ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹೊರವಲಯದಲ್ಲಿ ತೆಲುಗುರ ದೊಡ್ಡ ರಂಗಪ್ಪ ಇವರಿಗೆ ಸೇರಿದ ಸುಮಾರು 20 ಕುರಿಗಳನ್ನು ತೋಳಗಳು ಬಲಿ ಪಡೆದಿವೆ.ಮಧ್ಯಾಹ್ನದ ಸಮಯದಲ್ಲಿ ಹಟ್ಟಿಗೆ ನುಗ್ಗಿ ಕುರಿ ಮರಿಗಳನ್ನ ತಿಂದುಹಾಕಿವೆ ಇನ್ನುಳಿದ ಕುರಿಗಳಿಗೆ ಸಣ್ಣಪುಟ್ಟ ತೀವ್ರ ಗಾಯಗಳಾಗಿದ್ದು ಸುಮಾರು ಒಂದು ಲಕ್ಷ ಮೌಲ್ಯದ ಕುರಿಗಳ ನಷ್ಟವಾಗಿವೆ ಎಂದು ತೆಲುಗರ ದೊಡ್ಡ ರಂಗಪ್ಪ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ರಾರಾವಿ ಗ್ರಾಮದ ಪಶು ವೈದ್ಯರಾದ ಶಿವರಾಜ ಅವರು ಸ್ಥಳಕ್ಕೆ ಬೇಟಿನೀಡಿ ಮಾಲಿಕರಿಗೆ ಸಾಂತ್ವನ ಹೇಳಿ ಸತ್ತ ಕುರಿಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಹಣವನ್ನ ನೇರವಾಗಿ ಬರುವಂತೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ.
