ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಇದೆ 30-3-2024 ರಂದು ನಡೆದ ಆರಾಧ್ಯದೈವ ಕನಕಗಿರಿ ಶ್ರೀ ಕನಕಾಚಲಪತಿ ದೇವರ ಜಾತ್ರಾ ಪ್ರಯುಕ್ತ ಸಂಪ್ರದಾಯದಂತೆ “ಗರುಡೋತ್ಸವ (ಕಲ್ಯಾಣೋತ್ಸವ) ಕಾರ್ಯಕ್ರಮ ಪ್ರಯುಕ್ತ ರಾಜವಂಶಸ್ಥರು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ಮೂಲಧರ್ಮಗುರುಗಳಾದ ಶ್ರೀ ರಾಜಾ ನವೀನಚಂದ್ರ ನಾಯಕರ ನೇತೃತ್ವದಲ್ಲಿ ಹಾಗೂ ರಾಜಪುರೋಹಿತರ ಪೌರೋಹಿತ್ಯದಲ್ಲಿ”ಗೋಪಾಳ” ಕಾರ್ಯಕ್ರಮ” ಜರುಗಿತು.ಈ ಶುಭ ಸಂದರ್ಭದಲ್ಲಿ ಸಮಸ್ತ ಹುಲಿಹೈದರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ಬಾಂಧವರು ಹಾಗೂ ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ” ಲಕ್ಷ್ಮಣ ಕಂಬಾರ ನಾಯಕ”
ಎಂಬುವವರು ರಾಜವಂಶಸ್ಥರಿಗೆ”ಶ್ರೀ ಕನಕಾಚಲಪತಿ ದೇವರು,ರಾಜವಂಶಸ್ಥ ರಾಜಾ ಉಡಚಪ್ಪ ನಾಯಕರು ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರವುಳ್ಳ ಫೋಟೋವನ್ನು ಉಡುಗೊರೆಯಾಗಿ ನೀಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.