ಯಾದಗಿರಿ:ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ
ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಯಾದಗಿರಿ ಜಿಲ್ಲಾ ನೂತನ ಸದಸ್ಯರಾಗಿ ನೇಮಕರಾದ ಭಾರತ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಂಜಯ್ ಕುಮಾರ್ ಕವಲಿ ಮುಂಡರಗಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗ ಸಂಘಟನಾ ಕಾರ್ಯದರ್ಶಿ ಹಾಗೂ ಕುರಕುಂದಾ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷಾದ ಮಲ್ಲು ಹಲಗಿ ಅವರಿಂದ ಆತ್ಮೀಯವಾಗಿ ಶಾಲು ಹೊದಿಸಿ,ಹಾರ ಹಾಕಿ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಹಣಮಂತ ಮಾಲಹಳ್ಳಿ,ಸುರೇಶ ಹಾಲಗೇರಾ,ಮರಿಲಿಂಗಪ್ಪ ಹೊರಟೂರ,ಕುಮಾರ್ ತುಮಕೂರು,ಮಲ್ಲಪ್ಪ ಯಾದಗಿರಿ,ಭೀರಲಿಂಗಪ್ಪ ಪೂಜಾರಿ ಕುರಕುಂದಾ ಹಾಗೂ ಇನ್ನಿತರರು ಹಾಜರಿದ್ದರು.
