ಚಿತ್ತಾಪೂರ:ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕರಿಗೆ “ಜಿಲ್ಲೆಯಲ್ಲಿ ತಾಪಮಾನ ತೀವ್ರ ಏರಿಕೆಯಾಗಲಿದೆ” ಎಂದು ಭಾರತೀಯ ಹವಮಾನ ಇಲಾಖೆ ಮುನ್ನಚರಿಕೆ ನೀಡಿದೆ.
ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಸಾರ್ವಜನಿಕರು ಹೆಚ್ಚು ನೀರು,ಮಜ್ಜಿಗೆ ಅಥವಾ ಎಳೆನೀರು,ಹಣ್ಣಿನ ರಸ ಸೇವನೆ ಮಾಡುವುದು, ನೀರಿನ ಅಂಶ ಹೆಚ್ಚಾಗಿರುವ ತರಕಾರಿ,ಹಣ್ಣುಗಳನ್ನು ಸೇವಿಸುವುದು ಉತ್ತಮ,ಸಡಿಲವಾದ ತೆಳುಬಣ್ಣದ ಹತ್ತಿಯ ಬಟ್ಟೆ,ಗಾಳಿ ಹಾಡುವ ಪಾದರಕ್ಷೆ ಧರಿಸಿ,ಹೊರೆಗೆ ತೆರೆಳುವ ವೇಳೆ ಕಣ್ಣಿಗೆ ಕಷ್ಟ ಕನ್ನಡಕ ಧರಿಸಿ,ತಲೆಗೆ ಟೋಪಿ ಅಥವಾ ಟವಲ್ ಬಳಸಿ, ರೆಡಿಯೋ ಛತ್ರಿ ಹಾಗೂ ಸ್ಕಾರ್ಫ ದೂರದರ್ಶನ ಅಥವಾ ದಿನಪತ್ರಿಕೆಗಳ ಮೂಲಕ ಸ್ಥಳಿಯ ಹವಮಾನದ ಮಾಹಿತಿ ಪಡೆದು ಅದರಂತೆ ದೈನಂದಿನ ಚಟುವಟಿಕೆ ಯೋಜಿಸಿಕೊಳ್ಳಿ.
ಈ ಮೇಲಿನಂತೆ ಆರೋಗ್ಯಕರ ಟಿಪ್ಸ್ ಗಳನ್ನು ಅನುಸರಿಸಿ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಆರ್ ಮಾಂಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಮೊಹಮ್ಮದ್ ಅಲಿ,ಚಿತ್ತಾಪುರ