ಬೆಂಗಳೂರು ಉತ್ತರ ವಲಯದ ವಿಠ್ಠಲ ಮಲ್ಯ ರೋಡ್ ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದ ಎಸ್ ಟಿ ಜೋಸೆಫ್ ಇಂಡಿಯನ್ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಕರ ಕಾರ್ಯಗಾರ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ 2026-2027ನೆ ಯ ಸಾಲಿನ ಹಲವಾರು ಕ್ರೀಡಾಕೂಟದ ಕಾರ್ಯಗಾರಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು ಹಾಗೂ ಈ ಕಾರ್ಯಕ್ರಮದ ಪ್ರಮುಖ ಅಧ್ಯಕ್ಷತೆಯನ್ನು ಡಿಡಿಪಿಐ ಕೆಜಿ ಅಂಜನಪ್ಪ ಹಾಗೂ gr md ಹುಸೇನ ಪೀರ್ ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಉಸ್ತುವಾರಿಯನ್ನು ದೈಹಿಕ ಶಿಕ್ಷಣ ವಿಭಾಗದ ಪರಿವೀಕ್ಷಣ ಅಧಿಕಾರಿ ಡಾ. ಸತೀಶ್ ಬಿ ಅವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು
- ಕರುನಾಡ ಕಂದ ಸುದ್ದಿ




















