ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಹೆಬ್ಬಾಳ ಸಮೀಪ ಇರುವ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಕಪ್ಪಡಿ ರಾಜಾ ಅಪ್ಪಾಜಿ ಜಾತ್ರೆಯು ಶಿವರಾತ್ರಿ ಹಬ್ಬದ ದಿನ ಪ್ರಾರಂಭವಾಗಿ ದಿನಾಂಕ 4=4=2024ನೇ ಗುರುವಾರದಂದು ಸ್ವಾಮೀಜಿ ಕೊನೆಯ ಪೂಜೆ ನೆರವೇರಿಸಿ ಜಾತ್ರೆಯನ್ನು ಮುಕ್ತಾಯ ಮಾಡುತ್ತಾರೆ.
ಈ ಜಾತ್ರೆಗೆ ಮಳವಳ್ಳಿ,ಕೊಳ್ಳೇಗಾಲ,ಟಿ ನರಸೀಪುರ, ಮೈಸೂರು,ಮಂಡ್ಯ ಭಾಗದ ಜನರು ಅತಿ ಹೆಚ್ಚಾಗಿ ಆಗಮಿಸಿದ್ದು ಪವಾಡ ಪುರುಷ ಶ್ರೀ ಕಪ್ಪಡಿ ರಾಜಾ ಅಪ್ಪಾಜಿ ಮತ್ತು ರಾಜಮ್ಮನವರ ಜಾತ್ರೆಗೆ ಇರುಮುಡಿಯನ್ನು ಕಟ್ಟಿಕೊಂಡು ವಿಶೇಷ ಪೂಜೆಯನ್ನು ಮಾಡಿಸಿ ಅಲ್ಲಿ ಊಟದ ವ್ಯವಸ್ಥೆಯನ್ನು ಸಹ ಮಾಡುತ್ತಾರೆ.
ಈ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಬರುವಂತಹ ಭಕ್ತಾದಿಗಳಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಭಕ್ತಾದಿಗಳಿಗೆ ಸಕಲ ಸೌಕರ್ಯಗಳ ಜೊತೆ ನಿತ್ಯ ಅನ್ನದಾಸೋವನ್ನು ನೆರವೇರಿಸುತ್ತಾರೆ ಈ ಮಠಕ್ಕೆ ಹೆಬ್ಬಾಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅನ್ನದಾಸೋಹಕ್ಕೆ ಅಕ್ಕಿ ದವಸಧಾನ್ಯ ಈ ರೀತಿ ಸಹಕಾರ ನೀಡುತ್ತಾರೆ. ಮಠದ ಪೀಠಾಧ್ಯಕ್ಷರು ಮಾತನಾಡಿ ಈ ಬಾರಿ ವಿಶೇಷ ಜಾತ್ರೆಯಾಗಿದ್ದು ನಾಡಕೊಸ್ತಿ ರೈತರ ಕೃಷಿ ಮೇಳ ಹಾಗೂ ಈ ಜಾತ್ರೆಯಲ್ಲಿ ಮರೆಯಾಗಿದ್ದ
ಗಾಣದ ಎತ್ತು ತಿರುಗಿಸಿ ಕೆಮಿಕಲ್ ಮುಕ್ತ ಎಣ್ಣೆ ನೀಡುವುದು ಹಾಗೂ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮುಕ್ತವಾಗಿ ಮಾಡುವುದೇ ನಮ್ಮ ಉದ್ದೇಶ ಇದಕ್ಕಾಗಿ ಜಾತ್ರೆಗೆ ಅಂಗಡಿ ಮುಖಂಡರು ಹಾಕಿರುವಂತಹ ಎಲ್ಲಾ ವ್ಯಾಪಾರಸ್ಥರು ಕರೆದು ಇದರ ಬಗ್ಗೆ ಚರ್ಚಿಸಿ ಇದಕ್ಕೆ ಸಹಕಾರ ನೀಡಬೇಕೆಂದು ಕೇಳಿಕೊಂಡಿರುತ್ತೇವೆ ಎಂದು ತಿಳಿಸಿದರು.
ಇಲ್ಲಿಯ ಉಸ್ತುವಾರಿಯನ್ನು ಶ್ರೀ ವರ್ಚಸ್ ವಿ ಎಂ ಎಲ್ ಶ್ರೀಕಂಠ ಸಿದ್ದಲಿಂಗರಾಜ ಅರಸು ಆದಿ ಹೊನ್ನ ನಾಯಕನಹಳ್ಳಿ ಮಳವಳ್ಳಿ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳು ಇವರು ಈ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡು ಕಪ್ಪಡಿ ಕ್ಷೇತ್ರದ ಊರಿ ಗದ್ದಿಗೆ ಮೇಲೆ ಕುಳಿತು ಭಕ್ತಾದಿಗಳಿಗೆ ದರ್ಶನವನ್ನು ನೀಡುತ್ತಾ ಶ್ರೀ ಕಪ್ಪಡಿ ರಾಜಪ್ಪಾಜಿ ಶ್ರೀ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.ಈ ಜಾತ್ರೆಗೆ ಪೊಲೀಸ್ ಇಲಾಖೆ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಹಕರಿಸಿದರು ಎಂದು ತಿಳಿಸಿದರು.8.3.2024 ರಿಂದ 4.4.2024 ರವರೆಗೆ ನಡೆಯುವ ಜಾತ್ರೆಗೆ ಕೊನೆ ದಿನವಾಗಿರುತ್ತದೆ.
ವರದಿ ಆರ್ ಶಂಕರ್ ಹಂಡಿತವಳ್ಳಿ




















