ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಭಾಷೆ ಜನಸ್ನೇಹಿಯಾಗಿರಬೇಕು

ಜಗತ್ತಿನ ಎಲ್ಲಾ ಭಾಷೆಗಳ ಪದಕೋಶದಲ್ಲಿ ಅನೇಕ ಭಾಷೆಗಳ ಪದಗಳು ಎರವಲಾಗಿ ಸಹಜ ರೀತಿಯಲ್ಲಿ ಬಳಕೆಗೊಳ್ಳುತ್ತಿರುತ್ತವೆ.ಅದು ಕನ್ನಡದ ಸಂದರ್ಭವಾಗಿರಬಹುದು,ಇಲ್ಲವೆ ಸಂಸ್ಕೃತ ಹಾಗೂ ಯಾವುದೇ ಭಾಷೆಯ ಸಂದರ್ಭವೂ ಆಗಿರಬಹುದು. ಕನ್ನಡ ಪದಕೋಶ ಸಂಸ್ಕೃತ,ಇಂಗ್ಲಿಷ್,ಗ್ರೀಕ್, ಲ್ಯಾಟೀನ್,ಪೋರ್ಚುಗೀಸ್,ಮರಾಠಿ,ಹಿಂದಿ,ಉರ್ದು, ಅರೇಬಿಕ್ ಮೊದಲಾದ ಭಾಷೆಗಳ ಪದಗಳನ್ನು ತನ್ನದಾಗಿಸಿಕೊಂಡಿದೆ.ಉದಾಹರಣೆಗೆ ಇಂಗ್ಲಿಷಿನ ಸ್ಕೂಲ್,ಬಸ್,ಕಾರ್,ಬುಕ್ ಎಂಬ ಪದಗಳು ಕನ್ನಡದಲ್ಲಿ ಇಸ್ಕೂಲ್,ಬಸ್ಸು,ಕಾರು,ಬುಕ್ಕು ಎಂದು ಆದಿಸ್ವರಾಗಮ ಹಾಗೂ ಸ್ವರಾಂತ್ಯ ಪ್ರಕ್ರಿಯೆಗೆ ಒಳಪಟ್ಟು ಬದಲಾವಣೆಗೊಂಡು ಕನ್ನಡ ಸಮಾಜದಲ್ಲಿ ಬಳಕೆಗೊಳ್ಳುತ್ತಿವೆ.ಚೌಕಾಸಿ,ಅಭಿಯಂತರ,ಆರಕ್ಷಕ,ಸಾಬೂನು,ಜಬರ‍್ದಸ್ತ್,ಗುಲಾಮ,ಅಲಮಾರು,ಕಛೇರಿ, ಅಸಲಿ,ನಕಲಿ,ರಸ್ತೆ ಮೊದಲಾದ ಪದಗಳು ಸಹ ಅದೇರೀತಿಯಲ್ಲಿ ಬಳಕೆಗೊಳ್ಳುತ್ತಿವೆ.

ಕೆಲವು ಸಂಶೋಧನಾರ್ಥಿಗಳು ಬೇರೆ ಭಾಷೆಯ ಅನೇಕ ಪದಗಳ ಬದಲಿಗೆ (ಅಭಿಯಂತರ, ಆರಕ್ಷಕ)ಕನ್ನಡ ಪದಗಳನ್ನೆ ರಚಿಸಬೇಕು.ಸೂರ್ಯ ಎಂಬುದು ಸಂಸ್ಕೃತ ಪದ ಅದಕ್ಕೆ ಪರಿಯಾಯವಾಗಿ ಕನ್ನಡದ್ದೇ ಪದದ ರಚನೆಯಾಗಿ ಜನರಿಗೆ ಪರಿಚಯವಾಗಬೇಕು ಎಂಬಂತಹ ಅಭಿಪ್ರಾಯವನ್ನು ಅಧ್ಯಯನದ ಸಂದರ್ಭದಲ್ಲಿ ಪ್ರಸ್ತುತ ಪಡಿಸುತ್ತಾರೆ. ಈ ರೀತಿ ಅಭಿಪ್ರಾಯ ಹೊಂದಿರುವ ಅಧ್ಯಯನಕಾರರು ಬೇರೆ ಭಾಷೆಯ ಪದಗಳ ವಿಚಾರದಲ್ಲಿ ಅಪಕಲ್ಪನೆಗೆ ಒಳಗಾಗಿ ಬೇರೆ ಭಾಷೆಯ ಪದಗಳ ಬಳಕೆ ಸಮಸ್ಯಾತ್ಮಕ ಎಂದೇ ಅಭಿಪ್ರಾಯಿಸುತ್ತಾರೆ.
ಮೊದಲೇ ಹೇಳಿದಂತೆ ಜಗತ್ತಿನೆಲ್ಲಾ ಭಾಷೆಯ ಪದಕೋಶದಲ್ಲಿ ಬೇರೆ ಬೇರೆ ಭಾಷೆಗಳ ಪದಗಳು ಒಳಗಾಗಿರುವಾಗ ಅಂತಹ ಪ್ರಕ್ರಿಯೆ ಕನ್ನಡದಲ್ಲಿ ನಡೆದರೆ ತಪ್ಪೇನು?ಅವು ಅರ್ಥದ ನೆಲೆಯಲ್ಲಾಗಲಿ, ಬಳಕೆಯ ನೆಲೆಯಲ್ಲಾಗಲಿ ತೊಂದರೆ ಉಂಟು ಮಾಡುತ್ತಿದ್ದರೆ ಅದರ ಬಳಕೆ ತನ್ನಷ್ಟಕ್ಕೆ ನಿಂತು ಹೋಗುತ್ತದೆ.ಉದಾಹರಣೆಗೆ ಸಂಸ್ಕೃತದ ಅಭಿಯಂತರ,ಆರಕ್ಷಕ ಎಂಬ ಪದಗಳ ಬಳಕೆ ಜನಬಳಕೆಯಲ್ಲಿ ಇಲ್ಲವಾಗಿ ಇಂಗ್ಲಿಶಿನ ಇಂಜಿನಿಯರ್ ಹಾಗೂ ಪೋಲೀಸ್ ಎಂಬ ಪದಗಳ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು.
ಭಾಷಿಕರು ಸೌಲಭ್ಯಾಕಾಂಕ್ಷಿಗಳು.ಭಾಷಾ ಬಳಕೆಯನ್ನು ಸುಲಭವಾಗಿಸಿಕೊಳ್ಳುವಲ್ಲಿ ನಿಪುಣರು ಅದರ ಪರಿಣಾಮವೇ ಕನ್ನಡ ವರ್ಣಮಾಲೆಯಲ್ಲಿನ ಋ ೠ ವರ್ಣಗಳ ಬಳಕೆ ನಿಂತುಹೋಗಿರುವುದು. ಆರಂಭದಲ್ಲಿ ೠ ಕಾರ ಸಂಪೂರ್ಣವಾಗಿ ಕೈಬಿಟ್ಟ ಭಾಷಿಕರು ಇತ್ತೀಚಿನ ದಿನಮಾನದಲ್ಲಿ ಋ ಕಾರವನ್ನು ಸಹ ೯೦% ಬಳಕೆಯಿಂದ ಕೈಬಿಟ್ಟಿರುವ ಉದಾಹರಣೆಯಿದೆ.ಋ ಕಾರದ ಕೆಲಸ ರ ಕಾರವೇ ನಿರ್ವಹಿಸುತ್ತಿದೆ.ಇದು ಅಕ್ಷರಗಳ ವಿಚಾರದಲ್ಲಿ ಮಾತ್ರವಲ್ಲದೇ ಅನೇಕ ಪದಗಳ ಸಂದರ್ಭದಲ್ಲಿಯೂ ನಡೆದಿದೆ.
ಇಲ್ಲಿ ನನ್ನ ಮಾತಿನ ಉದ್ದೇಶ ಹೊಸಪದಗಳ ರಚನೆ ತಪ್ಪು ಎಂದೊ,ಸರಿ ಎಂದೊ ಅಥವಾ ಬೇರೆ ನುಡಿಯ ಪದಗಳ ಎರವಲು ಪ್ರಕ್ರಿಯೆ ಸರಿ,ತಪ್ಪು ಎಂದು ಹೇಳುವುದಲ್ಲ.ಕನ್ನಡ ಪದಗಳು ಇದ್ದಾಗ ಅವುಗಳನ್ನೇ ಬಳಸೋಣ.ಹೊಸಪದಗಳನ್ನು ರಚಿಸುವ ಸಾಧ್ಯತೆಯಿದ್ದು,ಅವು ಬಳಕೆಗೆ ಯುಕ್ತವಾಗಿದ್ದರೆ ಹೊಸಪದಗಳನ್ನೂ ರಚಿಸಿಕೊಳ್ಳೋಣ.ಆದರೆ, ಕನ್ನಡದಲ್ಲಿ ಪದಗಳಿಲ್ಲದಿದ್ದರೂ,ಕನ್ನಡ ಪದರಚನೆಗೆ ಅವಕಾಶಗಳಿಲ್ಲದಿದ್ದರೂ,ಜನಬಳಕೆಗೆ ಕಷ್ಟವಾಗುತ್ತದೆ ಎಂದು ತಿಳಿದಿದ್ದರೂ ಕನ್ನಡ ಪದಗಳನ್ನೇ ರಚಿಸಬೇಕು ಎಂದು ವಾದಿಸುವುದು ಸರಿಯಲ್ಲ.ಈ ರೀತಿ ವಾದಿಸುತ್ತಾ ಹೋದರೆ ಜಗತ್ತಿನ ಯಾವ ನುಡಿಗಳ ನಡುವೆಯೂ ಕೋಡುಕೊಳ್ಳುವಿಕೆಯ ಸಂಬಂಧ ಏರ್ಪಡುವುದಿಲ್ಲ.ಭಾಷೆ ಜನಸ್ನೇಹಿಯಾಗಿರಬೇಕು. ಇಲ್ಲದಿದ್ದರೆ ಅಳಿವು ಉಳಿವಿನ ವಿಚಾರಗಳ ಬಗೆಗಿನ ಚರ್ಚೆಗಳು ಮುನ್ನೆಲೆಗೆ ಬರುತ್ತವೆ.

ರಚನೆ:ಲೋಹಿತೇಶ್ವರಿ ಎಸ್ ಪಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ