ಏಪ್ರಿಲ್ ಕೂಲ್ ಆಚರಿಸಿ
ಪರಿಸರ ಉಳಿಸಿ
ಜಾಗತಿಕ ತಾಪಮಾನದ ಏರಿಕೆ
ಆಗದಿರಲಿ ಹಕ್ಕಿ ಪಕ್ಷಿಗಳ ಮರಿಚಿಕೆ
ಚಾವಣಿಗಳ ಮೇಲಿರಲಿ ನೀರಿನ ಪಾತ್ರೆ
ಬದುಕು ಮೌಲ್ಯಗಳ ಯಾತ್ರೆ
ಮನೆಯಲ್ಲಿರುವ ಧವಸ ಧಾನ್ಯ
ಹಂಚಿಕೊಂಡು ತಿಂದರೆ ಜೀವನ ಧನ್ಯ
ಬಾಡದಂತೆ ಕಾಪಾಡಿ ಗಿಡ ಮರ
ಬರುಡಾಗದಿರಲಿ ಪ್ರಕೃತಿಯ ಆಕಾರ
ನೀರನ್ನು ಮಿತವಾಗಿ ಬಳಸದಿದ್ಧರೇ ಹಾಕಲಿ ದಂಡ
ನಿಸರ್ಗವೇ ನಮಗೆ ಆಧಾರ
ಅರಣ್ಯದಲ್ಲಿ ನಿರ್ಮಿಸಲಿ ಜಲ ಹೊಂಡ
ವನ್ಯ ಪ್ರಾಣಿಗಳಿಗೆ ಆಸರ
ನಿಸ್ವಾರ್ಥವಾಗಿ ಬದುಕೋನ
ಸೃಷ್ಟಿಯನ್ನು ಪ್ರೀತಿಸೋನ
ಏಪ್ರಿಲ್ ಕೂಲ್ ಆಗಲಿ ಜನಾಂದೋಲನ
ಜೀವ ಸಂಕುಲವ ರಕ್ಷಿಸೋಣ
ರಚನೆ:ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ