ಗಂಡ ಹೆಂಡತಿಯರು ಗಂಧ ತೀಡಿದಾಗ ಹೊರಡುವ ಪರಿಮಳದಂತಿರಬೇಕು. ಅವರ ದಾಂಪತ್ಯದ ಏಕತೆಗೆ ಹಾಲು ನೀರು ಬೆರೆತಂತಿರಬೇಕು. ಸತಿಪತಿಗಳೊಂದಾಗಿ ಬಾಳಿದರೆ ಅಲ್ಲಿ ಸ್ವರ್ಗ ಸುಖ ಇರುವದು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ರಬಕವಿ ಬನಹಟ್ಟಿ ತಾಲೂಕಿನ ಸುಕ್ಷೇತ್ರ ಹೊಸೂರ ಗ್ರಾಮದ ಶ್ರೀ ಶಂಕರಾನಂದ ಪರಮಹಂಸರ ಶ್ರೀ ಮಠದಲ್ಲಿ 2026 ಶ್ರಾವಣ ಮಾಸದ ಪ್ರಯುಕ್ತ ನಡೆದ ಆಧ್ಯಾತ್ಮಿಕ ಚಿಂತನ, ಶ್ರೀಸಿದ್ಧಾರೂಢರ ಕಥಾಮೃತದ ಸುಧೆಯನ್ನು ನೀಡುತ್ತಾ ಏಕೋಭಾವದಿಂದ ಒಡಗೂಡಿ ಸಂಸಾರ ಮಾಡಿದವರಿಗೆ ಪುರುಷೋತ್ತಮನ ಪಾದಗಳ ಪೂಜಿಸಿದ ಫಲ ಪರದಲ್ಲಿಯೂ ಪ್ರಾಪ್ತವಾಗುತ್ತದೆ. ಧರ್ಮದಲ್ಲಿ ಒಂದಾಗಿ ಸಂಸಾರ ಮಾಡಿದರೆ ಸಾಕು ಸ್ವರ್ಗ ಸುಖ ಪ್ರಾಪ್ತವಾಗುತ್ತದೆ ಎಂದರು.
ಇದೆ ಸಂದರ್ಭಲ್ಲಿ ಅನೇಕರಿಗೆ ಶ್ರೀ ಸಿದ್ಧಾರೂಢರ ಕಥಾಮೃತ ಗ್ರಂಥ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಿಮ್ಮಣ್ಣ ಸಾಹುಕಾರ ನಿಂಗಸಾನಿ, ಶ್ರೀಶೈಲ ನಾಗರಾಳ, ತಿಪ್ಪಣ್ಣ ಗೋಠೆ, ಲಕ್ಕಪ್ಪ ಕುಂಬಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೊಸೂರ, ರಬಕವಿ, ರಾಂಪೂರ, ಬನಹಟ್ಟಿ ಮುಂತಾದ ಗ್ರಾಮದ ಕಲಾವಿದರರಿಂದ ಭಜನಾಸೇವೆ ಜರುಗಿತು.
ಪರಮಪೂಜ್ಯ ಶ್ರೀ ಪರಮಾನಂದ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.
- ಕರುನಾಡ ಕಂದ ಸುದ್ದಿ




















