತ ಕಾರ್ಯಗಳಿಗೆ ಬಳಕೆಯಾಗಿದೆ, ಸರ್ವರ ಸಹಕಾರದಿಂದ ಕೆರೆಯು ಪುನರ್ ಜೀವನಗೊಂಡಿರುವುದು ಶ್ಲಾಘನೀಯ.
ಸೃಷ್ಟಿಯ ವೈಪರೀತ್ಯದ ಭೀಕರ ಬರಗಾಲಗಳನ್ನು ಎದುರಿಸಬೇಕಾದರೆ ನಾವು ನಮ್ಮ ಹಳ್ಳಿಯ ಕೆರೆಗಳನ್ನು ಪುನರ್ ಜೀವನಗೊಳಿಸಿ ಗಟ್ಟಿ ಮಾಡಿ ಕಟ್ಟಿಕೊಳ್ಳಬೇಕಾಗಿದೆ,ಪ್ರಪಂಚದ ಕೆಲ ದೇಶಗಳಲ್ಲಿ ನೀರಿಲ್ಲದೇ ಬರಗಾಲದಿಂದ ಜನರು ಪ್ರಾಣವನ್ನು ಕಳೆದುಕೊಂಡಿದ್ಧಾರೆ!ಜೀವ ಜಲ ರಕ್ಷಣೆಗೆ ನಾವೆಲ್ಲರು ಕಂಕಣ ಬದ್ಧರಾಗಿ ಕೆಲಸ ಮಾಡಬೇಕಾಗಿದೆ,ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ನಮ್ಮೂರ ನಮ್ಮಕೆರೆ’ ಕಾರ್ಯಕ್ರಮದಡಿ ನಮ್ಮೂರ ಕೆರೆಯನ್ನು (ಜಂತಲಿ ಶಿರೂರು ಶುದ್ಧ ಕುಡಿಯುವ ನೀರಿನ ಕೆರೆ) ಹೊಳೆತ್ತುವ ಮೂಲಕ ಪುನರ್ ಜೀವನಗೊಳಿಸಿದ್ದು ಸಂತಸ ತಂದಿದೆ.
-ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ
ಜನಪದ ಕಲಾವಿದರು