ಚೆಲುವೆ ನನ್ನ ಬಾಲೆ
ಸೌಂದರ್ಯ ನಲ್ಲೆಯ ಬಲ್ಲೆ
ಕಣ್ಣಿಗೆ ಹಚ್ಚಿದಾಳೆ ಕಾಡಿಗೆ!!ಪ!!
ಸುಂದರ ಸೊಂಟ ನನ್ನವಳದು
ಕೆಂಪು ಗಲ್ಲದ ಕನ್ಯೆ ಇವಳು
ಐದು ಅಡಿಯ ಸುಗಸಾದ ಹೆಣ್ಣು
ನೇರ ನುಡಿ ಇವಳದ್ದು
ಪ್ರೀತಿಗೆ ಏನು ಕಮ್ಮಿ ಇಲ್ಲ
ಮೃದುವಾದ ಮನಸ್ಸಿನ ಮಲ್ಲಿಗೆಯು
ನಾಚುವ ನಾರಿಯ ಖುಷಿ
ಮೆಚ್ಚಿ ಕಳಿಸಿದ್ದಾನೆ ನಿನ್ನನು
ಮುಚ್ಚು ಮರೆ ಇಲ್ಲದೆ ಹೇಳುವೆ
ಬರೆದಷ್ಟು ಪದಗಳು ಸಾಲದು
ಗುಣದಲ್ಲಿವು ಮನದಲ್ಲಿ ಒಳ್ಳೆವಳು
ಪ್ರೀತಿಯ ಭಾವ ತುಂಬಿದವಳು
ಕಣ್ಣು ಒದ್ದೆಯಾದರೆ ಮನಮಿಡಿಯುದು
ಚುಚ್ಚಿ ಮಾತನಾಡದೆ ಕಂಡವಳು
ಮೆಚ್ಚಿ ಬಂದವಳು ನನ್ನವಳು
-ಮಹಾಂತೇಶ ಖೈನೂರ